ಚಿಕ್ಕಮಗಳೂರು ಜಿಲ್ಲಾ ಬರಹಗಾರರ ಸಂಘದಿಂದ ರಾಜ್ಯೋತ್ಸವ ಕಾರ್ಯಕ್ರಮ

Must Read

ಚಿಕ್ಕಮಗಳೂರು – ಚಿಕ್ಕಮಗಳೂರಿನ ಬರಹಗಾರರ ಸಂಘದ ವತಿಯಿಂದ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮವನ್ನು ಬಹಳ ಅದ್ದೂರಿಯಾಗಿ ಆಚರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಿಕ್ಕಮಗಳೂರು ಜಿಲ್ಲೆಯ ಬರಹಗಾರ ಸಂಘದ ಅಧ್ಯಕ್ಷರಾದ ಡಾ. ವಿದ್ಯಾ. ಕೆ ರವರು ವಹಿಸಿದ್ದು ಕಾರ್ಯಕ್ರಮದ ಉದ್ಘಾಟನೆಯನ್ನು ಚಿಕ್ಕಮಗಳೂರಿನ ಯುರೇಕಾ ಅಕಾಡೆಮಿಯ ಸಂಸ್ಥಾಪಕರಾದ ದೀಪಕ ದೊಡ್ಡಯ್ಯ, ವೇದಿಕೆಯ ಮೇಲಿನ ಗಣ್ಯರು ನೆರವೇರಿಸಿದರು.

ಪ್ರಾರ್ಥನೆ ರಾಕೇಶ್ ಸಿಂಗ್ ಮಾಡಿದರು. ಪ್ರಾಸ್ತಾವಿಕ ನುಡಿ ಚಿಕ್ಕಮಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಧಾನ ಸಂಚಾಲಕರು  ಹೆಚ್. ಎನ್ ಶಾಂತಕುಮಾರ ಹಾಗೂ ಮೂಡಿಗೆರೆಯ ಸರ್ಕಾರಿ ಪ್ರೌಢಶಾಲೆ ಉಪ ಪ್ರಾಂಶುಪಾಲರಾದ ಡಾ. ಜಗದೀಶ್ ನಾಯಕ ಪ್ರಧಾನ ಉಪನ್ಯಾಸ ನೀಡಿದರು.

ಡಾ. ವಿದ್ಯಾ. ಕೆ ಅಧ್ಯಕ್ಷರ ನುಡಿ ನುಡಿದರು. ರವಿ ಕುನ್ನಳ್ಳಿ, ಅಧ್ಯಕ್ಷರು ಕರ್ನಾಟಕ ಜನಪದ ಪರಿಷತ್ ಮೂಡಿಗೆರೆ. ಗೌರವ ಸಲಹೆಗಾರರು ಬರಹಗಾರ ಸಂಘ ಚಿಕ್ಕಮಗಳೂರು, ಡಿ.ಕೆ. ಲಕ್ಷ್ಮಣ ಗೌಡ್ರು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು ಮೂಡಿಗೆರೆ, ಈ ಸುಬ್ರಹ್ಮಣ್ಯ ಗೌರವಾಧ್ಯಕ್ಷರು ಕ. ಜಾ. ಪ. ಮೂಡಿಗೆರೆ, ಕೆ ಕೆ ಪ್ರದೀಪ್ ಕುಮಾರ್ ಜೆಸಿ ಅಧ್ಯಕ್ಷರು ಮೂಡಿಗೆರೆ, ಹಸೈನಾರ್ ಕಾಫಿ ನಾಡು ಸಮಾಜ ಸೇವಕರು ಮೂಡಿಗೆರೆ, ರವೀಂದ್ರ ಬಕ್ಕಿ ನಿಕಟಪೂರ್ವ ಜನಪದ ಅಧ್ಯಕ್ಷರು ವಿಜಯ ಕುಮಾರ ಚಿಕ್ಕಮಗಳೂರು ಜಿಲ್ಲೆಯ ಬರಹಗಾರರ ಸಂಘದ ತಾಲೂಕು ಅಧ್ಯಕ್ಷರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪ್ರಕಾಶ ಆರ್ ಅವರ ಶಿಕ್ಷಣ ಕ್ಷೇತ್ರದ ಸಾಧನೆ ಗುರುತಿಸಿ ಸನ್ಮಾನಿಸಲಾಯಿತು,
ಜನಪದ ಕ್ಷೇತ್ರದ ಸಾಧನೆ ಗುರುತಿಸಿ ಉತ್ತಮ ಗಾಯಕ ಪ್ರಶಸ್ತಿ ಸುಬ್ರಹ್ಮಣ್ಯ, ಹಾಗೂ ವೆಂಕಟೇಶ ರವರಿಗೆ ನೀಡಲಾಯಿತು, ಪ್ರೇಮ ಪುಣ್ಯಮೂರ್ತಿರವರಿಗೆ ಲೇಖಕಿ ಪ್ರಶಸ್ತಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಹೆಚ್ಚಿನ ಅಂಕವನ್ನು ಪಡೆದು ಉತ್ತೀರ್ಣರಾದಂತಹ ಶ್ರಾವ್ಯ ಎಸ್. ಕುಮಾರ ರನ್ನು ಸನ್ಮಾನಿಸಲಾಯಿತು.

ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿಜಯಕುಮಾರ, ಕಾಂಚನ, ರಾಕೇಶ ಸಿಂಗ್, ವೆಂಕಟೇಶ, ಕುಮಾರಿ ಅಕ್ಷರ, ಕೃಷ್ಣ, ಅಶ್ವಿನಿ, ಭಾಗವಹಿಸಿ ಕಾರ್ಯಕ್ರಮ ಅದ್ದೂರಿಯಾಗಿ ನಡೆಸಿಕೊಟ್ಟರು.

Latest News

ವಿದ್ಯಾರ್ಥಿಗಳು ನೈತಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು – ರಾಮಚಂದ್ರ ಕಾಕಡೆ

ಮೂಡಲಗಿ- ವಿದ್ಯಾರ್ಥಿಗಳು ಎಲ್ಲಾ ರಂಗಗಳಲ್ಲಿ ಸಾಧನೆ ಮಾಡುವುದರೊಂದಿಗೆ ಗುಣ ಮಟ್ಟದ ಶಿಕ್ಷಣ ಪಡೆದು ಮಾನವೀಯ ನೈತಿಕ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಗುಣಮಟ್ಟದ ಸ್ಥಾನ ಪಡೆಯಲು...

More Articles Like This

error: Content is protected !!
Join WhatsApp Group