ಲಿಂಗಾಯತ ಧರ್ಮ ಜಾಗತಿಕವಾಗಿ ಬೆಳೆಯಬೇಕು – ಕಿರಣ ಖಂಡ್ರೆ
ಬೀದರ – ನಾವು ಲಿಂಗಾಯತ ಧರ್ಮಕ್ಕೆ ಯಾವುದೇ ಅಲ್ಪಸಂಖ್ಯಾತ ಸ್ಥಾನಮಾನಕ್ಕಾಗಿ ಹೋರಾಟ ಮಾಡುತ್ತಿಲ್ಲ. ಬಸವಣ್ಣನವರು ಸ್ಥಾಪಿಸಿದ ಧರ್ಮ ವಿಶ್ವ ಮಟ್ಟದಲ್ಲಿ ಬೆಳೆಯಬೇಕು. ಅವರ ಆದರ್ಶಗಳು ಎಲ್ಲರನ್ನು ತಲುಪಬೇಕು ಎಂಬುದು ನಮ್ಮ ಆಶಯ ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಕಾರ್ಯದರ್ಶಿ ಕಿರಣ ಖಂಡ್ರೆ ಹೇಳಿದರು
ಸುಮಾರು ೫ ವರ್ಷಗಳ ನಂತರ ಲಿಂಗಾಯತ ಸ್ವತಂತ್ರ ಧರ್ಮ ಹೋರಾಟಕ್ಕೆ ಮತ್ತೆ ಚೇತರಿಕೆ ಸಿಕ್ಕಿದ್ದು ಭಾಲ್ಕಿ ಪಟ್ಟಣದ ಬಸವೇಶ್ವರ ಮೂರ್ತಿಗೆ ಮಾಲಾರ್ಪಣೆ ಮಾಡುವ ಮೂಲಕ ಅವರು ಹೋರಾಟಕ್ಕೆ ಚಾಲನೆ ನೀಡಿ ಮಾತನಾಡಿದರು.
೨೦೧೮ ರ ಜುಲೈ ೧೨ ಕ್ಕೆ ಸ್ವತಂತ್ರ ಲಿಂಗಾಯತ ಧರ್ಮ ಹೋರಾಟ ಆರಂಭವಾಗಿ ಐದು ವರ್ಷಗಳು. ಅಂದಿನಿಂದ ನಿರಂತರ ಹೋರಾಟ ಮಾಡುತ್ತಲೇ ಬಂದಿದ್ದು ಶರಣೆ ಸ್ವರ್ಗಸ್ಥ ಮಾತೇ ಮಾಹದೇವಿ ಅವರು ಕನಸು ಕಂಡಿದ್ದ ಲಿಂಗಾಯತ ಧರ್ಮವನ್ನು ನಾವು ಸ್ಥಾಪಿಸಲು ಹೋರಾಡಬೇಕಾಗಿದೆ ಎಂದು ಖಂಡ್ರೆ ಈ ಸಂದರ್ಭದಲ್ಲಿ ಹೇಳಿದರು.
ಈ ಮುಂಚೆ ಕೇಸರಿ ಧ್ವಜಾರೋಹಣ ನೆರವೇರಿಸಿದ ಖಂಡ್ರೆಯವರು, ಮಾತೆ ಮಹಾದೇವಿಯವರು ಹಾಕಿಕೊಟ್ಟ ಹಾದಿಯಲ್ಲಿ ನಮ್ಮ ಹೋರಾಟ ಎಂದರು.
ಈ ಸಂದರ್ಭದಲ್ಲಿ ಹಲವು ಲಿಂಗಾಯತ ಮುಖಂಡರು ಉಪಸ್ಥಿತರಿದ್ದರು.
ವರದಿ: ನಂದಕುಮಾರ ಕರಂಜೆ, ಬೀದರ