ಮೂಡಲಗಿ : ರಾಜ್ಯ ಸಕಾ೯ರವು ಪಠ್ಯ ಪುಸ್ತಕದಲ್ಲಿ ಬಸವಣ್ಣ ಹಾಗೂ ಬಸವಣ್ಣನವರ ಸಮಕಾಲೀನ ಶರಣರ ಜೀವನ ಚರಿತ್ರೆ ಮತ್ತು ವಚನಗಳನ್ನು ತೆಗೆದು ಹಾಕಿರುವುದು ಖಂಡನೀಯ ಎಂದು ಪಂಚಮಸಾಲಿ ಯುವ ಮುಖಂಡ ಈಶ್ವರ ಢವಳೇಶ್ವರ ಹೇಳಿದ್ದಾರೆ.
12 ನೇ ಶತಮಾನದಲ್ಲಿ ಬಸವಾದಿ, ಶರಣರು ಅನುಭವ ಮಂಟಪವನ್ನು ಸ್ಥಾಪಿಸಿ, ಸವ೯ಜನಾಂಗದ ಜನರಿಗೆ ಮತ್ತು ಮಹಿಳೆಯರಿಗೆ ಸಮಾನ ಹಕ್ಕನ್ನು ನೀಡಿದರು. ಶರಣರ ವಚನಗಳು ಇಂದಿಗೂ ಪ್ರಸ್ತುತ ಅವರ ವಚನಗಳು ಸಮಾನತೆ, ಭಾವೈಕ್ಯ ಸಹೋದರತ್ವದಿಂದ ಕೂಡಿದ್ದವು.ಅಂಥವರ ವಚನಗಳನ್ನು ಇಂದು ಪಠ್ಯ ಪುಸ್ತಕಗಳಿಂದ ತೆಗೆದು ಹಾಕುತ್ತಿರುವ ರಾಜ್ಯ ಸಕಾ೯ರದ ಕ್ರಮವನ್ನು ರಾಜ್ಯದ ಪ್ರತಿ ಒಬ್ಬ ಪ್ರಜೆಯೂ ಖಂಡಿಸಬೇಕು.
ರಾಜಕಾರಣಿಗಳು ತಮ್ಮ ಭಾಷಣದುದ್ದಕ್ಕೂ ಬಸವಣ್ಣವರನ್ನು ಹಾಗೂ ಅವರ ಸಮಕಾಲೀನ ಶರಣನ್ನು ಹೊಗಳುತ್ತ ಹೋಗುತ್ತಾರೆ, ಆದರೆ ಇಂದು ಬಸವಣ್ಣನವರ ವಚನಗಳನ್ನು ಪಠ್ಯ ಪುಸ್ತಕದಿಂದ ತೆಗೆದು ಹಾಕಿದಾಗ, ಎಲ್ಲ ರಾಜಕಾರಣಿಗಳು ಸುಮ್ಮನೆ ಇರುವುದನ್ನು ನೋಡಿದರೆ ಬಸವಣ್ಣನವರು ಕೇವಲ ಭಾಷಣಕ್ಕೆ ಸೀಮಿತ ಮಾಡಿಕೊಂಡಂತೆ ಕಾಣುತ್ತದೆ. ಅವರ ತತ್ವ , ಅವರ ಧಮ೯ ಯಾರಿಗೂ ಬೇಡವಾಗಿದೆ ಅನಿಸುತ್ತದೆ ಎಂದರು.
ಕೂಡಲೇ ರಾಜ್ಯ ಸಕಾ೯ರ ಪಠ್ಯ ಪುಸ್ತಕಗಳಲ್ಲಿ ಬಸವಣ್ಣನವರ ಹಾಗೂ ಅವರ ಸಮಕಾಲೀನ ಶರಣರ ವಚನಗಳನ್ನು ಮತ್ತು ಅವರ ಜೀವನ ಚರಿತ್ರೆಯ ಕುರಿತು ಪುಸ್ತಕದಲ್ಲಿ ಪ್ರಕಟಿಸಬೇಕು.
ಒಂದು ವೇಳೆ ಸರ್ಕಾರ ಈ ಮೊಂಡುತನವನ್ನು ಮುಂದುವರಿಸಿದರೆ, ಸಕಾ೯ರಕ್ಕೆ ಮುಂಬರುವ ದಿನಗಳಲ್ಲಿ ತಕ್ಕ ಪಾಠ ಕಲಿಸ ಬೇಕಾಗುತ್ತದೆ ಎಂದು ಅವರು ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.