spot_img
spot_img

ಜನುಮ- ಜನುಮದ ಅನುಬಂಧ ಈ ರಕ್ಷಾ ಬಂಧನ – ಶಾಸಕ ಬಾಲಚಂದ್ರ ಜಾರಕಿಹೊಳಿ

Must Read

- Advertisement -

ಗೋಕಾಕ –  ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ರಕ್ಷಾ ಬಂಧನಕ್ಕೆ ವಿಶೇಷ ಮಹತ್ವವಿದ್ದು, ಸಹೋದರ- ಸಹೋದರಿಯರ ಪ್ರೀತಿ, ವಾತ್ಸಲ್ಯವನ್ನು ಬಿಂಬಿಸುವ ಹಬ್ಬವಾಗಿದೆ ಎಂದು ಅರಭಾವಿ ಶಾಸಕ ಮತ್ತು ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು.

ಸೋಮವಾರದಂದು ನಗರದ ಹೊಸಪೇಟೆ ರಸ್ತೆಯಲ್ಲಿರುವ ತಮ್ಮ ಲಕ್ಷ್ಮೀ ನಿವಾಸದಲ್ಲಿ ಸಹೋದರಿಯವರಿಂದ ರಾಖಿ ಕಟ್ಠಿಸಿಕೊಂಡು ಮಾತನಾಡಿದ ಅವರು, ಪ್ರತೀ ವರ್ಷವೂ ಈ ರಾಖಿ ಹಬ್ಬವನ್ನು ನಾವೆಲ್ಲ ಆಚರಿಸಿಕೊಂಡು ಬರುತ್ತಿದ್ದೇವೆ ಎಂದು ತಿಳಿಸಿದರು.

ಪ್ರತಿಯೊಬ್ಬ ಸಹೋದರಿಯರು ಸಮಾಜದ ದುಷ್ಟ ಶಕ್ತಿಗಳಿಂದ ರಕ್ಷಿಸಲೆಂದು ತಮ್ಮ ಸಹೋದರರಿಗೆ ರಾಖಿಯನ್ನು ಕಟ್ಟುತ್ತಾರೆ. ಪ್ರತಿಯಾಗಿ ಸಹೋದರರು ಕೂಡ ತಮ್ಮ ಭ್ರಾತೃತ್ವ ಪ್ರೀತಿಯನ್ನು ಉಜ್ವಲಗೊಳಿಸಲು ಸಹೋದರಿಯರಿಗೆ ಬೆನ್ನೆಲುಬು ನಿಲ್ಲುತ್ತಾರೆ ಎಂದು ತಿಳಿಸಿದರು.

- Advertisement -

ಪ್ರಾಚೀನ ಕಾಲದಿಂದಲೂ ಶ್ರಾವಣ ಮಾಸದಲ್ಲಿ ಆಚರಿಸುವ ರಕ್ಷಾ ಬಂಧನವು ಒಡ ಹುಟ್ಟಿದವರ ನಡುವಿನ ವಾತ್ಸಲ್ಯವನ್ನು ಬಿಂಬಿಸುವ ಹಬ್ಬವೇ ಈ ರಕ್ಷಾ ಬಂಧನವಾಗಿದೆ ಎಂದು ಅವರು ಹೇಳಿದರು. ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಸಹೋದರಿಯಾದ ಲಕ್ಷ್ಮಿ ಅವರು ಬಾಲಚಂದ್ರ ಜಾರಕಿಹೊಳಿ ಅವರಿಗೆ ಹಣೆಗೆ ತಿಲಕವನ್ನಿಟ್ಟು ಆರತಿಯನ್ನು ಬೆಳಗಿ ಅವರಿಗೆ ರಾಖಿಯನ್ನು ಕಟ್ಟುವ ಮೂಲಕ ಈ ಮಹತ್ವಪೂರ್ಣ ರಕ್ಷಾ ಬಂಧನ ಹಬ್ಬಕ್ಕೆ ಸಾಕ್ಷಿಯಾದರು.
ಈ ಸಂದರ್ಭದಲ್ಲಿ ಲಕ್ಷ್ಮೀ ನಾಯಕ ಅವರ ಪುತ್ರ ಅಭಿಷೇಕ ಮತ್ತು ಪುತ್ರಿ ಅರುಣಾ ಅವರು ಉಪಸ್ಥಿತರಿದ್ದರು.

- Advertisement -
- Advertisement -

Latest News

ಕಲ್ಲು ಮಠದ ಶ್ರೀ ಪ್ರಭು ಸ್ವಾಮಿಗಳ ಲಿಂಗ ದೇವರ ಲೀಲಾ ವಿಳಾಸ ಚಾರಿತ್ರ

ಅಂತಾರಾಷ್ಟ್ರೀಯ ಬಸವ ತಿಳಿವಳಿಕೆ ಮತ್ತು ಸಂಶೋಧನಾ ಕೇಂದ್ರ ಪುಣೆ ವಚನ ಅಧ್ಯಯನ ವೇದಿಕೆ ಮತ್ತು ಅಕ್ಕನ ಅರಿವು ಬಳಗದ ಸಂಯುಕ್ತ ಆಶ್ರಯದಲ್ಲಿ ಕಲ್ಲು ಮಠದ ಶ್ರೀ...
- Advertisement -

More Articles Like This

- Advertisement -
close
error: Content is protected !!
Join WhatsApp Group