spot_img
spot_img

ವಿಜ್ಞಾನ ಬೆಳೆದಷ್ಟೂ ಸಂಬಂಧಗಳ ನಾಶವಾಗುತ್ತಿದೆ – ರಂಭಾಪುರಿ ಶ್ರೀ

Must Read

spot_img
- Advertisement -

ಸಿಂದಗಿ– ಇಂದಿನ ಸಮಾಜ ಅತ್ಯಂತ ಕಲುಷಿತಗೊಳ್ಳುತ್ತಿದೆ ಕಾರಣ ಇಂದಿನ ವೈಜ್ಞಾನಿಕ ಜಗತ್ತಿನಲ್ಲಿ ನಡೆಯುತ್ತಿರುವ ವಿದ್ಯಮಾನಗಳು. ವಿಜ್ಞಾನ ಬೆಳೆದಷ್ಟು ಅಭಿವೃದ್ದಿ ಸತ್ಯ ಅದರ ಜೊತೆಗೆ ಅನೇಕ ಮಾನವೀಯ ಸಂಬಂಧಗಳು ವಿನಾಶವಾಗುತ್ತಿರುವುದು ಅಷ್ಟೇ ಸತ್ಯವಾಗಿದೆ. ಮಾಜಿ ಸಚಿವ ದಿ.ಎಂ.ಸಿ.ಮನಗೂಳಿ ಅವರು ತಾವು ಇರುವಷ್ಟು ದಿನಗಳು ಸಮಾಜ, ಅಭಿವೃದ್ದಿ, ಹೊಸ ಹೊಸ ಚಿಂತನೆ, ನೀರಾವರಿ ಸೇರಿದಂತೆ ಅನೇಕ ಅಭಿವೃದ್ದಿ ಪರವಾದ ನಿಲುವುಗಳ ಮೇಲೆ ಬದುಕು ಸಾಗಿಸಿದವರು ಎಂದು ಬಾಳೆಹೊನ್ನುರಿನ ರಂಭಾಪುರಿ ಪೀಠದ ಡಾ. ವೀರ ಸೋಮೇಶ್ವರ ಶಿವಾಚಾರ್ಯರು ಹೇಳಿದರು.

ಅವರು ಸಮೀಪದ ಕಡಕೋಳ ಗ್ರಾಮದಲ್ಲಿನ ಶ್ರೀ ಮಡಿವಾಳೇಶ್ವರ ಮಠದಲ್ಲಿ ಶ್ರೀ ಮಡಿವಾಳೇಶ್ವರರ ದ್ವಿಶತಮಾನೋತ್ಸವ ಹಾಗೂ ಡಾ.ರುದ್ರಮುನಿ ಶಿವಾಚಾರ್ಯರರ ಪಟ್ಟಾಧಿಕಾರ ರಜತ ಮಹೋತ್ಸವದ ನಿಮಿತ್ತ ನಡೆದ ಹಲವಾರು ಕಾರ್ಯಕ್ರಮ ಹಾಗೂ ಮಾಜಿ ಸಿಎಂ ಧರ್ಮಸಿಂಗ್ ಅವರ ಸ್ಮರಣಾರ್ಥ ಶಾಸಕ ಅಜಯಸಿಂಗ್ ಮತ್ತು ದಿ.ಎಮ್.ಸಿ.ಮನಗೂಳಿ ಅವರ ಸ್ಮರಣಾರ್ಥ ಮನಗೂಳಿ ಮನೆತನ ಕೊಡಮಾಡಿದ ಮಹಾದಾನದಿಂದ ನಿರ್ಮಾಣಗೊಂಡ ಭವ್ಯ ಮಹಾದ್ವಾರವನ್ನು ಉದ್ಘಾಟಿಸಿ ಮಾತನಾಡಿ, ಮಠಗಳು ಧಾರ್ಮಿಕ ಶ್ರದ್ದಾ ಕೇಂದ್ರಗಳು. ಸಮಾಜಕ್ಕೆ ಸಂಸ್ಕೃತಿ, ಆಚಾರ, ವಿಚಾರ, ಪರಂಪರೆ, ಭಕ್ತಿ ಸೇರಿದಂತೆ ಅನೇಕ ಮಾನವೀಯ ವಿಚಾರಗಳನ್ನು ನೀಡುವಲ್ಲಿ ಮಠಗಳ ಪಾತ್ರ ಹಿರಿಯದು. ಮಠ ಮಾನ್ಯಗಳ ಅಭಿವೃದ್ದಿಗೆ ಮಾಜಿ ಸಚಿವ ದಿ.ಎಂ.ಸಿ.ಮನಗೂಳಿ ಅವರ ಸ್ಮರಣಾರ್ಥವಾಗಿ ಮನಗೂಳಿ ಮನೆತನ ಕಡಕೋಳದ ಮಡಿವಾಳೇಶ್ವರ ಶ್ರೀಮಠದ ಮಹಾದ್ವಾರಕ್ಕೆ ರೂ.10 ಲಕ್ಷ ಹಣವನ್ನು ನೀಡಿ ಶ್ರೀಮಠದ ಅಭಿವೃದ್ದಿಗೆ ಶ್ರಮಿಸಿದ್ದು ನಿಜಕ್ಕೂ ಸಂತಸ ತಂದಿದೆ ಇದು ಶ್ರೀಮಠದ ಅನೇಕ ಭಕ್ತರಿಗೆ ಸಂತೋಷವನ್ನುಂಟು ಮಾಡಿದೆ ಎಂದರು.

ಈ ಸಂದರ್ಭದಲ್ಲಿ ಶ್ರೀಮಠದ ಪೀಠಾಧ್ಯಕ್ಷ ಡಾ.ರುದ್ರಮನಿ ಶಿವಾಚಾರ್ಯರು ಮಾತನಾಡಿ, ಶ್ರೀಮಠದ ಮಹಾದ್ವಾರದ ನಿರ್ಮಾಣ ಕನಸು ಅನೇಕ ವರ್ಷಗಳಿಂದ ಕೂಡಿತ್ತುಆದರೆ ಪ್ರಸ್ತುತ ದಿ.ಎಮ್.ಸಿ.ಮನಗೂಳಿ ಅವರ ಮನೆತನದ ಸಹಾಯ ಹಸ್ತದಿಂದ ಅದು ನೆರವೇರಿದೆ.ಶ್ರೀಮಠದ ಸಮಸ್ತ ಭಕ್ತವೃಂದದ ಪರವಾಗಿ ಮನಗೂಳಿ ಮನೆತನಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇವೆ ಎಂದು ಹೇಳಿದರು.

- Advertisement -

ಮಹಾದಾನಿ ದಿ.ಎಮ್.ಸಿ.ಮನಗೂಳಿ ಅವರ ಪುತ್ರ ಡಾ.ಅರವಿಂದ ಮನಗೂಳಿ ಅವರು ಮಾತನಾಡಿ, ಇಂದಿನ ಸಮಾಜದ ಉನ್ನತೀಕರಣಕ್ಕೆ ಮಠಗಳು ಅತ್ಯಂತ ಪವಿತ್ರವಾದ ಕಾರ್ಯ ಮಾಡುತ್ತಿವೆ. ಮಠಕ್ಕೆ ಭಕ್ತರು ಬೆನ್ನಲುಬಾಗಿ ನಿಂತರೆ ಒಂದು ಸರ್ಕಾರ ಮಾಡುವಷ್ಟು ಕಾರ್ಯಗಳನ್ನು ಮಠಗಳು ಮಾಡುತ್ತವೆ ಅದಕ್ಕೆ ಕಡಕೋಳದ ಶ್ರೀಮಠವೇ ಸಾಕ್ಷಿಯಾಗಿದೆ. ಪಾಲಕರು ಮಕ್ಕಳಿಗೆ ಉತ್ತಮ ಸಂಸ್ಕಾರ, ನೀತಿ, ಮಾನವೀಯತೆಯನ್ನು ಕಲಿಸಲು ಮುಂದಾಗಬೇಕಾಗಿದ್ದು ಪ್ರಸ್ತುತ ಅನಿವಾರ್ಯವಾಗಿದೆ ಎಂದರು.

ಈ ಸಂದರ್ಭದಲ್ಲಿ ಸಂಸದ ಉಮೇಶ ಜಾಧವ, ಯಡ್ರಾಮಿಯ ಶ್ರೀ ಸಿದ್ದಲಿಂಗ ಸ್ವಾಮೀಜಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಯಂಕಂಚಿ ಹಿರೇಮಠದ ರುದ್ರಮಿನಿ ಶಿವಾಚಾರ್ಯರು, ದೇವಾಪುರ ಶ್ರೀಗಳು, ಕುಕೂನೂರ ಶ್ರೀಗಳು, ಮಾಜಿ ಶಾಸಕ ದೊಡ್ಡಪ್ಪೌಡ ಪಾಟೀಲ ನರಬೋಳಿ, ಶಿವಶರಣಪ್ಪ ಸಿರಿ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

- Advertisement -
- Advertisement -

Latest News

10ರಂದು ಅಬ್ಬಿಗೇರಿ ದಂಪತಿಯ 15 ಕೃತಿ ಲೋಕಾರ್ಪಣೆ

ಬೆಳಗಾವಿ: ಜಿಲ್ಲಾ ಲೇಖಕಿಯರ ಸಂಘ ಬೆಳಗಾವಿ ಹಾಗೂ ಲೋಕವಿದ್ಯಾ ಪ್ರಕಾಶನ ಸಂಕೇಶ್ವರ ಇವರ ಸಂಯುಕ್ತ ಆಶ್ರಯದಲ್ಲಿ ಉಪನ್ಯಾಸಕಿ, ಲೇಖಕಿ ಜಯಶ್ರೀ ಮತ್ತು ಜಯಪ್ರಕಾಶ ಅಬ್ಬಿಗೇರಿ ದಂಪತಿಗಳ...
- Advertisement -

More Articles Like This

- Advertisement -
close
error: Content is protected !!
Join WhatsApp Group