spot_img
spot_img

ಸೇವಾದಳ ಶಿಕ್ಷಕರಿಗೆ ಪುನಶ್ಚೇತನ ಕಾರ್ಯಕ್ರಮ

Must Read

- Advertisement -

ಸಿಂದಗಿ – ಭಾರತ ಸೇವಾದಳ ಸಮಿತಿ ವಿಜಯಪುರ ಇವರು ಹಮ್ಮಿಕೊಂಡ ಸೇವಾದಳದ ಶಿಕ್ಷಕರಿಗೆ ಪುನಶ್ಚೇತನ ಕಾರ್ಯಕ್ರಮ ಸ್ಥಳೀಯ ಸರಕಾರಿ ಮಾದರಿ ಪ್ರಾಥಮಿಕ ಹಾಗೂ ಮಾತೋಶ್ರೀ ಮುರಿಗೆಮ್ಮ ತಿಪ್ಪಣ್ಣ ಸುಣಗಾರ ಸರಕಾರಿ ಪ್ರೌಢ ಶಾಲೆಯಲ್ಲಿ ಜರುಗಿತು.

ನಾ ಸು ಹರ್ಡೇಕರ್ ಮಂಜಪ್ಪನವರ ಭಾವಚಿತ್ರಕ್ಕೆ ಪುಷ್ಪ ಗಳನ್ನು ಸಲ್ಲಿಸುವುದರ ಮೂಲಕ ಉದ್ಘಾಟನೆ ಮಾಡಲಾಯಿತು.

ಪ್ರಾಸ್ತಾವಿಕ ಮಾತಿನಲ್ಲಿ ನಿವೃತ್ತ ಶಿಕ್ಷಕ ಹಾಗೂ ಸೇವಾದಳದ ಅಗ್ರಜರಾಗಿರುವ ಶಾಂತೇಶ ಕುಂಬಾರ ಇವರು ಮಕ್ಕಳಲ್ಲಿ ರಾಷ್ಟ್ರೀಯ ಭಾವೈಕ್ಯತೆಯನ್ನು ಮೂಡಿಸುವಲ್ಲಿ ಸೇವಾದಳದ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ತಾಲೂಕಿನ ಶಿಕ್ಷಕರಿಗೆ ಸೆಲ್ಯೂಟ್ ಹೊಡೆಯುವುದರ ಮೂಲಕ ಕೃತಜ್ಞತೆಯನ್ನು ಸಲ್ಲಿಸಿದರು. ನಂತರದಲ್ಲಿ ಅತ್ಯುನ್ನತ ಸೇವೆಯನ್ನು ಮಾಡಿರುವ ಭಾರತ ಸೇವಾದಳದ ನಿವೃತ್ತ ಶಿಕ್ಷಕರಾದ ಶಾಂತೇಶ ಕುಂಬಾರ, ವಿಜಯಪುರ ಜಿಲ್ಲೆಯ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷರಾದ ಸಂಗು ಮಲ್ಲೇದ ಹಾಗೂ ಬುದ್ಧ ಬಸವ ಅಂಬೇಡ್ಕರ್ ಪ್ರಶಸ್ತಿಯನ್ನು ಪಡೆದ ಆರ್ ಎಸ್ ಭಜಂತ್ರಿ ಶಿಕ್ಷಕರನ್ನು ಸನ್ಮಾನಿಸಲಾಯಿತು.

- Advertisement -

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸರಕಾರಿ ಕನ್ನಡ ಗಂಡು ಮಕ್ಕಳ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯಗುರುಗಳಾದ ಶರಣಬಸವ ಲಂಗೋಟಿ ಯವರು ಭಾರತ ಸೇವಾದಳ ನಡೆದು ಬಂದ ದಾರಿ ಅದರ ಧ್ಯೇಯ ಉದ್ದೇಶಗಳನ್ನು ತಿಳಿಸುತ್ತಾ, ಮಕ್ಕಳಲ್ಲಿ ದೇಶಾಭಿಮಾನ ಮೂಡಿಸಲು ಆಗಾಗ ಭಾರತ್ ಸೇವಾದಳದ ಕಾರ್ಯಕ್ರಮಗಳು ಪುನಶ್ಚೇತನ ನೀಡುತ್ತವೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿದ್ದ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಶಿವಾನಂದ ಶಹಪೂರ ಅವರು, ಸೈನಿಕರಂತೆ ಮಕ್ಕಳಲ್ಲಿಯೂ ದೇಶಾಭಿಮಾನ ಮೂಡಿಸಿ ರಾಷ್ಟ್ರಗೀತೆ, ರಾಷ್ಟ್ರಗಾನ, ನಾಡಗೀತೆ ಇವುಗಳಿಗೆ ಗೌರವವನ್ನು ಕೊಟ್ಟು ನಿಗದಿಪಡಿಸಿದ ಸೂಕ್ತ ಸಮಯದಲ್ಲಿ ಸುಮಧುರ ಕಂಠದಿಂದ ಹಾಡುವ ಬಗೆಯನ್ನು ತಿಳಿಸಿಕೊಡುವಲ್ಲಿ ಸೇವಾದಳದ ಸಂಘಟಕರ ಪಾತ್ರ ಹೆಮ್ಮೆ ಪಡುವಂತಿದೆ ಎಂದರು.

ವಲಯ ಸಂಘಟಕರಾದ ನಾಗೇಶ ಡೋಣೂರ ಅವರು ಕಾರ್ಯಕ್ರಮಕ್ಕೆ ಬಂದ ಎಲ್ಲ ಶಿಕ್ಷಕರಿಗೆ ತರಬೇತಿಯನ್ನು ನೀಡಿದರು. ಆರ್ ಎಸ್ ನಿಂಬಾಳ್ಕರ್ ಗುರುಗಳು ನಿರೂಪಣೆ, ಡಿ ಜಾಧವ್ ಅವರು ಸ್ವಾಗತ ಮತ್ತು ಶಿಸ್ತಿನ ಸಿಪಾಯಿಯಾದ ಶಿಂಧೆ ಅವರು ವಂದನಾರ್ಪಣೆ ಮಾಡಿದರು.

- Advertisement -
- Advertisement -

Latest News

ಇದು ಇಂದಿನ ಹಾಸ್ಟೆಲ್ ಹುಡುಗ ಹುಡುಗಿಯರಿಗೆ ನಾವೆಲ್ಲ ಹೇಳಬೇಕಾದ ಖಾಸ್ ಬಾತ್

ಸರ್... ಓ ಸರ್...ಕಾಂಬಳೆ ಸರ್  ... ಸರ್ ನಮಸ್ಕಾರ್ರಿ ಆರಾಮ ಅದೀರಿ?? ನಾ ಯಾರ್ ಹೇಳ್ರಿ ಅನ್ನುತ್ತಿದ್ದಂತೆಯೇ ನಿವೃತ್ತಿ ಹೊಂದಿ ಐದಾರು ವರ್ಷ ಆಗಿದ್ದ ಬಿಸಿಎಮ್...
- Advertisement -

More Articles Like This

- Advertisement -
close
error: Content is protected !!
Join WhatsApp Group