spot_img
spot_img

ರಾಜೀವ್ ಹಾಗೂ ದೇವರಾಜ ಅರಸು ಜಯಂತಿ ಆಚರಣೆ

Must Read

spot_img

ಸಿಂದಗಿ: ಪಟ್ಟಣದ ಕಾಂಗ್ರೆಸ್ ಪಕ್ಷದ ಕಾರ್ಯಾಲಯದಲ್ಲಿ ಮಾಜಿ ಪ್ರಧಾನಿ ರಾಜೀವಗಾಂಧಿ, ಮಾಜಿ ಸಿಎಂ ಡಿ.ದೇವರಾಜ ಅರಸು ಅವರ ಜಯಂತಿ ಆಚರಿಸಿದರು.

ನಂತರ  ಪತ್ರಕರ್ತರೊಂದಿಗೆ ಮಾತನಾಡಿದ ತಾಲೂಕಾಧ್ಯಕ್ಷ ವಿಠ್ಠಲ ಕೊಳ್ಳುರ, ಕಾಂಗ್ರೆಸ್ ಪಕ್ಷದ ಮಹಾನ್ ನಾಯಕರ ತ್ಯಾಗ ಬಲಿದಾನದಿಂದ ಅಸ್ಥಿತ್ವದಲ್ಲಿರುವ ಸರಕಾರದ ಮಾಜಿ ಪ್ರಧಾನಿ ರಾಜೀವ ಗಾಂಧಿ ಹಾಗೂ ಸಾಮಾಜಿಕ ಹರಿಕಾರ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸ್ಸುರವರ ಕೊಡುಗೆ ಅಪಾರ ಎಂದರು.

ವಿಪಕ್ಷ ನಾಯಕ ಸಿದ್ದರಾಮಯ್ಯ ಕಾರಿನ ಮೇಲೆ ಬಿಜೆಪಿ ಕಾರ್ಯಕರ್ತರು ಮೊಟ್ಟೆ ದಾಳಿ ನಡೆಸಿ ಅವರ ವಿರುದ್ಧವೂ ಬಿಜೆಪಿ ಕಾರ್ಯಕರ್ತರು ಸಿದ್ದು ಗೋಬ್ಯಾಕ್ ಚಳವಳಿ ನಡೆಸಿ ಅವರನ್ನು ಅವಮಾನಿಸಿದ್ದು ಕಾಂಗ್ರೆಸ್ ಪಕ್ಷ ಉಗ್ರವಾಗಿ ಖಂಡಿಸುತ್ತದೆ. ಈ ಘಟನೆ ಬೆನ್ನಲ್ಲೇ ಕಾಂಗ್ರೆಸ್ ಕಾರ್ಯಕರ್ತರು ರಾಜ್ಯಾದ್ಯಂತ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದು, ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಜಾತಿಯ ವಿಷ ಬೀಜ ಬಿತ್ತಿ ಸಾಂಸ್ಕೃತಿಕ ಬೀಡಾದ ರಾಜ್ಯದಲ್ಲಿ ಅಶಾಂತಿ ಹುಟ್ಟುಹಾಕುವಂತ ಕಾರ್ಯಕ್ಕೆ ಕೈ ಹಾಕಿ ಧರ್ಮದ ಹೆಸರಿನಲ್ಲಿ ಜನಜೀವನ ಅಸ್ತವ್ಯಸ್ತಗೊಳಿಸುವ ಯತ್ನಗಳು ನಿರಂತರವಾಗಿ ನಡೆಯುತ್ತಿವೆ. ಇಂತಹ  ದುರಾಡಳಿತದಿಂದ ಸರಕಾರದಿಂದ ಜನರು   ರೋಸಿಹೋಗಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ಮುಸ್ತಾಕ ಮುಲ್ಲಾ, ಮಹಿಬೂಬ ತಾಂಬೋಳಿ, ಗೋಲ್ಲಾಳಪ್ಪಗೌಡ ಪಾಟೀಲ ಮಾಗಣಗೇರಿ, ಸಿದ್ದಣ್ಣ ಹಿರೇಕುರಬರ, ಆಲಮೇಲ ಅಧ್ಯಕ್ಷ ಅಯೂಬ ದೇವರಮನಿ, ರಾಜಶೇಖರ ಕೂಚಬಾಳ, ಶಿವನಗೌಡ ಬಿರಾದಾರ, ನಿಂಗಣ್ಣ ಚಟ್ಟಿ, ಮುನ್ನಾ ಬೈರಾಮಡಗಿ, ಶಾರದಾ ಬೆಟಗೇರಿ, ಮಲ್ಲು ಗತ್ತರಗಿ, ಸೈಪನ್ ನಾಟೀಕಾರ, ಇರ್ಫಾನ ಮುಲ್ಲಾ, ಇರ್ಫಾನ ಆಳಂದ, ಭೀಮು ವಾಲಿಕಾರ, ಸಲೀಮ ಕಣ್ಣಿ,  ಯಲ್ಲು ಕೆರಕಿ, ಮಹಾದೇವ ಗುಬ್ಬೇವಾಡ, ನಯೂಮ ತಾಂಬೋಳಿ, ಮಾಂತೇಶ ಅಮ್ಮಾಗೋಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

- Advertisement -
- Advertisement -

Latest News

ಪಂಚಮಸಾಲಿ ಸಮಾಜದ ಹೋರಾಟಕ್ಕೆ ಬೆಂಬಲ ಘೋಷಿಸಿದ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಕೂಡಲ ಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ಜೊತೆ ದೂರವಾಣಿ ಮೂಲಕ ಮಾತನಾಡಿ ಹೋರಾಟಕ್ಕೆ ಸಹಕಾರ ಘೋಷಣೆ ಮೂಡಲಗಿ: ಕೂಡಲಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ನೇತೃತ್ವದಲ್ಲಿ ಪಂಚಮಸಾಲಿ ಸಮಾಜಕ್ಕೆ...
- Advertisement -

More Articles Like This

- Advertisement -
close
error: Content is protected !!