ಸಿಂದಗಿ: ಸರಕಾರಿ ನಿಯಮಾನುಸಾರ ತಹಶೀಲ್ದಾರ ಕಛೇರಿಯಲ್ಲಿ ಕಿತ್ತೂರ ರಾಣಿ ಚೆನ್ನಮ್ಮಳ ಜಯಂತಿ ಆಚರಿಸುತ್ತಾರೆ. ಪಂಚಮಸಾಲಿ ಸಮಾಜ ಸೇರಿದಂತೆ ವಿವಿಧ ಸಂಘಟನೆಯ ಪದಾಧಿಕಾರಿಗಳನ್ನು ಕ್ರೂಢೀಕರಿಸಿ ಚೆನ್ನಮ್ಮ ವೃತ್ತದಲ್ಲಿ ಪೂಜೆ ಸಲ್ಲಿಸಿ ಕಾರ್ಯಕ್ರಮದಲ್ಲಿ ಬಾಗಿಯಾಗೋಣ. ಇತಿಹಾಸ ಅರಿತ ಅನುಭಾವಿ ಉಪನ್ಯಾಸಕರಿಂದ ಚರಿತ್ರೆಯನ್ನು ತಿಳಿಯೋಣ ಕಾರಣ ಎಲ್ಲ ಸಮುದಾಯದ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಬಾಗವಹಿಸುವಂತೆ ಪಂಚಮಸಾಲಿ ಸಮಾಜದ ಅದ್ಯಕ್ಷ ಎಂ.ಎಂ.ಹಂಗರಗಿ ಕರೆ ನೀಡಿದರು.
ಪಟ್ಟಣದ ತಹಶೀಲ್ದಾರ ಕಾರ್ಯಾಲಯದ ಸಭಾಭವನದಲ್ಲಿ ಕಿತ್ತೂರು ಚನ್ನಮ್ಮ ಜಯಂತಿ ನಿಮಿತ್ತ ತಹಶೀಲ್ದಾರ್ ಪ್ರದೀಪಕುಮಾರ ಹಿರೇಮಠ ನೇತೃತ್ವದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಮುಖಂಡ ಲಿಂಬೆ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಅಶೋಕ ಅಲ್ಲಾಪುರ, ಮಾತನಾಡಿ, ಶರಣರ ಹಾಗೂ ದೇಶಕ್ಕಾಗಿ ಹೋರಾಡಿದ ವೀರರ ಜಯಂತಿ ಆಚರಣೆ ಮಾಡುವ ಉದ್ದೇಶ ಹಿಂದಿನ ಇತಿಹಾಸವನ್ನು ಮೆಲಕು ಹಾಕಿ ಅದನ್ನು ಅರಿತು ಮುನ್ನಡೆಯುವುದಾಗಿದೆ. ಆದರೆ ತಾಲೂಕಾಡಳಿತದಿಂದ ಕೇವಲ ಭಾವಚಿತ್ರ ಪೂಜೆ ನೆರವೇರಿಸಿ ಕಾರ್ಯಕ್ರಮ ಮೊಟಕುಗೊಳಿಸುತ್ತಿರುವುದು ಸರಿಯಲ್ಲ. ಯಾವ ಜಯಂತಿ ಇರುತ್ತದೆ ಆ ವಿಷಯದ ಕುರಿತು ಒಂದು ಗಂಟೆ ಕಾಲ ಉಪನ್ಯಾಸ ನೀಡುವ ಕಾರ್ಯಕ್ರಮ ಕಡ್ಡಾಯವಾಗಿ ಎಲ್ಲ ಜಯಂತಿಗಳಲ್ಲಿ ಆಗಬೇಕೆಂದು ತಿಳಿಸಿದರು. ಅಲ್ಲದೆ ಶಾಲಾ ಕಾಲೇಜುಗಳಲ್ಲಿ ಶಿಕ್ಷಕರು, ಉಪನ್ಯಾಸಕರು ಯಾವ ಜಯಂತಿ ಇರುತ್ತದೆ ಆ ವಿಷಯದ ಕುರಿತು ಮಕ್ಕಳಿಗೆ ವಿಷಯ ಮುಟ್ಟಿಸುವ ಕಾರ್ಯ ಮಾಡಬೇಕು. ಆಗ ಮಾತ್ರ ಹಿಂದಿನ ಹಿರಿಯರ ಶ್ರಮ ಅವರ ಹೋರಾಟದ ರೂಪುರೇಷೆ ಮಕ್ಕಳಿಗೆ ಅರಿವಾಗುತ್ತದೆ ಎಂದರು.
ಅಭಿಪ್ರಾಯ ಆಲಿಸಿದ ತಹಶೀಲ್ದಾರ್ ಪ್ರದೀಪಕುಮಾರ ಹಿರೇಮಠ, ಪ್ರತಿ ಜಯಂತಿಯಂದು ಎಲ್ಲ ಅಧಿಕಾರಿಗಳ ಸಭೆಗಳನ್ನು ಕರೆಯಲು ಗ್ರುಪ್‌ನಲ್ಲಿ ಮಾಹಿತಿ ನೀಡಲಾಗುತ್ತಿದ್ದಾಗ್ಯೂ ಎಲ್ಲರೂ ಗೈರು ಹಾಜರು ಇರುತ್ತಿದ್ದು ಅದಕ್ಕೆ ಅವರ ಅಭಿಪ್ರಾಯ ಸಂಗ್ರಹಿಸಲು ನೋಟೀಸ್ ನೀಡಿ ಸಭೆ ನಡೆಸಬೇಕು ಬೇಡವೋ ಎಂಬುದರ ಬಗ್ಗೆ ಉತ್ತರ ನೀಡಬೇಕು. ಪ್ರತಿ ಮಹಾಪುರಷರ ಜಯಂತಿಯಲ್ಲಿ ಸರಕಾರಿ ನಿಯಮಾನುಸಾರ ಅತಿಥಿಗಳನ್ನು ವೇದಿಕೆಗೆ ಆವ್ಹಾನಿಸುವ ಪರಿಪಾಠವಿದೆ ಆದರೆ ಅದನ್ನು ಕೆಲವರು ದುರುಪಯೋಗ ಪಡೆಸಿಕೊಳ್ಳುತ್ತಿದ್ದು ಅದಕ್ಕೆ ನಾವು ಸರಳವಾಗಿ ಇಲಾಖೆಯಲ್ಲಿಯೇ ಆಚರಿಸುವ ನಿಯಮವಿದ್ದರು ಕೂಡಾ ಆಯಾ ಸಮುದಾಯಕ್ಕೆ ಅನುಗುಣವಾಗಿ ವೇದಿಕೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಉಪನ್ಯಾಸ ಹಮ್ಮಿಕೊಳ್ಳಲಾಗುತ್ತಿದೆ ಎಲ್ಲರ ಸಹಕಾರವಿದ್ದರೆ ಜಯಂತಿಯನ್ನು ಸರ್ವ ಸಮುದಾಯದ ಸಮ್ಮುಖದಲ್ಲಿ ಚನ್ನಮ್ಮ ಜಯಂತಿ ವಿಜೃಂಭಣೆಯಿಂದ ಆಚರಿಸೋಣ ಎಂದು ಹೇಳಿದರು.
ನಿವೃತ್ತ ಕೃಷಿ ಅದಿಕಾರಿ ವ್ಹಿ.ಬಿ.ಕುರುಡೆ, ಗುತ್ತಿಗೆದಾರ ಸೋಮನಗೌಡ ಬಿರಾದಾರ, ವಕೀಲರ ಸಂಘದ ಅಧ್ಯಕ್ಷ ಎಸ್.ಬಿ.ಪಾಟೀಲ ಗುಂದಗಿ, ಸರಕಾರಿ ಅಪರ ವಕೀಲರಾದ ಬಿ.ಜಿ.ನೆಲ್ಲಗಿ, ಎಸ್.ಬಿ.ದೊಡಮನಿ ವಕೀಲರು, ಮಲ್ಲನಗೌಡ ಪಾಟೀಲ ಇಬ್ರಾಹೀಂಪೂರ, ಬಸವರಾಜ ಐರೋಡಗಿ, ಉಪನೊಂದಣಾಧಿಕಾರಿ ಎಂ.ಆರ್.ಪಾಟೀಲ, ಸಿಡಿಪಿಓ ಶಂಬುಲಿಂಗ ಹಿರೇಮಠ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.
ಸಿಬ್ಬಂದಿ ಸೋಮನಾಯಕ ಸ್ವಾಗತಿಸಿ ಕಾರ್ಯಕ್ರಮದ ವಿವರಣೆ ನೀಡಿ ಕೊನೆಯಲ್ಲಿ ವಂದಿಸಿದರು.