spot_img
spot_img

ಕಷ್ಟಪಟ್ಟು ಓದದೇ ಇಷ್ಟಪಟ್ಟು ಓದಿರಿ: ಎಚ್.ಆರ್.ಪೆಟ್ಲೂರ

Must Read

- Advertisement -

ಮುನವಳ್ಳಿ: ನಮ್ಮ ಅಧ್ಯಯನದಲ್ಲಿ ಯಾವುದೇ ವಿಷಯವಿರಲಿ ಅದು ಕಠಿಣವಿರುವುದಿಲ್ಲ.‌ ಕಾರಣಅದನ್ನು ನಾವು ಕಷ್ಟಪಟ್ಟು ಓದುವ ಪ್ರಯತ್ನ ಮಾಡಿದಾಗ ಅದು ಕಠಿಣವೆನಿಸುತ್ತದೆ. ಅದೇ ವಿಷಯವನ್ನು ಇಷ್ಟಪಟ್ಟು‌ಓದಲು ತೊಡಗಿದಾಗ ನಮಗದು ಕಷ್ಟವೆನಿಸದು. ಇದರೊಂದಿಗೆ ನೀವು ಏ‌ನಾಗಬೇಕು ಎಂದು ಬಯಸುವಿರೋ ಅದರತ್ತ ನಿಮ್ಮ ಗಮನವಿರಿಸಿ ಅಭ್ಯಾಸ ಮಾಡಿ.

ಅಂದರೆ ನಿಶ್ಚಿತ ಗುರಿಯನ್ನು ಮುಟ್ಟುವಿರಿ ಎಂದು ಸವದತ್ತಿ ತಾಲೂಕಿನ‌ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಎಚ್.ಆರ್.ಪೆಟ್ಲೂರ್ ಕರೆ ನೀಡಿದರು. ಅವರು ಸಿಂದೋಗಿ ಮುನವಳ್ಳಿಯ ಎಮ್.ಎಲ್.ಇ.ಎಸ್. ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜೈಂಟ್ಸ ಗ್ರುಪ್ಮು‌ನವಳ್ಳಿ ಇವರಿಂದ ಶಿಕ್ಷಕ ದಿನಾಚರಣೆಯ ನಿಮಿತ್ತ ಏರ್ಪಡಿಸಿದ ಗೌರವ ಸನ್ಮಾನ ಸ್ವೀಕರಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ‌ ಮಾತನಾಡಿದರು.

- Advertisement -

ನಮ್ಮ ದೇಶದ ಮಹಾನ್ ನಾಯಕರು ಮಹಾತ್ಮರು ದಾರ್ಶನಿಕರು ಇಂದಿಗೂ ಪೂಜ್ಯನೀಯ ಸ್ಥಾನದಲ್ಲಿ ಇದ್ದಾರೆ ಎಂದರೆ ಅದಕ್ಕೆ ಕಾರಣ ಅವರ ಬದುಕಿನ ಮೌಲ್ಯಗಳು. ಅವುಗಳನ್ನು ನೆನೆಯುವ ಮೂಲಕ ಅವರನ್ನು ನಮ್ಮ ನುಡಿನಮನದ ಮೂಲಕ ಅವರ ಜೀವಂತಿಕೆಯನ್ನು ನಾವು ಉಳಿಸಿಕೊಂಡು ಬಂದಿದ್ದೇವೆ ಅಂತಹ ಮಹನೀಯರಲ್ಲಿ  ಸರ್ವಪಲ್ಲಿ ರಾಧಾಕೃಷ್ಣನ್ ಅವರು. ತಮ್ಮ ಜನ್ಮ ದಿನವನ್ನು ಶಿಕ್ಷಕರ ದಿನವನ್ನಾಗಿಸುವ ಮೂಲಕ ಎಲ್ಲ ಶಿಕ್ಷಕರ ಸ್ಮರಣೆಯನ್ನು ಈ ದಿನವನ್ನಾಗಿ ಮಾಡಿರುವುದು ನಮ್ಮ ನಿಮ್ಮೆಲ್ಲರ ಭಾಗ್ಯ ಎಂದು ಡಾ.ಎಸ್.ರಾಧಾಕೃಷ್ಣನ್‍ರ ಬದುಕಿನ ಘಟನೆಗಳನ್ನು ಈ ಸಂದರ್ಭದಲ್ಲಿ ಎಚ್.ಆರ್.ಪೆಟ್ಲೂರ ಸ್ಮರಿಸಿದರು.

ನಮ್ಮ ತಾಲೂಕಿನಲ್ಲಿ ಉತ್ತಮ ಶಿಕ್ಷಕರ ಆಯ್ಕೆಯನ್ನು ಪ್ರಾಮಾಣಿಕವಾಗಿ ಮಾಡಿದ್ದೇವೆ ಎಂದು ಹೇಳಲು ಹೆಮ್ಮೆ ಎನಿಸುತ್ತ ಅದಕ್ಕೆ ಉದಾಹರಣೆ ಸುಧೀರ ವಾಘೇರಿಯವರು ಮುಂಬರುವ ದಿನಗಳಲ್ಲಿ ನಮ್ಮ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಟನೆ ಹತ್ತು ಹಲವು ರಚನಾತ್ಮಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿದ್ದು ಎಲ್ಲ ಪದಾಧಿಕಾರಿಗಳ ಸಹಕಾರ ನಿಕಟಪೂರ್ವ ಅಧ್ಯಕ್ಷರಾದ ಎಸ್.ವ್ಹಿ.ಬೆಳವಡಿಯವರ ಮಾರ್ಗದರ್ಶನದಲ್ಲಿ ನಾವೆಲ್ಲ ಮುಂದುವರೆಯುತ್ತೇವೆ.

- Advertisement -

ಈಗಾಗಲೇ ಸ್ಥಗಿತಗೊಂಡಿದ್ದ ಗುರುಭವನದ ಕಾಮಗಾರಿ ಕೂಡ ಆರಂಭಗೊಂಡಿದೆ ಎಂದು ತಿಳಿಸಿದರು. ಈ ಕಾರ್ಯಕ್ರಮದ ವೇದಿಕೆಯಲ್ಲಿ ಜೈಂಟ್ಸ ಗ್ರುಪ್ ಅಧ್ಯಕ್ಷರಾದ ಬಸವರಾಜ ಅಂಗಡಿ. ಎಂ.ಎಲ್.ಇ.ಎಸ್.ಸಂಸ್ಥೆಯ ಅಧ್ಯಕ್ಷರಾದ ಉಮೇಶ ಬಾಳಿ, ಜಿಲ್ಲಾ ಪ್ರಶಸ್ತಿ ವಿಭೂಷಿತ ಶಿಕ್ಷಕ ಸುಧೀರ ವಾಘೇರಿ. ಸಂಸ್ಥೆಯ ಆಡಳಿತಾಧಿಕಾರಿ ಎಸ್.ಆರ್.ಜಗಾಪುರ ಸೇರಿದಂತೆ ಕಾರ್ಯಕ್ರಮದಲ್ಲಿ ಅನಿಲ ಕಿತ್ತೂರ.ಬಿ.ಬಿ.ಹುಲಿಗೊಪ್ಪ.ವೈ.ಬಿ.ಕಡಕೋಳ, ಅಪ್ಪು.ಅಮಠೆ.ಆನಂದ ಜೋಶಿ.ಸಮದ್ ಹುಕ್ಕೇರಿ ಪಟ್ಟಣಶೆಟ್ಟಿ,ಡಾ.ಅಷ್ಠಗಿಮಠ,ಅರುಣಗೌಡ ಪಾಟೀಲ, ಜಗದೀಶ ಗೋರೋಬಾಳ ಸೇರಿದಂತೆ ಶಾಲೆಯ ಎಲ್ಲ ಗುರುವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಆದರ್ಶ ಶಿಕ್ಷಕ ಪ್ರಶಸ್ತಿ ವಿಭೂಷಿತರಾದ ಚಿಕ್ಕುಂಬಿ ಸರಕಾರಿ ಪ್ರೌಢ ಶಾಲೆಯ ಇಂಗ್ಲೀಷ ಶಿಕ್ಷಕ ಸುಧೀರ ವಾಘೇರಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಸುಧೀರ ವಾಘೇರಿ, ಬದುಕಿನಲ್ಲಿ ಎಷ್ಟೇ ಕಷ್ಟ ಬರಲಿ ಸತತ ಪರಿಶ್ರಮ ಗುರುಗಳ ಆಶೀರ್ವಾದದೊಂದಿಗೆ ನೀವು ಇಟ್ಟ ಗುರಿಯನ್ನು ತಲುಪಲು ಸಾಧ್ಯ. ನನ್ನ ಬದುಕಿನಲ್ಲಿ ಅನೇಕ ಮಹನೀಯರು ನನಗೆ ಆದರ್ಶವಾಗಿರುವರು.

ಅವರೆಲ್ಲರ ಪ್ರೋತ್ಸಾಹದಿಂದ ನಾನಿಂದು ನಿಮ್ಮ ಎದುರಿಗೆ ನಿಲ್ಲಲು ಸಾಧ್ಯವಾಗಿದೆ. ಜೈಂಟ್ಸ ಗ್ರುಪ್ ನಿಜಕ್ಕೂ ಒಂದು ಉತ್ತಮ ಸಂಸ್ಥೆ. ಈ ಸಂಸ್ಥೆಯಿಂದ ಸಮಾಜಮುಖಿ ಚಟುವಟಿಕೆಗಳು ಜರುಗುತ್ತಿವೆ. ಇಂದು ನನ್ನನ್ನು ಮತ್ತು ಸಂಘದ ಅಧ್ಯಕ್ಷರಾದ ಎಚ್.ಆರ್.ಪೆಟ್ಲೂರ್‍ರವರನ್ನು ಸನ್ಮಾನಿಸಿ ಗೌರವಿಸಿದ ಸಂಸ್ಥೆಯ ಎಲ್ಲ ಪದಾಧಿಕಾರಿಗಳಿಗೆ ಧನ್ಯವಾದಗಳು ಎಂದು ಕೃತಜ್ಞತಾ ನುಡಿಗಳನ್ನು ಹೇಳಿದರು.

ಎಮ್.ಎಲ್.ಇ.ಎಸ್.ಸಂಸ್ಥೆಯ ಅಧ್ಯಕ್ಷರಾದ ಉಮೇಶ ಬಾಳಿ ಮಾತನಾಡುತ್ತ, ಪ್ರಶಸ್ತಿ ಸಿಕ್ಕವರಿಗೆ ನಾವು ಪ್ರೋತ್ಸಾಹ ನೀಡುವುದರೊಂದಿಗೆ ಅವರಲ್ಲಿ ಇನ್ನೂ ಹೆಚ್ಚಿನ ಚಟುವಟಿಕಗಳು ಕಾರ್ಯಗಳನ್ನು ಮಾಡುವ ಹಂಬಲ ಹೆಚ್ಚಾಗುತ್ತದೆ. ಒಂದು ಸಂಘಟನೆಯ ಅಧ್ಯಕ್ಷತೆಯನ್ನು ಹೊಂದಿದಾಗ ಅಂತಹ ಅಧ್ಯಕ್ಷರನ್ನು ಗೌರವಿಸುವುದರೊಂದಿಗೆ ಅವರಿಗೂ ಕೂಡ ಒಂದು ಪ್ರೋತ್ಸಾಹ ನೀಡಿದಂತಾಗುತ್ತದೆ.

ಈ ದಿಸೆಯಲ್ಲಿ ಈ ಇಬ್ಬರೂ ಮಹನೀಯರನ್ನು ನಮ್ಮ ಜೈಂಟ್ಸ ಸಂಸ್ಥೆಯ ವತಿಯಿಂದ ಇಂದು ಗೌರವಿಸಲಾಗಿದ್ದು ಇಬ್ಬರೂಮುಂದಿನ ದಿನಗಳಲ್ಲಿ ಇನ್ನೂ ಉತ್ತರೋತ್ತರ ಅಭಿವೃದ್ಧಿಯನ್ನು ಹೊಂದಲಿ ಇಂದು ನಮ್ಮ ಶಾಲೆಯ ಗುರುಮಾತೆ ಸುರೇಖಾ ಶಿಂಪಿಗೇರ ಅವರು ಕೂಡ ಮುರುಘರಾಜೇಂದ್ರ ಯೋಗ ಕೇಂದ್ರದವರು ನೀಡಿದ ಗುರುಶ್ರೇಷ್ಠ ಪುರಸ್ಕಾರಕ್ಕೆ ಪಾತ್ರರಾಗಿರುವುದು ನಮಗೆಲ್ಲ ಹೆಮ್ಮೆ ತಂದಿದೆ. ಇವರಿಗೂ ಕೂಡ ಅಭಿನಂದನೆಗಳು.ಹೀಗೆ ನಮ್ಮ ಜೈಂಟ್ಸ ಸಂಸ್ಥೆ ವಿವಿಧ ಕ್ಷೇತ್ರಗಳಸಾಧಕರನ್ನು ಪ್ರತಿವರ್ಷವೂ ಗೌರವಿಸುತ್ತ ಬಂದಿದ್ದು ಇದು  ಅವರ ಸನ್ಮಾನದ ಜೊತೆಗೆ ಇನ್ನೂ ಹೆಚ್ಚು ಸಾಧನೆ ಮಾಡಲು ನೀಡುವ ಪ್ರೋತ್ಸಾಹ ಎಂಬುದು ನಮ್ಮೆಲ್ಲರ ಭಾವನೆ.

ನಮ್ಮ ಶಾಲೆಯ ಮಕ್ಕಳು ಇಂತಹ ಮಹನೀಯರ ಬದುಕನ್ನು ಅರಿಯುವ ಜೊತೆಗೆ ತಮ್ಮಲ್ಲಿಯೂ ಅವರ ಆದರ್ಶಗಳನ್ನು ಅಳವಡಿಸಿಕೊಳ್ಳಲು ಇದೊಂದು ವೇದಿಕೆ ಎಂದು ಕರೆ ನೀಡಿದರು.ಕಾರ್ಯಕ್ರಮದ ಪ್ರಾರಂಭದಲ್ಲಿ ಶಾಲಾ ಮಕ್ಕಳಿಂದ ಗುರುಸ್ಮರಣೆ ಪ್ರಾರ್ಥನೆ ಜರುಗಿತು.

ಮುಖ್ಯೋಪಾಧ್ಯಾಯ ಎಚ್.ಕೆ.ಯಡೊಳ್ಳಿ ಕಾರ್ಯಕ್ರಮದ ಪ್ರಾರಂಭದಲ್ಲಿ ಸ್ವಾಗತಿಸುವುದರೊಂದಿಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ದೈಹಿಕ ಶಿಕ್ಷಕ ಬಿ.ಎಚ್.ಖೊಂದುನಾಯ್ಕ ಕಾರ್ಯಕ್ರಮ ನಿರೂಪಿಸಿದರು. ಎ.ವ್ಹಿ.ನರಗುಂದ ವಂದಿಸಿದರು.

- Advertisement -
- Advertisement -

Latest News

‘Silent killer’ ಎಂದು ಕರೆಯಲ್ಪಡುವ ಒಂದು ಹಾವುಂಟು !

ಈ ಹಾವನ್ನು ಈ ರೀತಿ ಕರೆಯಲು ಹಲವು ಕಾರಣಗಳುಂಟು. ಈ ಹಾವು ರಾತ್ರಿ ವೇಳೆಯಲ್ಲಿಯೇ ಹೆಚ್ಚು ಓಡಾಟ ಮಾಡುವುದು (ನಿಶಾಚರಿ). ಮತ್ತೆ ಈ ಹಾವು ಮನುಷ್ಯರಿಗೆ...
- Advertisement -

More Articles Like This

- Advertisement -
close
error: Content is protected !!
Join WhatsApp Group