ಕಲಬುರಗಿ: ಜಿಲ್ಲೆಯ ಯಡ್ರಾಮಿ ತಾಲೂಕಿನ ಖಾಸಗಿ ಶಾಲೆಯ ಮುಖ್ಯಸ್ಥನಾದ ಹಾಜಿ ಮಲಂಗ್ ಗಣಿಯಾರ ಎರಡು ದಿನಗಳ ಹಿಂದೇ 5 ನೇಯ ತರಗತಿಯ ಮಗುವಿನ ಮೇಲೆ ಅತ್ಯಾಚಾರ ಎಸಗಿದ ನಂತರ ಮಗುವಿಗೆ ಯಾರೊಂದಿಗೂ ಹೇಳದಂತೆ ಬೆದರಿಕೆ ಹಾಕಿದ್ದು ತಿಳಿದು ಬಂದಿದೆ, ಈ ಹೇಯ ಕೃತ್ಯ ಎಸಗಿದ ಅತ್ಯಾಚಾರಿಯನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತೇವೆ ಎಂದು ಮಹಿಳಾ ನೌಕರರ ಕಲಬುರ್ಗಿ ಜಿಲ್ಲಾ ಘಟಕದ ಅಧ್ಯಕ್ಷೆ ನಂದಿನಿ ಸಹಬಾಳ್ ಹೇಳಿದ್ದಾರೆ.
ಅನ್ಯಾಯ ಆದಾಗ ಅದನ್ನು ವಿರೋಧಿಸುವ ಧೈರ್ಯ ಚಿಕ್ಕಮಕ್ಕಳಿಗೆ ಇರುವುದು ವಿರಳ, ಆದರೂ ಅದು ಗೊತ್ತಾದಾಗ ಆ ಆರೋಪಿಗೆ ಶಿಕ್ಷೆ ಆಗಲೇಬೇಕು. ತನ್ನ ಕಾಮ ತೃಷೆ ತೀರಿಸಿಕೊಳ್ಳಲು ಅಮಾಯಕ ಮಕ್ಕಳ ಮೇಲೆ ಅತ್ಯಾಚಾರ ಮಾಡುವ ಕ್ರೂರಿಗಳಿಗೆ ಮರಣದಂಡನೆ ಶಿಕ್ಷೆಯನ್ನು ವಿಧಿಸಬೇಕು. ಹೆಣ್ಣಿನ ಮೇಲೆ ನಡೆಯುವ ದೌರ್ಜನ್ಯ ಹಾಗೂ ಅತ್ಯಾಚಾರವನ್ನು ನಾವು ಖಂಡಿಸುತ್ತೇವೆ ಅನ್ಯಾಯದ ವಿರುದ್ದ ಧ್ವನಿ ಎತ್ತುತ್ತೇವೆ. ಯಾರಿಗೆ ಅನ್ಯಾಯವಾಗಲಿ ಸಹಿಸಿಕೊಳ್ಳಬೇಡಿ ಅತ್ಯಾಚಾರಿಗಳ ವಿರುದ್ದ ಕ್ರಮ ಕೈಗೊಳ್ಳಬೇಕೆಂದುಒತ್ತಾಯಿಸುತ್ತೇನೆ ಎಂದು ನಂದಿನಿ ಸಹಬಾಳ್ ಕರೆ ನೀಡಿರುವರು.
ಈ ಕುರಿತು ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ನೀಡಿರುವ ಅವರು ಇಂತಹ ಘಟನೆಗಳು ಯಾವತ್ತೂ ಜರುಗಬಾರದು ಇಂತವರಿಗೆ ಕಠಿಣ ಶಿಕ್ಷೆ ಜರುಗಲೇಬೇಕು ಈ ಕುರಿತು ಹೋರಾಟ ಮಾಡುವುದಾಗಿ ಹೇಳಿರುವರು