Mudalagi: ಸುಣಧೋಳಿ ಮಹಿಳಾ ಸಹಕಾರಿಯ ಐಎಫ್‍ಎಸ್‍ಸಿ ಕೋಡ್ ಬಿಡುಗಡೆ

Must Read

ಮೂಡಲಗಿ: ತಾಲೂಕಿನ ಸುಣಧೋಳಿ ಗ್ರಾಮದ ಸುಣಧೋಳಿ ಮಹಿಳಾ ಕ್ರೆಡಿಟ ಸೌಹಾರ್ದ ಸಹಕಾರಿ ಸಂಘದವರು ಐಸಿಐಸಿಐ ಬ್ಯಾಂಕ್ ಸಹಯೋಗದೊಂದಿಗೆ ಐಎಫ್‍ಎಸ್‍ಸಿ ಕೋಡ್ ಬಿಡುಗಡೆ ಸಮಾರಂಭ ಜರುಗಿತು.

ಸಮಾರಂಭ ಸಾನ್ನಿಧ್ಯ ವಹಿಸಿದ್ದ ಸುಣಧೋಳಿ ಜಡಿಸಿದ್ದೇಶ್ವರ ಮಠದ ಪೀಠಾಧೀಪತಿ ಶ್ರೀ ಶಿವಾನಂದ ಸ್ವಾಮೀಜಿಗಳು ಐಎಫ್‍ಎಸ್‍ಸಿ ಕೋಡ್ ಬಿಡುಗಡೆಗೊಳಿಸಿ ಮಾತನಾಡಿ, ಗ್ರಾಮೀಣ ಭಾಗದಲ್ಲಿನ ಜನರು  ವಿವಿಧ  ಸಂಸ್ಥೆಗಳೊಂದಿಗ ಹಣಕಾಸಿನ ವ್ಯವಹಾರ ಮಾಡಲು ಸುಣಧೋಳಿ ಮಹಿಳಾ ಸಹಕಾರಿಯವರು ಐಎಫ್‍ಎಸ್‍ಸಿ ಕೋಡ್ ಹೊಂದಿ ಅನೂಕೂಲ ಮಾಡಿರುವುದನ್ನು ಸುಣಧೋಳಿ ಗ್ರಾಮಸ್ಥರು ಮತ್ತು ಸಹಕಾರಿಯ ಗ್ರಾಹಕರು ಸದುಪಯೋಗ ಪಡಿಸಿಕೊಳ್ಳಬೇಕೆಂದರು. 

ಸಹಕಾರಿಯ ಉಪ ಪ್ರಧಾನ ವ್ಯವಸ್ಥಾಪಕ ಜಗದೀಶ ಹೊಟ್ಟಿಹೊಳಿ ಮಾತನಾಡಿ, ಸಹಕಾರಿಯ ಗ್ರಾಹಕರಿಗೆ ಮತ್ತು ಸುಣಧೋಳಿ ಮತ್ತಿ ಸುತ್ತಮುತ್ತಲಿನ ಗ್ರಾಮದ ಜನರಿಗೆ ತ್ವರಿತ ಹಣಕಾಸಿನ ವ್ಯವಹಾರಕ್ಕಾಗಿ ಶೀಘ್ರದಲ್ಲಿಯೇ ಎಟಿಎಮ್ ಮಶಿನ್ ಅಳವಡಿಸುವುದಾಗಿ ತಿಳಿಸಿದರು.

ಸಮಾರಂಭದಲ್ಲಿ  ಪ್ರಕಾಶ ಪತ್ತಾರ, ಸಹದೇವ ಕಮತಿ, ಶಿವಾನಂದ ಹೊಟ್ಟಿಹೊಳಿ, ರವೀಂದ್ರ ಸಂಕಣ್ಣವರ,  ರಮೇಶ ಹೊಟ್ಟಿಹೊಳಿ, ರಾಜಕುಮಾರ ವಾಲಿ, ಹಣಮಂತ ಪಾಶಿ, ದುರಗಪ್ಪಾ ಮಾದರ ಮತ್ತು ಐಸಿಐಸಿಐ ಬ್ಯಾಂಕಿನ ತಂತ್ರಾಂಶ ತಂಡದ ಕೆ.ಆರ್ ಕಂಬಾರ, ಸಹಕಾರಿಯ ಸಿಬ್ಬಂದಿ ವರ್ಗದವರು ಮತ್ತಿತರರು  ಉಪಸ್ಥಿತರಿದ್ದರು.

ಪ್ರಧಾನ ವ್ಯವಸ್ಥಾಪಕ ಚಿದಾನಂದ ಶಿರಗೂರ ಸ್ವಾಗತಿಸಿದರು,  ಮಾನವ ಸಂಪನ್ಮೂಲ ಅಧಿಕಾರಿ ಪ್ರಕಾಶ ಗಿಡ್ಡಗೌಡರ ವಂದಿಸಿದರು.

Latest News

ಗುಣಾತ್ಮಕ ಶಿಕ್ಷಣದ ಮೌಲ್ಯವನ್ನು ಪ್ರತಿಬಿಂಬಿಸಿದ ಜ್ಞಾನ ಗಂಗೋತ್ರಿಯ ವಾರ್ಷಿಕ ಸ್ನೇಹ ಸಮ್ಮೇಳನ

ಸಂಸ್ಕಾರ ಮತ್ತು ಸಾಧನೆಯ ಅನನ್ಯ ಸಂಗಮವಾಗಿ ಮೂಡಿಬಂದ ‘ಸ್ಪಂದನ’ ಕಾರ್ಯಕ್ರಮಮೂಡಲಗಿ: ಕಳೆದ ಹಲವು ವರ್ಷಗಳಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇಕಡಾ ೧೦೦ರಷ್ಟು ಫಲಿತಾಂಶ ದಾಖಲಿಸುತ್ತಾ ಬಂದಿರುವ ರಾಜಾಪೂರ...

More Articles Like This

error: Content is protected !!
Join WhatsApp Group