spot_img
spot_img

ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ : 24 ವರ್ಷಗಳ ನಂತರ ಗುರುಶಿಷ್ಯರಿಗೆ ಪುನರ್ಮಿಲನದ ಸಂಭ್ರಮ

Must Read

spot_img
- Advertisement -

ಖಾನಾಪೂರ: ತಾಲೂಕಿನ ಇಟಗಿ ಗ್ರಾಮದ ಚನ್ನಮ್ಮ ರಾಣಿ ಸ್ಮಾರಕ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ 1997-98 ನೇ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಂದ ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ ಏರ್ಪಡಿಸಲಾಗಿತ್ತು.

24 ವರ್ಷಗಳ ನಂತರ ಒಂದೆಡೆ ಸೇರಿದ 100 ಕ್ಕೂ ಹೆಚ್ಚು ಹಳೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರು ಪಾಲ್ಗೊಂಡು ಬಾಲ್ಯದ ಸವಿ ನೆನಪುಗಳನ್ನು ಮೆಲಕು ಹಾಕಿ ಸಂಭ್ರಮಿಸಿದರು. ಗುರುಗಳಿಗೆ ಪುಷ್ಪವೃಷ್ಟಿಗೈದು ಸ್ವಾಗತಿಸಿದ್ದು ವಿಶೇಷವಾಗಿತ್ತು. ಶಾಲಾ ಆವರಣದಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡಲಾಯಿತು. ಅಗಲಿದ ಗುರುಗಳು, ಸ್ನೇಹಿತರಿಗೆ ಸಂತಾಪ ಸೂಚಿಸಿ ಮೌನಾಚರಣೆ ಮಾಡುವುದರ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಮಧ್ಯಾಹ್ನ ಸ್ನೇಹಕೂಟ ಹಾಗೂ ಮನರಂಜನಾ ಕಾರ್ಯಕ್ರಮ ಏರ್ಪಡಿಲಾಗಿತ್ತು.

- Advertisement -

ಕಲಿಸಿದ ಗುರುಗಳ ಕಾಲಿಗೆರಗಿ ಗುರುವಂದನೆ ಸಲ್ಲಿಸಿದ ಶಿಷ್ಯವೃಂದದಲ್ಲಿ ಸಂಭ್ರಮ ಮನೆಮಾಡಿತ್ತು. ನಿವೃತ್ತ ಪ್ರಾಂಶುಪಾಲರಾದ ವಿಜಯ ಬಡಿಗೇರ ಮಾತನಾಡಿ, ಗುರು ಶಿಷ್ಯರ ಅವಿನಾಭಾವ ಸಂಬಂಧಕ್ಕೆ ಬೆಲೆ ಕಟ್ಟಲಾಗದು ಎಂದರು. ನಿವೃತ್ತ ಪ್ರಾಚಾರ್ಯರಾದ ಸಿ.ಬಿ ಲಂಗೋಟಿ ಮಾತನಾಡಿ ಕಲಿಸಿದ ಗುರುಗಳನ್ನು ನೆನಪಿಟ್ಟುಕೊಂಡು ಸತ್ಕರಿಸಿ ಗುರುವಂದನೆ ಸಲ್ಲಿಸಿದ್ದು ಮನಸ್ಸಿಗೆ ಬಹಳ ತೃಪ್ತಿ ತಂದಿದೆ ಎಂದರು. ನಿವೃತ್ತ ಶಿಕ್ಷಕರಾದ ಕೆ.ಎಸ್.ಕುರಗುಂದ ಮಾತನಾಡಿ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡಾಗ ಬದುಕು ಸಾರ್ಥಕವಾಗುತ್ತದೆ ಎಂದು ಅಭಿಪ್ರಾಯಪಟ್ಟರು. ನಿವೃತ್ತ ಗುರುಗಳಾದ ಕೆ.ಬಿ ನಾವಲಗಟ್ಟಿ ಮಾತನಾಡಿ ಉತ್ತಮ ಸಮಾಜ ಕಟ್ಟುವಲ್ಲಿ ವಿದ್ಯಾರ್ಥಿಗಳ ಪಾತ್ರ ಬಹಳ ಮುಖ್ಯ ಎಂದು ಹೇಳಿದರು.

ನಿವೃತ್ತ ಶಿಕ್ಷಕರಾದ ಬಿ.ಬಿ ಕಾದ್ರೊಳ್ಳಿ ಮಾತನಾಡಿ ಅಹಂಕಾರವನ್ನು ಬಿಟ್ಟು ಮುನ್ನಡೆದರೆ ಮಾತ್ರ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯ ಎಂದರು. ನಿವೃತ್ತ ಉಪನ್ಯಾಸಕಿಯಾದ ಐ.ಜಿ.ಪಕ್ಕಳ ಮಾತನಾಡಿ ಒತ್ತಡಗಳ ಜೀವನದಲ್ಲಿ ಕುಟುಂಬಕ್ಕೂ ಸಮಯ ಮೀಸಲಿಡಬೇಕು ಎಂದರು. ಕಾಲೇಜಿನ ಪ್ರಾಚಾರ್ಯರಾದ ಜಿ.ಬಿ ನಾಯ್ಕರ ಮಾತನಾಡಿ ಯಾವ ವೃತ್ತಿಯೂ ಕೀಳಲ್ಲ ಮಾಡುವ ಕೆಲಸವನ್ನು ಪ್ರಾಮಾಣಿಕತೆಯಿಂದ ಮಾಡಬೇಕು ಎಂದರು. ಶಿಕ್ಷಕ ಎಸ್.ಎಸ್. ತುರಮರಿ ಮಾತನಾಡಿ ಬದುಕಿನಲ್ಲಿ ಬರುವ ಸಮಸ್ಯೆಗಳನ್ನು ಛಲದಿಂದ ಎದುರಿಸುವ ಗುಣ ಬೆಳೆಸಿಕೊಳ್ಳುವಂತೆ ಸಲಹೆ ನೀಡಿದರು.

- Advertisement -

ಎಂ.ಎಸ್.ಪೂಜಾರ ಮಾತನಾಡಿ ಉತ್ತಮ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರದ ಅಗತ್ಯವಿದೆ ಎಂದು ಕಿವಿಮಾತು ಹೇಳಿದರು. ಕಿರಣ ಗಣಾಚಾರಿ ಪ್ರಸ್ತಾವಿಕವಾಗಿ ಮಾತನಾಡಿ ಸ್ನೇಹಿತರನ್ನೆಲ್ಲ ಒಗ್ಗೂಡಿಸುವಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಯಿತು. ಆದರೂ ಎಲ್ಲರ ಸಹಕಾರದಿಂದ ಕಾರ್ಯಕ್ರಮ ಆಯೋಜನೆಯಾಗಿದ್ದು ಸ್ನೇಹಿತರೆಲ್ಲ ಸುದೀರ್ಘ ಅಂತರದ ನಂತರ ಮತ್ತೆ ಒಂದಾಗಿದ್ದು ಮನಸ್ಸಿಗೆ ಖುಷಿ ತಂದಿದೆ ಎಂದರು.

ಜನತಾ ಶಿಕ್ಷಣ ಪ್ರಸಾರ ಸಮಿತಿಯ ಚೇರಮನ್ ವಿಜಯ ಬಿ. ಸಾಣಿಕೊಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಕಲಿತ ಶಾಲೆಯಲ್ಲಿಯೇ ಕಾರ್ಯಕ್ರಮ ಆಯೋಜಿಸಿದ್ದು ಹಳೆಯ ವಿದ್ಯಾರ್ಥಿಗಳ ಪ್ರೀತಿ ಹಾಗೂ ಅಭಿಮಾನಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪಾಧ್ಯಕ್ಷರಾದ ಜಿ.ಕೆ ಪುಂಡಿ, ಕಾರ್ಯದರ್ಶಿಗಳಾದ ಎಸ್.ಬಿ ತುರಮರಿ, ಪದಾಧಿಕಾರಿಗಳಾದ ಎಂ.ಎಸ್. ಸಾಣಿಕೊಪ್ಪ , ಬಿ.ವಿ ಬೆಣಚನಮರಡಿ, ಎಸ್.ಪಿ ಸಾಣಿಕೊಪ್ಪ, ಎಸ್.ವಿ ಗಣಾಚಾರಿ, ಎಂ.ವಿ ತುರಮರಿ, ಬಿ.ಎಸ್.ಪುಂಡಿ, ನಿವೃತ್ತ ಶಿಕ್ಷಕರಾದ ಸಿ.ಆರ್.ಪಾಟೀಲ, ಎಸ್.ಎಲ್.ಅಂಬಿಗೇರ, ಪ್ರೌಢಶಾಲೆಯ ಮುಖ್ಯಶಿಕ್ಷಕರಾದ ಎಂ.ಬಿ.ಕಾಮಗೌಡ, ಉಪನ್ಯಾಸಕರಾದ ಎಸ್.ಎಸ್.ಶಾಸ್ತ್ರಿ, ಶಿಕ್ಷಕರಾದ ಎಸ್.ಬಿ.ಮಠದ, ಎಸ್.ಬಿ.ಮೆಹತ್ರಿ, ಆರ್.ಬಿ.ಹುಣಶೀಕಟ್ಟಿ, ಬೋಧಕೇತರ ಸಿಬ್ಬಂದಿಗಳಾದ ಆರ್.ವಿ.ಗಾಣಿಗೇರ, ಬಿ.ಆರ್.ಗೌರಕ್ಕನವರ, ಆರ್.ಎಸ್.ಮತ್ತಿಕೊಪ್ಪ, ಎಫ್.ವಿ.ಗೂರನವರ, ಎ.ಎನ್.ಒಳಕೇರಿ,  ಎಸ್.ಬಿ.ತಳವಾರ ಉಪಸ್ಥಿತರಿದ್ದರು. ನಿಂಗಪ್ಪ ಠಕ್ಕಾಯಿ ನಿರೂಪಿಸಿದರು. ಸುನಂದಾ ಚವಲಗಿ ಪ್ರಾರ್ಥಿಸಿದರು. ಪ್ರೇಮಾ ಬಡಿಗೇರ ಸ್ವಾಗತಿಸಿದರು. ಕಲ್ಲಪ್ಪ ಮುತ್ನಾಳ ವಂದಿಸಿದರು.

ಚನ್ನಮ್ಮ ಬಡಿಗೇರ, ಉಸ್ಮಾನಲಿ ನದಾಫ ಅನಿಸಿಕೆ ವ್ಯಕ್ತಪಡಿಸಿದರು. ಭರತೇಶ ಠಕ್ಕಾಯಿ, ಮಲ್ಲಿಕಾರ್ಜುನ ಸಾಣಿಕೊಪ್ಪ, ಬಸವರಾಜ ಹಣ್ಣಿಕೇರಿ, ನಾಗೇಂದ್ರ ಪೂಜಾರ, ಮಹಾಂತೇಶ ಸಂಬಾಳದ, ಆನಂದ ತೋರೋಜಿ, ನಾಮದೇವ ರೇಳೇಕರ, ಬಸವರಾಜ ವಡ್ಡೀನ, ವಿಶ್ವೇಶ್ವರ ಧಡೋತಿ, ಅಲ್ತಾಫ್ ಸನದಿ, ಗಂಗಪ್ಪ ಹಲಸಗಿ, ನಾಗಪ್ಪ ಬನೋಶಿ, ಬಸವರಾಜ ಕಿಳೋಜಿ, ನಿಜಗುಣಿ ಪೂಜೇರ, ನಿಜಗುಣಿ ತುರಮರಿ, ಅದೃಶ್ಯ ಬಾಗೇವಾಡಿ, ವೀರಭದ್ರಪ್ಪ ಅಂದಾನಿಮಠ, ದಸ್ತಗೀರ ನದಾಫ, ಶಾವಲಿ ನದಾಫ, ವಿರೇಶ ತುರಮರಿ, ಭಾರತಿ ಕರಡಿ, ಜಯಶ್ರೀ ಕಡೇಮನಿ, ರಾಜಶ್ರೀ ಮಾದರ ಹಾಗೂ ಇತರ ಹಳೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಜರಿದ್ದರು. ಎಲ್ಲರಿಗೂ ಸವಿನೆನಪಿನ ಕಾಣಿಕೆಗಳನ್ನು ನೀಡಲಾಯಿತು. ದೂರದೂರುಗಳಿಂದ ಸ್ನೇಹಿತರೆಲ್ಲ ಆಗಮಿಸಿದ್ದರು.

- Advertisement -
- Advertisement -

Latest News

ಶರಣರ ಚರಿತ್ರೆ ಆಲಿಸುವದರಿಂದ ಜೀವನ ಪಾವನ; ಹಂಗರಗಿ

ಸಿಂದಗಿ: ಪುರಾಣ ಎಂಬುದು ಪುಂಡರಗೋಷ್ಠಿಯಲ್ಲ ಪುರಾಣ ಎಂದರೆ ಅಧ್ಯಾತ್ಮ ಶರಣರ ಬದುಕಿನ ಅರ್ಥ ತಿಳಿದುಕೊಂಡು ಅವರ ಹಾದಿಯಲ್ಲಿ ಸಾಗುವ ನಡೆ ಕಲಿಸುವ ಧರ್ಮದ ಪಾಠಶಾಲೆ ಇದ್ದಂತೆ...
- Advertisement -

More Articles Like This

- Advertisement -
close
error: Content is protected !!
Join WhatsApp Group