spot_img
spot_img

ಹೆಚ್ಚುವರಿ ಶಿಕ್ಷಕರ ಮರುಹೊಂದಾಣಿಕೆ ; ಸರಿಪಡಿಸಲು ಡಿ ಡಿ ಪಿ ಐ ಮುಖಾಂತರ ಮನವಿ

Must Read

ಬೆಳಗಾವಿ – ಇಂದು ಶನಿವಾರ ಮಧ್ಯಾಹ್ನ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಉಪನಿರ್ದೇಶಕರಾದ ಬಸವರಾಜ ನಾಲವತವಾಡ ರವರ ಮೂಲಕ ಶಿಕ್ಷಣ ಸಚಿವರಾದ ನಾಗೇಶ ರವರಿಗೆ ಪ್ರಸಕ್ತ ಸಾಲಿನಲ್ಲಿ ನಡೆಯುತ್ತಿರುವ ಶಿಕ್ಷಕರ ಅವೈಜ್ಞಾನಿಕ ಹೆಚ್ಚುವರಿ ಹಾಗೂ ಮರುಹೊಂದಾಣಿಕೆ ಪ್ರಕ್ರಿಯೆಯಲ್ಲಿನ ಮಾರಕ ಅಂಶಗಳನ್ನು ಸರಿಪಡಿಸಲು ಆಗ್ರಹಿಸಿ ಬೆಳಗಾವಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ವತಿಯಿಂದ ಮನವಿ ಸಲ್ಲಿಸಲಾಯಿತು.

ಶಿಕ್ಷಕರ ಸಮುದಾಯ ಕ್ಕೆ ಹೆಚ್ಚುವರಿ ಹಾಗೂ ಮರುಹೊಂದಾಣಿಕೆ ಗಳಲ್ಲಿ ಆಗುತ್ತಿರುವ ಅನ್ಯಾಯ ಮನವಿಯಲ್ಲಿ ವಿವರಿಸಲಾಗಿದೆ. ಶಿಕ್ಷಕರ ಮರುಹೊಂದಾಣಿಕೆಯನ್ನು ಈ ಶೈಕ್ಷಣಿಕ ವರ್ಷದ ಕೊನೆಯ ವರೆಗೆ ಮುಂದೂಡಲೂ ಮನವಿಯಲ್ಲಿ ವಿವರಿಸಲಾಗಿದೆ.

  ಮನವಿ ನೀಡುವ ಸಮಯದಲ್ಲಿ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಬಸವರಾಜ ರಾಯವ್ವಗೋಳ ರ ಮುಂದಾಳತ್ವದಲ್ಲಿ ಪ್ರಧಾನ ಕಾರ್ಯದರ್ಶಿಗಳಾದ ಶಂಕರ ಗೋಕಾವಿ ಜೊತೆಗೆ ಸರಕಾರಿ ನೌಕರರ ಸಂಘದ ರಾಜ್ಯ ಪ್ರತಿನಿಧಿಗಳು ಹಾಗೂ ವಿವಿಧ ತಾಲೂಕಾ ಘಟಕಗಳ ಅಧ್ಯಕ್ಷರು ಗಳಾದ ಶಿವಾನಂದ ಕೂಡಸೋಮಣ್ಣವರ, ಆನಂದ ಮೂಗಬಸವ, ಆಸೀಫ್ ಅತ್ತಾರ,ಬಸವರಾಜ ಯಳ್ಳೂರ, ಸಿದ್ದಣ್ಣಹುಲಮನಿ, ಪವಾಡಿ ಗೌಡರ್, ನೌಕರರ ಸಂಘದ ಪದಾಧಿಕಾರಿಗಳಾದ ಎನ್ ಎಸ್ ಪಾಟೀಲ, ಚವಾಣ ,ಸೊಸೈಟಿ ಅಧ್ಯಕ್ಷರಾದ ಅನ್ವರ ಲಂಗೋಟಿ, ಶೇಖರ ಕರಂಬಳಕರ್, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಬಸವರಾಜ ಸುಣಗಾರ, ರಾಜ್ಯ ಶಿಕ್ಷಕರ ಸಂಘದ ಉಪಾಧ್ಯಕ್ಷರಾದ ಎಸ್ ಡಿ ಗಂಗಣ್ಣವರ, ವಿಕಲ ಚೇತನ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಬಿ ವಾಯ ತಳವಾರ, ಭರತ್ ಬಳ್ಳಾರಿ, ಆನಂದ ಗೌಡ ಕಾದ್ರೊಳ್ಳಿ ವಿ ಎಮ್ ಮುಳ್ಳೂರ್ ,ಎಮ್ ಎಫ್ ಸಿದ್ದನಗೌಡರ, ಸುನೀಲ್ ದೇಸೂರಕರ, ಬಿ ಎಮ್ ರಸೂಲಖಾನ, ಆಸ್ಮಾ, ನಾಯ್ಕ ರವರನ್ನೊಳಗೊಡಂತೆ ಹಲವಾರು ಪದಾಧಿಕಾರಿಗಳು, ಮುಖಂಡರು ಉಪಸ್ಥಿತರಿದ್ದರು.

ಆಸೀಫ್ ಅತ್ತಾರ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಬಸವರಾಜ ಸುಣಗಾರ ವಂದಿಸಿದರು.

- Advertisement -
- Advertisement -

Latest News

ರಿಯಾಯಿತಿ ದರದಲ್ಲಿ ಸಂತಾನ ಪ್ರಾಪ್ತಿ ಚಿಕಿತ್ಸೆ

ಬೆಳಗಾವಿ: ಮಕ್ಕಳಿಲ್ಲದ ಬಡ ದಂಪತಿಗಳಿಗೆ ರಿಯಾಯಿತಿ ದರದಲ್ಲಿ ಸಂತಾನ ಪ್ರಾಪ್ತಿ ಚಿಕಿತ್ಸೆ ಕೊಡಿಸಲು ಕೊಲ್ಲಾಪುರದ ಸಿದ್ಧಗಿರಿ ಮಠದ ದತ್ತಿ ಆಸ್ಪತ್ರೆಯಲ್ಲಿ ಐವಿಎಫ್ ಕೇಂದ್ರ ಸ್ಥಾಪಿಸಲಾಗಿದೆ ಎಂದು ಮುಜರಾಯಿ,...
- Advertisement -

More Articles Like This

- Advertisement -
close
error: Content is protected !!