spot_img
spot_img

ಭಾರತೀಯ ದರ್ಶನ ಗ್ರಂಥ ಓದಿ

Must Read

ಬನಾರಸ್ ಹಿಂದೂ ವಿಶ್ವದ್ಯಾಲಯದಲ್ಲಿ  ಸಂಸ್ಕೃತ ಪ್ರಾಧ್ಯಾಪಕರಾಗಿ, ವಿಭಾಗ ಮುಖ್ಯಸ್ಥರಾಗಿ ಮೂವತ್ತೆಂಟು ವರ್ಷ ಕೆಲಸಮಾಡಿದ್ದ ಪಂ. ಬಲದೇವ ಉಪಾಧ್ಯಾಯರು 1942ರಲ್ಲಿ ರಚಿಸಿದ ಗ್ರಂಥ ಭಾರತೀಯ ದರ್ಶನ. ಉತ್ತರ ಭಾರತದ ಹಲವು ವಿಶ್ವವಿದ್ಯಾಲಯಗಳಲ್ಲಿ  ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪಾಠ್ಯಪುಸ್ತಕವಾಗಿದ್ದ ಈ ಗ್ರಂಥವನ್ನು ಕನ್ನಡಕ್ಕೆ ತಂದವರು ಎಸ್. ರಾಮಚಂದ್ರಶಾಸ್ತ್ರಿಗಳು. ಮೊದಲು ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಿಂದ ಪ್ರಕಟವಾಗಿದ್ದ ಈ ಕೃತಿಯು, ಅನಂತರದ ದಿನಗಳಲ್ಲಿ ವಿಶ್ವವಿದ್ಯಾಲಯದವರ ಅವಜ್ಞೆಗೆ ಗುರಿಯಾಗಿ, ಅಲಭ್ಯವಾಗಿತ್ತು. ಇತ್ತೀಚೆಗೆ, ಅನುವಾದಕರ ಮುತುವರ್ಜಿಯಿಂದ ಮತ್ತೆ ಪ್ರಕಟವಾಗಿ, ಆಸಕ್ತರಿಗೆ ದೊರೆಯುವಂತಾಗಿದೆ.

ಶ್ರೌತದರ್ಶನ, ಗೀತಾದರ್ಶನ, ಚಾರ್ವಾಕದರ್ಶನ, ಜೈನದರ್ಶನ, ಬೌದ್ಧದರ್ಶನಗಳ ಜತೆಗೆ ನ್ಯಾಯ-ವೈಶೇಷಿಕ-ಸಾಂಖ್ಯ-ಯೋಗ-ಮೀಮಾಂಸಾ-ಅದ್ವೈತ ವೇದಾಂತ- ವೈಷ್ಣವ ದರ್ಶನಗಳ ವಿವರವಾದ ಪರಿಚಯ ಈ ಗ್ರಂಥದಲ್ಲಿದೆ. ಇಷ್ಟೇ ಅಲ್ಲದೆ, ವೈಷ್ಣವ ತಂತ್ರ, ಶೈವ-ಶಾಕ್ತ ತಂತ್ರಗಳನ್ನೂ ವಿಸ್ತಾರವಾಗಿ ಪರಿಚಯಿಸುತ್ತ, ಕೊನೆಯಲ್ಲಿ ಪಾಶ್ಚಾತ್ಯ ದರ್ಶನದ ಸಂಕ್ಷಿಪ್ತ ಅವಲೋಕನವನ್ನೂ ಮಾಡಲಾಗಿದೆ.

ಭಾರತೀಯ ತತ್ತ್ವಶಾಸ್ತ್ರವನ್ನು ಅತ್ಯಂತ ಸರಳವಾಗಿ ಪರಿಚಯಿಸುವ ಮಹತ್ತ್ವದ  ಕೃತಿ ಇದು. 816 ಪುಟಗಳ, ರಟ್ಟಿನ ಬೈಂಡಿಂಗ್ ಇರುವ ಈ ಗ್ರಂಥದ ಬೆಲೆ ರೂ.800.00.

ಆಸಕ್ತರು ಭಾರತೀಯ ದರ್ಶನ ಗ್ರಂಥವನ್ನು ಖರೀದಿಸಲು WhatsApp ಮಾಡಿ: +917483681708

- Advertisement -

LEAVE A REPLY

Please enter your comment!
Please enter your name here

- Advertisement -

Latest News

ವಿಶೇಷ ಅಗತ್ಯತೆಯುಳ್ಳ ಮಕ್ಕಳ ವೈದ್ಯಕೀಯ ಮೌಲ್ಯಾಂಕನ ಶಿಬಿರ

ಯರಗಟ್ಟಿಃ ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಮಾದರಿ ಶಾಲೆಯಲ್ಲಿ ೨೦೨೨-೨೩ ನೇ ಸಾಲಿನ ಯರಗಟ್ಟಿ ಹಾಗೂ ಮುರಗೋಡ ವಲಯಗಳ ವಿಕಲಚೇತನ ಮಕ್ಕಳ ಮೌಲಾಂಕನ ಶಿಬಿರ ಜರುಗಿತು. ಕಾರ‍್ಯಕ್ರಮದ...
- Advertisement -

More Articles Like This

- Advertisement -
close
error: Content is protected !!