spot_img
spot_img

ಎಸ್ ಟಿ ಪ್ರಮಾಣ ಪತ್ರ ನೀಡದ ಸರ್ಕಾರದ ವಿರುದ್ಧ ರ್ಯಾಲಿ

Must Read

- Advertisement -

ಸಿಂದಗಿ– ಕೋಲಿ, ತಳವಾರ, ಪರಿವಾರ ಸಮುದಾಯಕ್ಕೆ ಎಸ್ಟಿ ಪ್ರಮಾಣ ಪತ್ರ ನೀಡುವಲ್ಲಿ ರಾಜ್ಯ ಸರ್ಕಾರ ಅನ್ಯಾಯ ಮಾಡುತ್ತಿದೆ ಕೂಡಲೇ ರಾಜ್ಯ ಸರ್ಕಾರ ಕೊಟ್ಟ ಭರವಸೆಯನ್ನು ಈಡೇರಿಸುವಂತೆ ತಾಲೂಕಿನ ಕೋಲಿ, ತಳವಾರ, ಪರಿವಾರ ಸಮುದಾಯದ ಸಾವಿರಾರು ಜನ ಸೋಮವಾರ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿದರು.

ಪಟ್ಟಣದ ಡಾ. ಅಂಬೇಡ್ಕರ್ ವೃತ್ತದಿಂದ ಪ್ರಾರಂಭಗೊಂಡ ಪ್ರತಿಭಟನಾ ಮೆರವಣಿಗೆ ವಿಜಯಪುರ ರಸ್ತೆಯ ಮಾರ್ಗವಾಗಿ ತಹಶೀಲ್ದಾರ ಕಛೇರಿಗೆ ಬಂದು ತಲುಪಿತು. ಪ್ರತಿಭಟನೆಯಲ್ಲಿ ಮೂಲ ಸಮುದಾಯದ ವೇಷಭೂಷಣವಾದ ಅರೆಬೆತ್ತಲೆಗೆ ಬೇವಿನ ಸೊಪ್ಪು ಕಟ್ಟಿಕೊಂಡು ಕೈಯಲ್ಲಿ ಕೋಲು ಹಿಡಿದುಕೊಂಡು ದಾರಿಯುದ್ದಕ್ಕು ಮಾತಿಗೆ ತಪ್ಪಿದ ರಾಜ್ಯ ಸರಕಾರದ ವಿರುದ್ದ ಘೋಷಣೆಗಳನ್ನು ಕೂಗುತ್ತ ಎಸ್‍ಟಿ ಸರ್ಟಿಫಿಕೇಟ್ ನೀಡುವಂತೆ ಆಗ್ರಹಿಸಿ ತಹಶೀಲ್ದಾರ ನಿಂಗಣ್ಣ ಬಿರಾದಾರ ಅವರ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಡಾ. ದಸ್ತಗೀರ ಇಂಗಳಗಿ ಮಾತನಾಡಿ, ಕೇಂದ್ರ ಸರ್ಕಾರ ಈ ಸಮುದಾಯವನ್ನು ಎಸ್ಟಿ ಗೆ ಸೇರಿಸಿ ಆದೇಶ ಹೊರಡಿಸಿದ್ದರು ಕೂಡಾ ರಾಜ್ಯ ಸರ್ಕಾರದ ಕೆಲ ನಾಯಕರುಗಳ ಒತ್ತಡಕ್ಕೆ ಮಣಿದು ಇಲ್ಲಿಯವರೆಗು ಈ ಸಮುದಾಯಕ್ಕೆ ಎಸ್ಟಿ ಪ್ರಮಾಣ ಪತ್ರ ನೀಡುತ್ತಿಲ್ಲ. ಸಿಂದಗಿ ಉಪ ಚುನಾವಣೆಯಲ್ಲಿ ತಳವಾರ ಸಮುದಾಯಕ್ಕೆ ಕೆಲವೆ ದಿನಗಳಲ್ಲಿ ಎಸ್ಟಿ ಪ್ರಮಾಣ ಪತ್ರ ನೀಡುವ ಭರವಸೆ ನೀಡಿ ಈ ಸಮುದಾಯದ ಮತಗಳನ್ನು ಬಿಜೆಪಿಗೆ ಗಿಟ್ಟಿಸಿಕೊಂಡು ಗೆಲವು ಸಾಧಿಸಿದ ಶಾಸಕ ರಮೇಶ ಭೂಸನೂರ ಈ ಸಮುದಾಯದ ಕಡೆಗೆ ಕಿಂಚಿತ್ತು ಕಾಳಜಿ ಮಾಡದೇ ಅನ್ಯಾಯ ಮಾಡಿದ್ದಾರೆ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಸಿಂದಗಿ ಶಾಸಕರು ಮತ್ತು ರಾಜ್ಯ ಸರ್ಕಾರ ಈ ಸಮುದಾಯ ರವರೊಂದಿಗೆ ಡ್ರಾಮಾ ಮಾಡುತ್ತಿರುವುದು ನಮಗೆ ಸ್ಪಷ್ಟವಾಗಿ ಕಾಣುತ್ತಿದೆ. ಸಿಎಂ ಬಸವರಾಜ ಬೊಮ್ಮಾಯಿ ಅವರು ಉಪ ಚುನಾವಣೆಯ ಸಂದರ್ಭದಲ್ಲಿ ಈ ಸಮಾಜಕ್ಕೆ ಆಸೆ ಹುಟ್ಟಿಸಿ ಮತ ಪಡೆದು ಈ ಮತ್ತೆ ಸಾರ್ವತ್ರಿಕ ಚುನಾವಣೆಯಲ್ಲಿ ಇದೇ ಭರವಸೆ ಮುಂದಿಟ್ಟುಕೊಂಡು ಮತ ಬೇಟೆಗೆ ಬರುವ ಹುನ್ನಾರದಲ್ಲಿದ್ದಾರೆ ಹಿಂದೆ ಮಾಡಿದ ತಪ್ಪನ್ನು ಮುಂದೆ ಮಾಡಲಾರರು ಈ ಡೊಂಗಿ ನಾಟಕ ಬಿಡಿ ಎಂದು ವ್ಯಂಗ್ಯವಾಡಿದರು.

- Advertisement -

ಪ್ರತಿಭಟನೆಯ ನೇತೃತ್ವ ವಹಿಸಿದ ಸಮಾಜದ ಮುಖಂಡ ಶಿವಾಜಿ ಮೇಟಗಾರ, ಡಿಎಸ್‍ಎಸ್ ಸಂಚಾಲಕ ವಾಯ್.ಸಿ.ಮಯೂರ, ಕುರುವ ಸಮಾಜದ ಅಧ್ಯಕ್ಷ ನಿಂಗಣ್ಣ ಬಿರಾದಾರ, ಮಾಜಿ ಶಾಸಕ ಶರಣಪ್ಪ ಸುಣಗಾರ ಮಾತನಾಡಿ, ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಸಿಂದಗಿ ಉಪ ಚುನಾವಣೆಯಲ್ಲಿ ಸುಳ್ಳು ಭರವಸೆ ನೀಡಿ ಅನ್ಯಾಯ ಮಾಡಿದ್ದಾರೆ ಮುಂದಿನ ದಿನಗಳಲ್ಲಿ ಬಿಜೆಪಿ ಸರ್ಕಾರಕ್ಕೆ ಈ ಸಮುದಾಯದಿಂದ ತಕ್ಕ ಉತ್ತರ ನೀಡಲಿದ್ದೇವೆ. ಎಸ್ಟಿ ಪ್ರಮಾಣ ಪತ್ರ ನೀಡುವುದು ಭಿಕ್ಷೆಯಲ್ಲ ಅದು ನಮ್ಮ ಹಕ್ಕು. ಸಿಂದಗಿ ಮತಕ್ಷೇತ್ರದಲ್ಲಿ ಸುಮಾರು 36 ಸಾವಿರಕ್ಕೂ ಅಧಿಕ ಜನಸಂಖ್ಯೆಯಲ್ಲಿ ಈ ಸಮುದಾಯ ವಿದೆ ಚುನಾವಣೆ ಬಂದಾಗ ಮಾತ್ರ ಈ ಸಮೂದಾಯ ನೆನಪು ನಂತರ ನಾವು ಪಡುವ ಕಷ್ಟಗಳು ಅವರಿಗೆ ಬೇಡವಾಗಿವೆ. ಪ್ರಸ್ತುತ ಶಿಕ್ಷಣ ಇಲಾಖೆಯಲ್ಲಿ ಅನೇಕ ಹುದ್ದೆಗಳಿಗೆ ಅರ್ಜಿ ಕರೆದಿದ್ದಾರೆ ಆದರೆ ಇಲ್ಲಿಯವರೆಗೂ ಈ ಸಮುದಾಯಕ್ಕೆ ಎಸ್ಟಿ ಪ್ರಮಾಣ ಪತ್ರ ಸಿಕ್ಕಿಲ್ಲ ಅವರುಗಳ ಪರಿಸ್ಥಿತಿ ಏನು ಎಂದ ಅವರು ಶಾಸಕ ರಮೇಶ ಭೂಸನೂರ ಇಲ್ಲಿಯ ವರೆಗೂ ನ್ಯಾಯ ಕೊಡಿಸುವಲ್ಲಿ ವಿಫಲರಾಗಿದ್ದಾರೆ ಅವರಿಗೆ ಮುಂಬರುವ ದಿನಗಳಲ್ಲಿ ತಕ್ಕ ಉತ್ತರ ಈ ಸಮುದಾಯ ನೀಡಲಿದೆ ಕೂಡಲೇ ಈ ಸಮುದಾಯಕ್ಕೆ ರಾಜ್ಯ ಸರ್ಕಾರ ಎಸ್ಟಿ ಪ್ರಮಾಣ ಪತ್ರವನ್ನು ನೀಡಬೇಕು ಇಲ್ಲವಾದಲ್ಲಿ ಬೆಂಗಳೂರ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಸಮುದಾಯದ ಮುಖಂಡರಾದ ಮಡಿವಾಳ ನಾಯ್ಕೋಡಿ, ಸುರೇಶಗೌಡ ಧೂಳಖೇಡ, ಧರ್ಮರಾಜ ಯಂಟಮಾನ, ಹುಚ್ಚಪ್ಪ ತಳವಾರ, ರಾಜು ಮಾದರ, ಬಸರವಾಜ ಯರನಾಳ, ಮಹಾಂತೇಶ ನಾಯ್ಕೋಡಿ, ಅನೀಲ ಕಡಕೋಳ, ಶಿವಣ್ಣ ಕೋಟರಗಸ್ತಿ, ವಿಜಯಕುಮಾರ ಯಾಳವಾರ, ಪರುಶುರಾಮ ಉಪ್ಪಾರ, ಅಮೀತ ಚವ್ಹಾಣ, ಭಾಗಣ್ಣ ಕೆಂಭಾವಿ, ನಾಗು ತಳವಾರ, ಮಲ್ಲು ನಾಯ್ಕೋಡಿ, ಮಲ್ಲಿಕಾರ್ಜುನ ಸಾವಳಸಂಗ, ಲಕ್ಷ್ಮಣ ಕಲಾಲ, ಪುಂಡಲೀಕ ಬಿರಾದಾರ, ಚಿದಾನಂದ ನಾಯ್ಕೋಡಿ, ಪರುಶುರಾಮ ನಾಯ್ಕೋಡಿ, ಅಶೋಕ ರೋಡಗಿ, ಮಂಜುನಾಥ ಯಂಕಂಚಿ, ಸುನೀಲ ತಳವಾರ ಸೇರಿದಂತೆ ಅನೇಕ ಜನರು ಭಾಗವಹಿಸಿದ್ದರು.

- Advertisement -
- Advertisement -

Latest News

‘Silent killer’ ಎಂದು ಕರೆಯಲ್ಪಡುವ ಒಂದು ಹಾವುಂಟು !

ಈ ಹಾವನ್ನು ಈ ರೀತಿ ಕರೆಯಲು ಹಲವು ಕಾರಣಗಳುಂಟು. ಈ ಹಾವು ರಾತ್ರಿ ವೇಳೆಯಲ್ಲಿಯೇ ಹೆಚ್ಚು ಓಡಾಟ ಮಾಡುವುದು (ನಿಶಾಚರಿ). ಮತ್ತೆ ಈ ಹಾವು ಮನುಷ್ಯರಿಗೆ...
- Advertisement -

More Articles Like This

- Advertisement -
close
error: Content is protected !!
Join WhatsApp Group