- Advertisement -
ಕರ್ನಾಟಕ ಗಮಕ ಕಲಾ ಪರಿಷತ್ತು ಬೆಂಗಳೂರು, ಜಿಲ್ಲಾ ಘಟಕ ಹಾಸನ ವತಿಯಿಂದ ಸಂಸ್ಕಾರ ಭಾರತಿ ಕರ್ನಾಟಕ, ಹಾಸನ ಜಿಲ್ಲಾ ಘಟಕ, ಶ್ರೀ ಸೀತಾ ರಾಮಾಂಜನೇಯ ಸೇವಾ ಸಮಿತಿ, ಕನ್ನಡ ಸಂಸ್ಕೃತಿ ಇಲಾಖೆ, ಹಾಸನ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರ ಬೆಂಗಳೂರು, ಹಾಸನ ನಗರ ಗೃಹ ನಿರ್ಮಾಣ ಸಹಕಾರಿ ಸಂಘ ಇವರ ಸಹಯೋಗದಲ್ಲಿ ಹಾಸನದ ಶ್ರೀ ಸೀತಾರಾಮಾಂಜನೇಯ ದೇವಾಲಯ ಸಪ್ತಪದಿ ಸೌದಾಮಿನಿ ಸಭಾಂಗಣ ಗಮಕ ರತ್ನಾಕರ ಎಂ.ಎ. ಜಯರಾಮನ್ ಮಹಾ ವೇದಿಕೆಯಲ್ಲಿ ಹಮ್ಮಿಕೊಂಡಿರುವ ಐದು ದಿನಗಳ ಗಮಕ ಹಬ್ಬ ಕವಿ ನಮನ ಕಾರ್ಯಕ್ರಮದ ನಾಲ್ಕನೇ ದಿನ ಸೋಮುವಾರ ಸಂಜೆ ಕವಿ ಡಿ.ವಿ.ಗುಂಡಪ್ಪರವರ ಮಂಕು ತಿಮ್ಮನ ಕಗ್ಗ ಕಾವ್ಯ ವಾಚನ ಕಾರ್ಯಕ್ರಮ ನಡೆಯಿತು.
ಗಾಯನವನ್ನು ಗಮಕ ವಿಧುಷಿ ಶ್ರೀಮತಿ ವಾಸುಕಿ ಶರ್ಮ ಬೆಂಗಳೂರು ರವರು ಮತ್ತು ವ್ಯಾಖ್ಯಾನವನ್ನು ಶ್ರೀಯುತ ಅಶೋಕ್ ನಾಡಿಗ್ ಬೆಂಗಳೂರುರವರು ತುಂಬಾ ಚೆನ್ನಾಗಿ ನಡೆಸಿಕೊಟ್ಟು ವೀಕ್ಷಕರ ಮೆಚ್ಚುಗೆಗೆ ಪಾತ್ರರಾದರು.