ಬೈಲಹೊಂಗಲ: ಪಟ್ಟಣದ ಮಾಜಿ ಶಾಸಕ ಜಗದೀಶ ಮೆಟಗುಡ್ಡ ಅವರ ಗೃಹಕಚೇರಿಯಲ್ಲಿ ಇಂದು ಜರುಗಿದ ಬೈಲಹೊಂಗಲ ಮಂಡಲದ ಬಿಜೆಪಿ ಸದಸ್ಯತ್ವ ಅಭಿಯಾನ ಕಾರ್ಯಗಾರದ ಉದ್ಘಾಟನೆಯನ್ನು ಮಾಜಿ ಶಾಸಕ ಜಗದೀಶ ಮೆಟಗುಡ್ಡ ನೇರವೇರಿಸಿ ಮಾತನಾಡಿದರು.
ವಿಶ್ವದಲ್ಲಿ ಅತ್ಯಂತ ದೊಡ್ಡದಾದ ಪಕ್ಷ ಬಿಜೆಪಿಯಾಗಿದ್ದು ಸುಮಾರು 10 ರಿಂದ 15 ಕೋಟಿ ಸದಸ್ಯರನ್ನ ಮಾಡುವ ಉದ್ದೇಶವಿದ್ದು ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಜಿ ಅವರು ಹಾಗೂ ನಮ್ಮ ರಾಷ್ಟ್ರೀಯ ಅಧ್ಯಕ್ಷರಾದ ಜೆ ಪಿ ನಡ್ಡಾ, ರಾಜ್ಯಾಧ್ಯಕ್ಷರಾದ ಬಿ ವೈ ವಿಜಯೇಂದ್ರ ನೇತೃತ್ವದಲ್ಲಿ ಈಗಾಗಲೇ ಚಾಲನೆ ದೊರೆತಿದೆ, ಬೈಲಹೊಂಗಲ ಮಂಡಲದಲ್ಲಿ ಸುಮಾರು 60 ರಿಂದ 70,000 ಸದಸ್ಯರನ್ನ ಮಾಡುವ ಉದ್ದೇಶವಿದ್ದು. ಪ್ರತಿ ಬೂತ್ ವರೆಗೂ ನಮ್ಮ ಪಕ್ಷದ ಪದಾಧಿಕಾರಿಗಳು ಕಾರ್ಯಕರ್ತರು ಹೋಗಿ ಬಿಜೆಪಿ ಸದಸ್ಯತ್ವ ಮಾಡಬೇಕೆಂದು ಹೇಳಿದರು
ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷರಾದ ಸುಭಾಸ ತುರಮರಿ, ಉದ್ಯಮಿ ವಿಜಯ ಮೆಟಗುಡ್ಡ, ಜಿಲ್ಲಾ ಉಪಾಧ್ಯಕ್ಷ ಗುರು ಮೆಟಗುಡ್ಡ, ಸಹಕಾರ ಪ್ರಕೊಷ್ಠ ಜಿಲ್ಲಾ ಸಂಚಾಲಕ ಸುನೀಲ್ ಮರಕುಂಬಿ, ಲಕ್ಕಪ್ಪ ಕಾರ್ಗಿ, ಅನೇಕ ಪಕ್ಷದ ಪದಾಧಿಕಾರಿಗಳು ಬೂತ್ ಪ್ರಮುಖರು ಹಿರಿಯರು ಕಾರ್ಯಕರ್ತರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಸಂತೋಷ ಹಡಪದ ಮಾತನಾಡಿದರು, ಉಮೇಶ ರಾಮ್ ವಂದಿಸಿದರು.