spot_img
spot_img

ಭಾಷಾಪ್ರೇಮವಿರಲಿ, ಸೂಕ್ಷ್ಮ ಪ್ರದೇಶದಲ್ಲಿ ಕನ್ನಡ ಉಳಿಸುವ ಬೆಳೆಸುವ ಅನಿವಾರ್ಯತೆ ಇದೆ: ಅಲ್ಲಮಪ್ರಭು ಶ್ರೀ

Must Read

ಬೆಳಗಾವಿ – ಜನಪ್ರತಿನಿಧಿಗಳು ಸೇರಿದಂತೆ ಎಲ್ಲರಲ್ಲೂ ಕನ್ನಡ ಭಾಷಾ ಪ್ರೇಮವಿರಲಿ. ಬೆಳಗಾವಿಯಂತಹ ಸೂಕ್ಷ್ಮ ಪ್ರದೇಶದಲ್ಲಿ ಕನ್ನಡ ಉಳಿಸುವ ಅನಿವಾರ್ಯತೆ ಇದೆ. ಕೇವಲ ಕ.ಸಾ.ಪ ಕನ್ನಡ ಬೆಳೆಸುವ ಪ್ರಕ್ರಿಯೆಯಲ್ಲಿ ಪಾಲ್ಗೊಂಡರೆ ಸಾಲದು. ಎಲ್ಲರೂ ಸಹ ಭಾಷೆಗೆ ಹೆಚ್ಚಿನ ಒತ್ತುಕೊಟ್ಟು ತನು-ಮನ-ಧನ ಅರ್ಪಿಸಿದಾಗ ಮಾತ್ರ ಕನ್ನಡ ಉಳಿಯುತ್ತದೆ ಎಂದು ಬೆಳಗಾವಿ ಕ.ಸಾ.ಪ ತಾಲೂಕು ಘಟಕದ ಉದ್ಘಾಟನಾ ಸಮಾರಂಭದಲ್ಲಿಬೆಳಗಾವಿಯ ನಾಗನೂರು ರುದ್ರಾಕ್ಷಿಮಠದ ಶ್ರೀ ಮ.ನಿ. ಪ್ರ. ಅಲ್ಲಮಪ್ರಭು ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಅಭಿಪ್ರಾಯ ವ್ಯಕ್ತಪಡಿಸಿದರು.

ರವಿವಾರ ದಿ.13 ರಂದು ಬೆಳಗಾವಿ ತಾಲೂಕಿನಲ್ಲಿ ಕ.ಸಾ.ಪ ತಾಲೂಕು ಘಟಕದ ಉದ್ಘಾಟನೆ ಮತ್ತು ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಸಮಾರಂಭ ಜರುಗಿತು. ಗಡಿಭಾಗದಲ್ಲಿ ಕನ್ನಡವನ್ನು ಬೆಳೆಸುವ ಕಾರ್ಯದಲ್ಲಿ ಕೆ.ಎಲ್.ಇ ಸಂಸ್ಥೆ, ನಾಗನೂರು ಮಠಗಳು ತನ್ನದೇ ಆದ ಸೇವೆಯನ್ನು ಮಾಡುತ್ತಾ ಬಂದಿವೆ. ಕಾಲ ಮಿಂಚಿಲ್ಲ ಈಗಲೂ ನಾವು ಭಾಷಾಪ್ರೇಮ ಬೆಳೆಸಿಕೊಂಡು ಉಳಿಸೋಣ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕ.ಸಾ.ಪ ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್, ಹಳ್ಳಿಹಳ್ಳಿಗಳಲ್ಲಿ ಸಾಹಿತ್ಯಕ ಕೆಲಸಗಳು ನಡೆಯಲಿ. ಅನ್ಯ ಭಾಷಿಕರನ್ನು ನೋಡಿದರೆ ನಮಗೆ ಭಾಷೆಯ ಅಭಿಮಾನ ಕಡಿಮೆ. ಅದು ಹೆಚ್ಚಲಿ. ಕನ್ನಡ ಭವನ ಕನ್ನಡ ಪರವಾದ ಚಟುವಟಿಕೆಗಳಿಗೆ ಮೀಸಲಾಗಿದೆ. ಆ ನಿಟ್ಟಿನಲ್ಲಿ ಒಳ್ಳೆಯ ಕಾರ್ಯಕ್ರಮಗಳನ್ನು ಮಾಡುವುದರ ಮೂಲಕ ನಾಡುನುಡಿಯನ್ನು ಸಮೃದ್ಧಿ ಗೊಳಿಸೋಣ ಎಂದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆ ಮೊದಲಿಗೆ ಕನ್ನಡ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ನಿಟ್ಟಿನಲ್ಲಿ ಎಲ್ಲರೂ ಕಾಲವನ್ನು ಮೀಸಲಿಟ್ಟು ಸೇವೆ ಮಾಡಬೇಕಾದ ಅನಿವಾರ್ಯತೆ ಬಂದಿರುವುದು ನಿಜಕ್ಕೂ ಖೇದನೀಯ. ಜನಪ್ರತಿನಿಧಿಗಳು ಮೊದಲಿಗೆ ಕನ್ನಡ ಭಾಷೆಗೆ ಆದ್ಯತೆ ನೀಡುವುದನ್ನು ರೂಡಿಸಿಕೊಳ್ಳಬೇಕು. ಸರಕಾರದಿಂದ ಬರುವ ಸೌಲಭ್ಯಗಳನ್ನು ಮುಂಬರುವ ದಿನಗಳಲ್ಲಿ ಸಾಹಿತ್ಯಕ ಕ್ಷೇತ್ರ ಬಲಪಡಿಸಲು ಶ್ರಮಿಸುವೆ ಎಂದರು.

ಕಾರ್ಯಕ್ರಮದ ಆರಂಭದಲ್ಲಿ ಶಿವಾಪುರದ ಸರಕಾರಿ ಕನ್ನಡ ಪ್ರೌಢಶಾಲೆಯ ಮಕ್ಕಳು ನಾಡಗೀತೆ ಪ್ರಸ್ತುತಪಡಿಸಿದರು. ಕ.ಸಾ.ಪ ಜಿಲ್ಲಾ ಸಹ ಕಾರ್ಯದರ್ಶಿ ಶಿವಾನಂದ ತಲ್ಲೂರ ನೂತನ ಕಾರ್ಯಕಾರಿ ಸಮಿತಿಯ ಸದಸ್ಯರನ್ನು ಪರಿಚಯಿಸಿದರು ನಂತರ ಬೆಳಗಾವಿ ತಾಲೂಕಿನ ನೂತನ ಕಾರ್ಯಕಾರಿ ಸಮಿತಿಗೆ ನೇಮಕಗೊಂಡ ಗೌರವ ಕಾರ್ಯದರ್ಶಿಗಳಾದ ಎನ್. ಬಿ. ಕರವಿನಕೊಪ್ಪ, ಜ್ಞಾನದೀಪ ಸಂಸ್ಥೆಯ ರಮೇಶ ಬಾಗೇವಾಡಿ, ಮಹಿಳಾ ಪ್ರತಿನಿಧಿಗಳಾದ ಸಾಹಿತಿಗಳಾದ ರಾಜನಂದಾ ಘಾರ್ಗಿ, ಆಶಾ ಯಮಕನಮರಡಿ, ಸಂಘ ಸಂಸ್ಥೆಗಳ ಪ್ರತಿನಿಧಿ ಬಿ.ಜಿ ವಾಲಿಇಟಗಿ, ಶಿಕ್ಷಣ ಇಲಾಖೆಯ ಬೆಳಗಾವಿ ಗ್ರಾಮೀಣ ವಲಯದ ಶಿಕ್ಷಣಾಧಿಕಾರಿಗಳಾದ ರುದ್ರಗೌಡ ಜುಟ್ಟನವರ, ಬೆಳಗಾವಿ ನಗರವಲಯದ ರವಿ ಭಜಂತ್ರಿ, ಸದಸ್ಯರಾಗಿ ನೇಮಕಗೊಂಡ ಜ್ಞಾನದೀಪ ಸಂಸ್ಥೆಯ ಲೋಕೇಶ ತಲ್ಲೂರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪ್ರಕಾಶ ದೇಯಣ್ಣವರ, ಎಂ.ಜಿ.ಪಾಟೀಲ, ಡಾ. ಎಸ್. ಡಿ ಪಾಟೀಲ, ಡಾ. ಜಯಾನಂದ ಧನವಂತ, ಅರ್ಜುನ ಕಡಟ್ಟಿ, ರಮೇಶ ಮಾಳಗಿ, ಪುಂಡಲೀಕ ಲಮಾಣಿ, ಪ್ರಕಾಶ ಪಾಟೀಲ, ನಿತಿನ ಮೆಣಸಿನಕಾಯಿ, ಮತ್ತು ಮಾಧ್ಯಮ ಪ್ರತಿನಿಧಿಗಳಾಗಿ ನೇಮಕಗೊಂಡ ರಮೇಶ ಮಗದುಮ್ , ವಿನೋದ ಜಗಜಂಪಿ ಯವರನ್ನು ಕನ್ನಡದ ಧ್ವಜ, ಕೊರಳುಪಟ್ಟಿ ನೀಡುವುದರ ಮೂಲಕ ಸನ್ಮಾನಿಸಿ ಕನ್ನಡ ಸಾಹಿತ್ಯದ ಸೇವೆಯನ್ನು ಮಾಡುವ ಜವಾಬ್ದಾರಿಯನ್ನು ನೀಡಲಾಯಿತು. ಜವಾಬ್ದಾರಿ ಸ್ವೀಕರಿಸಿ ಮಾತನಾಡಿದ ಬೆಳಗಾವಿ ನಗರವಲಯದ ಶಿಕ್ಷಣಾಧಿಕಾರಿ ರವಿ ಭಜಂತ್ರಿ ನಾವೆಲ್ಲ ಕನ್ನಡದಲ್ಲಿ ಸ್ಪಷ್ಟತೆಯನ್ನು ರೂಢಿಸಬೇಕಿದೆ.ನಮ್ಮತನದ ಭಾವನೆ ಬೆಳೆಸಿ ವಹಿಸಿದ ಜವಾಬ್ದಾರಿಯನ್ನು ಪ್ರೀತಿಯಿಂದ ನಿಭಾಯಿಸೋಣ ಎಂದರು. ಹಿರಿಯ ಸಾಹಿತಿ ಮತ್ತು ಜಿಲ್ಲಾ ಲೇಖಕಿಯರ ಸಂಘದ ಸಂಸ್ಥಾಪಕ ಅಧ್ಯಕ್ಷೆ ಆಶಾ ಕಡಪಟ್ಟಿ ಅವರು ಮಾತನಾಡಿ ಯುವಜನಾಂಗಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಯಶಸ್ವಿಯಾಗಿ ಸಂಘಟನಾತ್ಮಕವಾಗಿ ಮುನ್ನಡೆಸಿಕೊಂಡು ಯಶದ ದಡ ಸೇರಿಸಲಿ ಎಂದು ಶುಭ ಹಾರೈಸಿದರು. ಅತಿಥಿಗಳಾಗಿ ಆಗಮಿಸಿದ್ದ ಸಾಹಿತಿ ಪಿ .ಜಿ ಕೆಂಪನ್ನವರ ಮಾತನಾಡಿ ಗಡಿ ಬೆಳಗಾವಿಯಲ್ಲಿ ನಿರಂತರ ಕನ್ನಡ ಚಟುವಟಿಕೆಗಳು ಕ್ರಿಯಾತ್ಮಕವಾಗಿ ನಡೆಯಲಿ, ಅನ್ಯ ಭಾಷೆಯಲ್ಲಿರುವ ಸಂಘಟನೆಗಳಷ್ಟು ಕನ್ನಡದಲ್ಲಿ ಸಂಘಟನೆಗಳ ಕೊರತೆ ಇದೆ. ಆ ನಿಟ್ಟಿನಲ್ಲಿ ಸಂಪೂರ್ಣವಾಗಿ ವ್ಯಾಪಕವಾಗಿ ಸಂಘಟನೆಗಳು ಹುಟ್ಟು ಕೊಳ್ಳಲಿ, ಉದಯೋನ್ಮುಖ ಸಾಹಿತಿಗಳು ಬೆಳೆದು ಸಾಹಿತ್ಯ ಶ್ರೀಮಂತವಾಗಲಿ ಎಂದರು. ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯದರ್ಶಿ ಎಂ. ವೈ. ಮೆಣಸಿನಕಾಯಿ , ವೀರಭದ್ರ ಅಂಗಡಿ, ಎಫ್.ಐ. ತಳವಾರ, ಸಂಘಟನೆಗಳ ನಾಯಕರಾದ ಮಹಾದೇವ ತಳವಾರ, ಅಭಿಲಾಶ, ಹಿರಿಯ ಸಾಹಿತಿಗಳಾದ ಡಾ. ಗುರುದೇವಿ ಹುಲೆಪ್ಪನವರಮಠ, ಡಾ. ಎಸ್. ಎಸ್. ಅಂಗಡಿ,ಮೋಹನ ಪಾಟೀಲ,ಡಾ. ಹೆಚ್. ಐ. ತಿಮ್ಮಾಪೂರ ರಾಜೇಶ್ವರಿ ಹಿರೇಮಠ, ಎಸ್ ಎಸ್ ಪಾಟೀಲ ಸಿ.ಎಂ ಬೂದಿಹಾಳ, ಎ. ಎಸ್ ಕಮತೆ ಸೇರಿದಂತೆ ತಾಲೂಕಿನ ಶಿಕ್ಷಕ ಬಳಗ, ಸಾಹಿತ್ಯ ಬಳಗ ಸೇರಿದಂತೆ ಕನ್ನಡ ಅಭಿಮಾನಿಗಳು ಪಾಲ್ಗೊಂಡಿದ್ದರು. ಕಾರ್ಯಕ್ರಮದ ಆರಂಭದಲ್ಲಿ ರಾಜನಂದಾ ಘಾರ್ಗಿ ಸ್ವಾಗತಿಸಿದರು. ಬೆಳಗಾವಿ ತಾಲೂಕಾ ಕ.ಸಾ.ಪ ಅಧ್ಯಕ್ಷ ಸುರೇಶ ಹಂಜಿ ಪ್ರಾಸ್ತಾವಿಕವಾಗಿ ಮಾತನಾಡುವುದರ ಜೊತೆಗೆ ತಾಲೂಕು ಕಸಾಪ ರೂಪಿಸಿರುವ ಯೋಜನೆಗಳ ಕುರಿತು ತಿಳಿಸಿದರು. ಸಾಹಿತ್ಯ ಆಶಾ ಯಮಕನಮರಡಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ನಿರೂಪಿಸಿದರು. ಕೊನೆಯಲ್ಲಿ ಕಾರ್ಯದರ್ಶಿ ಎನ್. ಬಿ ಕರವಿನಕೊಪ್ಪ ವಂದಿಸಿದರು.

- Advertisement -
- Advertisement -

Latest News

ರಿಯಾಯಿತಿ ದರದಲ್ಲಿ ಸಂತಾನ ಪ್ರಾಪ್ತಿ ಚಿಕಿತ್ಸೆ

ಬೆಳಗಾವಿ: ಮಕ್ಕಳಿಲ್ಲದ ಬಡ ದಂಪತಿಗಳಿಗೆ ರಿಯಾಯಿತಿ ದರದಲ್ಲಿ ಸಂತಾನ ಪ್ರಾಪ್ತಿ ಚಿಕಿತ್ಸೆ ಕೊಡಿಸಲು ಕೊಲ್ಲಾಪುರದ ಸಿದ್ಧಗಿರಿ ಮಠದ ದತ್ತಿ ಆಸ್ಪತ್ರೆಯಲ್ಲಿ ಐವಿಎಫ್ ಕೇಂದ್ರ ಸ್ಥಾಪಿಸಲಾಗಿದೆ ಎಂದು ಮುಜರಾಯಿ,...
- Advertisement -

More Articles Like This

- Advertisement -
close
error: Content is protected !!