ಜೀವನ ಮೌಲ್ಯಗಳನ್ನು ರಾಮಾಯಣ ಒಳಗೊಂಡಿದೆ – ರತ್ನಾ ಆನಂದ ಮಾಮನಿ

Must Read

ಆಹಾರ ಧಾನ್ಯದ ಕಿಟ್ ವಿತರಣೆ

ಸವದತ್ತಿ - ಕೋರೋನಾ ರೋಗ ಹರಡದಂತೆ ನೋಡಿಕೊಳ್ಳಲು ಸರಕಾರ ಲಾಕ್ ಡೌನ ಮಾಡಿದ್ದರಿಂದ ನಮ್ಮ ಬ್ರಾಹ್ಮಣ ಸಮಾಜದ ಕುಟುಂಬದವರಿಗೆ ಜೀವನ ಸಾಗಿಸಲು ತುಂಬಾ ಕಷ್ಟವಾಗಿದ್ದು ಆದ್ದರಿಂದ...

ಅಧ್ಯಾತ್ಮ ವಿದ್ಯೆ ಮಕ್ಕಳ ಮೂಲ ಶಿಕ್ಷಣವಾಗಬೇಕು

ಭೂಮಿಯ ಮೇಲಿರುವ ಮಾಯೆ ಎಲ್ಲರಿಗೂ ಮಂಕು ಮಾಡುತ್ತದೆ ಎನ್ನುವುದಕ್ಕೆ ನಮ್ಮ ಅನುಭವವೇ ಸಾಕ್ಷಿ. ಇಲ್ಲಿ ಯಾರೋ ಹಿಂದೆ ಅನುಭವಿಸಿ, ಹೇಳಿ, ಬರೆದಿಟ್ಟ ಸತ್ಯವನ್ನು ನಾವು ಬಹಳ...

ಅರುಣ ಕಿರಣ ಪ್ರತಿದಿನ

. . .🕉. . . . || ಶ್ರೀ ಗುರುಭ್ಯೋ ನಮಃ || || ಓ೦ ಗ೦ ಗಣಪತಯೇ ನಮಃ || 🙏ಶುಭೋದಯ🙏 16: 06: 2021 ಬುಧವಾರ ಕಲಿಯುಗಾಬ್ದ...

ಸವದತ್ತಿಃ ಸತ್ಯ ನ್ಯಾಯಬದ್ಧತೆ,ಗುರು ಹಿರಿಯರಲ್ಲಿ ಗೌರವ ಭಾವ,ದೈವನಿಷ್ಠೆ,ಪ್ರಾಮಾಣಿಕತೆ ಮೊದಲಾದ ಗುಣಗಳ ಪ್ರತೀಕ ಶ್ರೀ ರಾಮ. ರಾಮಾಯಣ ಜೀವನದ ಮೌಲ್ಯಗಳನ್ನು ಒಳಗೊಂಡಿದೆ. ನಾವು ಚಿಕ್ಕವರಿದ್ದಾಗ ದೂರದರ್ಶನದಲ್ಲಿ ರಾಮಾಯಣ ಪ್ರಸಾರವಾಗುತ್ತಿದ್ದರೆ ಟೀವಿ ನೋಡಲು ಮನೆಯಲ್ಲಿ ಇಡೀ ಕುಟುಂಬವಷ್ಟೇ ಅಲ್ಲ ಅಕ್ಕಪಕ್ಕದ ಮನೆಗಳವರೂ(ಟೀವಿ ಇಲ್ಲದ ಮನೆಗಳು) ಅಲ್ಲಿ ಬರುತ್ತಿದ್ದರು.

ರಾಮಾಯಣವನ್ನು ಪೂಜ್ಯನೀಯ ಭಾವದಿಂದಲೇ ನೋಡುತ್ತಿದ್ದರು.ಈ ರೀತಿಯ ವಾತಾವರಣವನ್ನು ರಾಮಾಯಣ ಧಾರಾವಾಹಿ ಸೃಷ್ಟಿಸಲು ಕಾರಣವಾಗಿತ್ತು. ರಾಮನ ಆದರ್ಶದೊಂದಿಗೆ ಜೀವನ ಮೌಲ್ಯಗಳನ್ನು ಹೊಂದಿದ ಪಾತ್ರಗಳು.ಆಗ ನಮ್ಮ ಮೇಲೆ ಪ್ರಭಾವ ಬೀರಿದ್ದವು.ಇಂದಿನ ಪೀಳಿಗೆಗೂ ನಾವು ನಮ್ಮ ದೈನಂದಿನ ಜೀವನದಲ್ಲಿ ರಾಮನ ಆದರ್ಶಗಳನ್ನು ಅಳವಡಿಸಿಕೊಂಡು ಬದುಕುವ ಸತ್ಪರಂಪರೆ ಹುಟ್ಟುಹಾಕಬೇಕು ಎಂದು ರತ್ನಾ ಆನಂದ ಮಾಮನಿ ಹೇಳಿದರು.

- Advertisement -

ಅವರು ಸ್ಥಳೀಯ ಮಾಮನಿ ಕಲ್ಯಾಣ ಮಂಟಪದಲ್ಲಿ ಜರುಗಿದ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ, ಸಂಸ್ಕೃತ ಶಿಕ್ಷಣ ನಿರ್ದೇಶನಾಲಯ ಬೆಂಗಳೂರು.ಬೆಳಗಾವಿ ವಿಬಾಗ ಹಾಗೂ ಶ್ರೀ ರೇಣುಕಾ(ವ)ಸಂಸ್ಕೃತ ಪಾಠಶಾಲೆ ಸವದತ್ತಿ ಇವರ ಸಂಯುಕ್ತಾಶ್ರಯದಲ್ಲಿ ಬೆಳಗಾವಿ ವಿಬಾಗಮಟ್ಟದ ಶ್ರೀಮದ್ ವಾಲ್ಮೀಕಿ ರಾಮಾಯಣ ಆಧಾರಿತ ಶ್ರೀ ರಾಮೋತ್ಸವ ಕಾರ್ಯಕ್ರಮ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ಖ್ಯಾತ ವೈದ್ಯೆ ಡಾ.ನಯನಾ ಭಸ್ಮೆ,ಬೆಳಗಾವಿಯ ವೀರವಾಣಿ ಪತ್ರಿಕೆಯ ಸಂಪಾದಕರಾದ ರಾಮಚಂದ್ರ ಏಡಕೆ.ಸಂಸ್ಕೃತಿ ಶಿಕ್ಷಣ ನಿರ್ದೇಶನಾಲಯದ ಬೆಂಗಳೂರು ನಿರ್ದೇಶಕರಾದ ಪಿ.ಆರ್.ಪಾಗೋಜಿ.ಸಹಾಯಕ ಪ್ರಾಧ್ಯಾಪಕರಾದ ಭಾಸ್ಕರ ಜೋಶಿ.ಬಿ.ಎಸ್.ಗಡಾದ.ಜೆ.ಬಿ.ಕರೆಪ್ಪನವರ.ರವಿ.ಬ್ಯಾಹಟ್ಟಿ ಕರ್ನಾಟಕ ರಾಜ್ಯ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸವದತ್ತಿ ತಾಲೂಕ ಘಟಕದ ಅಧ್ಯಕ್ಷರಾದ ಸುರೇಶ ಬೆಳವಡಿ.ಶ್ರೀ ರೇಣುಕಾ(ಎ)ಸಂಸ್ಕೃತ ಪಾಠಶಾಲೆ ಸವದತ್ತಿಯ ಮುಖ್ಯೋಪಾಧ್ಯಾಯರಾದ ಬಿ.ಎನ್.ಹೊಸೂರ ಹಾಗೂ ಶ್ರೀರಾಮನ ವೇಷಧಾರಿ ಬಾಲಪ್ರತಿಭೆ ಸುಪರ್ಣಾ ಜೋಶಿ ಮೊದಲಾದವರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ವಿದ್ವಾನ್ ನಾಗಲಿಂಗ ಮಾಳೇದವರ ಕೃತಿ ‘ ವಿದ್ಯಾರ್ಥಿ ಮಿತ್ರ’ ಬಿಡುಗಡೆಗೊಳಿಸಲಾಯಿತು.ಶಿವಯೋಗೀಶ್ವರ ಸಂಸ್ಕೃತ ಪಾಠಶಾಲೆ ಇಂಚಲದ ವಿದ್ಯಾರ್ಥಿಗಳಿಂದ ಆತ್ಮಾರಾಮ ಆನಂದ ರಮಣ ಭಜನೆ ಜರುಗಿತು. ಸೌಜನ್ಯದ ಸಾಕಾರ ಮೂರ್ತಿ ಶ್ರೀ ರಾಮ.ಬದುಕಿನ ಪ್ರತಿ ಹಂತದಲ್ಲಿಯೂ ರಾಮನ ಆದರ್ಶ ಪಾಲಿಸಿದರೆ ಬದುಕು ಸಾರ್ಥಕಎಂದು ಪಿ.ಆರ್.ಪಾಗೋಜಿಯವರು ತಿಳಿಸಿದರು.ಉಪನ್ಯಾಸ ನೀಡಿದ ರಾಮಚಂದ್ರ ಏಡಕೆಯವರು ರಾಮಾಯಣವನ್ನು ಇಂದಿನ ಪೀಳಿಗೆಗೆ ತಿಳಿಸುವ ಕಾರ್ಯವಾಗಬೇಕು. ಸತ್ಯ ಘಟನೆಯೇ ರಾಮಾಯಣ.ರಾಮನ ಕತೆಯ ಹುಟ್ಟು ಅಲ್ಲಿ ಬರುವ ರಾಜಧರ್ಮದ ಮಹತ್ವ,ಶ್ರೀ ರಾಮನ ಬದುಕಿನ ಆದರ್ಶಗಳನ್ನು ಕುರಿತು ತಿಳಿಸಿದರು.

ಭೌತಿಕ ರಾಮಮಂದಿರ ಅಯೋಧ್ಯೆಯಲ್ಲಿದ್ದರೆ,ರಾಮನ ಆದರ್ಶಗಳು ಪ್ರತಿಯೊಬ್ಬರ ಹೃದಯದಲ್ಲಿರಬೇಕು.ಅಂದರೆ ರಾಮನ ಸ್ಮರಣೆ ಸಾರ್ಥಕ ಎಂದು ಭಾಸ್ಕರ ಜೋಶಿ ಕರೆ ನೀಡಿದರು. ಗುರಿ ತೋರಿಸುವವರು ಗುರುಗಳು.ವಿಶ್ವದಲ್ಲಿ ಇಂದು ರಾಮಾಯಣ ಮಹಾಭಾರತಗಳು ಮಹತ್ವ ಪಡೆದಿವೆ.ಗುರುಗಳ ಮೂಲಕ ಮಕ್ಕಳಿಗೆ ರಾಮಾಯಣದ ಆದರ್ಶ ಕುರಿತು ತಿಳಿಸಿದರೆ ಮಕ್ಕಳಲ್ಲಿ ಉತ್ತಮ ಸಂಸ್ಕಾರವನ್ನು ಕೊಡಲು ಸಾಧ್ಯ.ಮನೆಯಲ್ಲಿಯೂ ಕೂಡ ಕುಟುಂಬದ ಎಲ್ಲ ಸದಸ್ಯರು ಉತ್ತಮ ಸಂಸ್ಕೃತಿ,ಸಂಸ್ಕಾರವನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕು ಎಂದು ಕರೆ ನೀಡಿದರು.

ಇದೇ ಸಂದರ್ಭದಲ್ಲಿರಾಮಚಂದ್ರ ಏಡಕೆ.ಪಿ.ಆರ್.ಪಾಗೋಜಿ.ಭಾಸ್ಕರ ಜೋಶಿ. ರತ್ನಾ ಆನಂದ ಮಾಮನಿ.ಡಾ.ನಯನಾ ಭಸ್ಮೆ.ಸುರೇಶ ಬೆಳವಡಿ. ವೈ.ಬಿ.ಕಡಕೋಳ ಮೊದಲಾದವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದ ಪ್ರಾರಂಭದಲ್ಲಿ ಬಿ.ಎನ್.ಹೊಸೂರ ಪ್ರಾಸ್ತಾವಿಕವಾಗಿ ಮಾತನಾಡುತ್ತ ಸಂಸ್ಕೃತ ವಿಶ್ವವಿದ್ಯಾಲಯ ಸಂಸ್ಕೃತ ಪಾಠ ಶಾಲೆಗಳ ಮೂಲಕ ರಾಮಾಯಣದ ಕುರಿತು ರಾಮೋತ್ಸವ ಕಾರ್ಯಕ್ರಮವನ್ನು ಆಯೋಜಿಸುವಂತಾಗಿದ್ದು ನಿಜಕ್ಕೂ ಮಹತ್ವದ ಸಂಗತಿ.ಈ ಮೂಲಕ ರಾಮನ ಅದರ್ಶದ ಬದುಕನ್ನು ಮಕ್ಕಳಿಗೆ ತಿಳಿಸಲು ಮತ್ತು ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಲ್ಲಿ ಮಹತ್ವದ ಹೆಜ್ಜೆ ಎಂದು ನುಡಿದರು.
ಮಲ್ಲೇಶ ಮಲಮೇತ್ರಿ ಕಾರ್ಯಕ್ರಮ ನಿರೂಪಿಸಿದರು.ಜೆ.ಬಿ.ಕರೆಪ್ಪನವರ ಸ್ವಾಗತಿಸಿದರು.ಬಿ.ಎಸ್.ಗಡಾದ ವಂದಿಸಿದರು.

- Advertisement -
- Advertisement -

Latest News

ಆಹಾರ ಧಾನ್ಯದ ಕಿಟ್ ವಿತರಣೆ

ಸವದತ್ತಿ - ಕೋರೋನಾ ರೋಗ ಹರಡದಂತೆ ನೋಡಿಕೊಳ್ಳಲು ಸರಕಾರ ಲಾಕ್ ಡೌನ ಮಾಡಿದ್ದರಿಂದ ನಮ್ಮ ಬ್ರಾಹ್ಮಣ ಸಮಾಜದ ಕುಟುಂಬದವರಿಗೆ ಜೀವನ ಸಾಗಿಸಲು ತುಂಬಾ ಕಷ್ಟವಾಗಿದ್ದು ಆದ್ದರಿಂದ...
- Advertisement -

More Articles Like This

- Advertisement -
close
error: Content is protected !!