spot_img
spot_img

ಜಿಲ್ಲಾ ಲೇಖಕಿಯರ ಸಂಘದ ವತಿಯಿಂದ ಸಾಹಿತಿ ದೀಪಿಕಾ ಚಾಟೆ ಅವರ ‘ಪಂಚ ಕೃತಿಗಳ ಬಿಡುಗಡೆ’

Must Read

spot_img
- Advertisement -

ಮಕ್ಕಳ ಸಾಹಿತ್ಯ ಕೃತಿಗಳ ಕೊರತೆ ನೀಗಿಸಿ-ಜಿ. ರಾಮಯ್ಯ ಸಲಹೆ

ಇದೇ ರವಿವಾರ ದಿ.14 ರಂದು ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದ ವತಿಯಿಂದ ಸಾಹಿತಿ ದೀಪಿಕಾ ಚಾಟೆಯವರು ರಚಿಸಿದ ಐದು ಕೃತಿಗಳ ಬಿಡುಗಡೆ ಸಮಾರಂಭ ಜರುಗಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಲೇಖಕಿಯರ ಅಧ್ಯಕ್ಷೆ ಹೇಮಾವತಿ ಸೊನೊಳ್ಳಿ ಮಾತನಾಡಿ ಹಿಂದೊಮ್ಮೆ ವಿರಳ ಸಂಖ್ಯೆಯ ಲೇಖಕಿಯರಿಂದ ಕೃತಿಗಳು ರಚನೆಯಾಗುತ್ತಿದ್ದವು ಆದರೆ ಈಗ ಸಾಹಿತ್ಯ ಕೃಷಿಗೆ ಶುಕ್ರದೆಸೆ ಬಂದಿದೆ ಎಂದು ಲೇಖಕಿಯರ ಕಾರ್ಯವನ್ನು ಶ್ಲಾಘಿಸಿದರು.

- Advertisement -

ಕೃತಿಗಳನ್ನು ಲೋಕಾರ್ಪಣೆ ಮಾಡಿದ ಬೆಳಗಾವಿ ಜಿಲ್ಲಾ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕರಾದ ಜಿ. ರಾಮಯ್ಯ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಬೆಳಗಾವಿ ಜಿಲ್ಲಾ ಲೇಖಕಿಯರಿಂದ ಸಾಲು ಸಾಲು ಪುಸ್ತಕಗಳು ರಚನೆಯಾಗಿ ಬಿಡುಗಡೆಯಾಗುತ್ತಿವೆ. ಆದರೆ ಮಕ್ಕಳ ಸಾಹಿತ್ಯ ಕೃತಿಗಳ ಕೊರತೆ ಕಂಡುಬರುತ್ತಿದೆ. ಸರ್ಕಾರದಿಂದ ವಿಶೇಷವಾಗಿ ಮಕ್ಕಳ ಸಾಹಿತ್ಯಕ್ಕೆ ಪ್ರೋತ್ಸಾಹ ಇದೆ. ಆ ನಿಟ್ಟಿನಲ್ಲಿ ಸಾಹಿತಿಗಳು ಮಕ್ಕಳ ಸಾಹಿತ್ಯದತ್ತ ವಿಶೇಷ ಆಸಕ್ತಿ ವಹಿಸಬೇಕಿದೆ ಎಂದರು.

ಗಜಲ್ ಗಳ ಸಂಕಲನ ‘ದೀಪಧ್ಯಾನ’ ಕೃತಿ ಪರಿಚಯಿಸಿದ ಜ್ಯೋತಿ ಕಾಲೇಜಿನ ಉಪನ್ಯಾಸಕಿ ಡಾ. ರೇಣುಕಾ ಕಠಾರೆ, ಗಜಲ್ ಗಳು ಭಾವನೆಗಳ ಬೆಳಕು. ಜೀವನ ಸಂಬಂಧಗಳ ತೊಳಲಾಟಗಳನ್ನು ನಾವು ಮೌನವಾಗಿಯೇ ಗಜಲ್ ಗಳಲ್ಲಿ ಕಾಣಬಹುದು ಎಂದರು. ಗೋಗಟೆ ಕಾಲೇಜಿನ ಉಪನ್ಯಾಸಕರಾದ ಡಾ. ನೀತಾ ರಾವ್ ರವರು ‘ಮನಸ್ಸಿನ ಡೊಂಬರಾಟ’ ಎಂಬ ಅಂಕಣಗಳ ಬರಹಗಳ ಸಂಕಲನವನ್ನು ಪರಿಚಯಿಸಿ ಚಾಟೆಯವರು ಆಯಾ ಕಾಲದ ಪ್ರಸ್ತುತ ಸ್ಥಿತಿಗತಿಗಳು, ವಿವಿಧ ನಾಯಕರ ವ್ಯಕ್ತಿಚಿತ್ರಣ ಮತ್ತು ಜಯಂತಿಗಳನ್ನು ಸಂದರ್ಭೋಚಿತವಾಗಿ ಮತ್ತು ವಸ್ತುನಿಷ್ಠವಾಗಿ ಬರೆದಿದ್ದು ಓದುಗರನ್ನು ಸೆಳೆಯುತ್ತವೆ ಎಂದು ಪರಿಚಯಿಸಿದರು.’ ಸಂತ ಸಮರ್ಥ ರಾಮದಾಸರ ಚರಿತ್ರೆ ಮತ್ತು ಸಾಹಿತ್ಯ’ ಅನುವಾದ ಕೃತಿಯನ್ನು ಸಾಹಿತಿ ಡಾ. ನಿರ್ಮಲಾ ಬಟ್ಟಲ ಪರಿಚಯಿಸುತ್ತಾ ಸಮರ್ಥ ರಾಮದಾಸರ ಚರಿತ್ರೆ, ಅವರ ಧರ್ಮ ಸಂರಕ್ಷಣೆ, ಯುವಕರಿಗೆ ಧರ್ಮದ ಪ್ರೇರಣೆ, ಶಿಸ್ತು, ಕಳಕಳಿ, ಧೈರ್ಯವನ್ನು ಬೆಳೆಸುವ ಸಂಘಟನಾ ಶೀಲ ಮನೋಭಾವ ಮತ್ತು ಅವರ ಆಡಳಿತಾತ್ಮಕ ತರಬೇತಿ ಒಳಗೊಂಡ ಮತ್ತು 16ನೇ ಶತಮಾನದ ಐತಿಹಾಸಿಕ ನೈಜ ಘಟನಾವಳಿಗಳ ವಿಷಯಗಳು ಚರಿತ್ರೆಯಲ್ಲಿವೆ.ಇದು ನಿಜಕ್ಕೂ ಈಗಿನ ಕಾಲಘಟ್ಟಕ್ಕೆ ಓದಲೇಬೇಕಾದ ಅನುವಾದಿತ ಚರಿತ್ರೆಯಾಗಿದೆ ಎಂದರು. ಮಕ್ಕಳ ಕುರಿತು ಅವರು ಬರೆದ ಇನ್ನೆರಡು ಕೃತಿಗಳಾದ ‘ಮಕ್ಕಳಿಗಾಗಿ ನಾಣ್ಣುಡಿಗಳು’ ಮತ್ತು’ ಫೇಸ್ಬುಕ್ ನಲ್ಲಿ ಮೊಲ ಮತ್ತು ಇತರ ಕತೆಗಳು’ ಕೃತಿಗಳನ್ನು ಹಿರಿಯ ಶಿಕ್ಷಕರು ಮತ್ತು ಮಕ್ಕಳ ಸಾಹಿತಿ ಎ. ಎ.ಸನದಿ ಪರಿಚಯಿಸುತ್ತಾ ಇತ್ತೀಚೆಗೆ ಮಕ್ಕಳ ಸುಂದರವಾದ ಕ್ಷಣಗಳು ಮೊಬೈಲ್ ಲೋಕದಲ್ಲಿ ಕಳೆದುಹೋಗುತ್ತಿವೆ. ಮಕ್ಕಳು ಬೌದ್ಧಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಬೆಳೆಯಲು ಮಕ್ಕಳಿಗೆ ಸಾಹಿತ್ಯದ ಅವಶ್ಯಕತೆ ಇದೆ. ಆ ನಿಟ್ಟಿನಲ್ಲಿ ಮಕ್ಕಳ ನಾಣ್ಣುಡಿಗಳು ಮತ್ತು ಆಧುನಿಕತೆಯ ಸ್ಪರ್ಶವನ್ನು ಹೊಂದಿರುವ ವಿಶೇಷ ಕಥೆಗಳು ಮಕ್ಕಳಿಗೆ ಮೌಲಿಕ ಸಂದೇಶಗಳನ್ನು ಮತ್ತು ಜ್ಞಾನವನ್ನು ಒದಗಿಸುವಂತಹ ವಾಗಿವೆ ಎಂದರು.

- Advertisement -

ಐದು ಕೃತಿಗಳನ್ನು ರಚಿಸಿದ ಸಾಹಿತಿ ದೀಪಿಕಾ ಚಾಟೆ ಯವರು ಮಾತನಾಡಿ, ನನ್ನ ಕೃತಿಗಳ ಕುರಿತಾಗಿ ಅನುಭವಿಕ ಸಾಹಿತಿಗಳ ಸತ್ವಭರಿತ ಪರಿಚಯದಿಂದ ಇನ್ನಷ್ಟು ಬರೆಯಬೇಕೆಂಬ ಛಲ ಬಂದಿದೆ. ನನ್ನ ತಂದೆ ದಿ. ಹೆಚ್. ಬಿ. ಕುಲಕರ್ಣಿಯವರ ಸ್ಮರಣೆಯಲ್ಲಿ ಪ್ರತಿವರ್ಷ ದತ್ತಿನಿಧಿ ಕಾರ್ಯಕ್ರಮ ಹಮ್ಮಿಕೊಂಡು ಬರುತ್ತಿದ್ದು ಇದೀಗ ಅವರ ನೆನಪಿನಲ್ಲಿ ಪುಸ್ತಕಗಳು ಬಿಡುಗಡೆಯಾಗಿದ್ದು ಖುಷಿ ತಂದಿದೆ. ಈಗ ನಾನು ರಚಿಸಿದ ಐದು ಕೃತಿಗಳು ಓದುಗರಿಗೆ ವಿಶೇಷ ಅನುಭವಗಳನ್ನು ಕೊಡುವುದರ ಜೊತೆಗೆ ಅಲ್ಪ ಪರಿವರ್ತನೆಗೆ ದಾರಿದೀಪ ವಾಗುವುದರಲ್ಲಿ ಸಂದೇಹವಿಲ್ಲ. ಮಕ್ಕಳಿಗೂ ಸಹ ಏನಾದರೂ ಮಾಡಬೇಕೆಂಬ ನನ್ನ ಹಂಬಲ ನನ್ನ ಕೃತಿಯಿಂದ ಈಡೇರಿದೆ ಎನ್ನುತ್ತಾ ಕೃತಿಗಳನ್ನು ಪರಿಚಯಿಸಿದ ಸರ್ವರನ್ನು ಮತ್ತು ಹಿರಿಯರನ್ನು ಗೌರವಾದರ ಮೂಲಕ ಸತ್ಕರಿಸಿದರು.

ಕಾರ್ಯಕ್ರಮದಲ್ಲಿ ಸಾಹಿತಿಗಳಾದ ಡಾ. ನೀಲಗಂಗಾ ಚರಂತಿಮಠ,ಡಾ. ಗುರುದೇವಿ ಹುಲೆಪ್ಪನವರಮಠ, ಆಶಾ ಕಡಪಟ್ಟಿ,ಹಮೀದಾ ಬೇಗಂ ದೇಸಾಯಿ, ಮೀನಾಕ್ಷಿ ಸೂಡಿ,ಜಯಶೀಲಾ ಬ್ಯಾಕೋಡ, ಉಮಾ ಅಂಗಡಿ,ಅಕ್ಕಮಹಾದೇವಿ ಹುಲಗಬಾಳಿ, ಡಾ.ಮೈತ್ರಿಯಿಣಿ ಗದಿಗೆಪ್ಪಗೌಡರ, ಅನ್ನಪೂರ್ಣ ಹಿರೇಮಠ,ಹಿರಿಯರಾದ ಡಾ. ಎಚ್. ಬಿ. ರಾಜಶೇಖರ,ಸಿ. ಕೆ.ಜೋರಾಪುರ, ಅಕ್ಬರ ಸನದಿ, ಶಂಕರ ಬಾಗೇವಾಡಿ, ಎಂ. ವೈ. ಮೆಣಸಿನಕಾಯಿ, ಶಿವಾನಂದ ತಲ್ಲೂರ, ವೀರಭದ್ರ ಅಂಗಡಿ ಸೇರಿದಂತೆ ಅನೇಕ ಸಾಹಿತ್ಯಾಸಕ್ತರು,ಲೇಖಕಿಯರು ಹಾಜರಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಇಂದಿರಾ ಮೊಟೆಬೆನ್ನೂರ ಪ್ರಾರ್ಥಿಸಿದರು. ರಾಜನಂದಾ ಘಾರ್ಗಿ ಕಾರ್ಯಕ್ರಮವನ್ನು ನಿರೂಪಿಸಿದರು. ಕೊನೆಯಲ್ಲಿ ಸುಧಾ ಪಾಟೀಲ ವಂದಿಸಿದರು.

- Advertisement -
- Advertisement -

Latest News

ಕಿವುಡ ಮಕ್ಕಳ ಸಂಸ್ಥೆಗೆ ರಾಜ್ಯ ಪ್ರಶಸ್ತಿ

ಕರ್ನಾಟಕ ಸರ್ಕಾರವು ವಿಕಲಚೇತನ ಸೇವಾ ಕ್ಷೇತ್ರದಲ್ಲಿ ಅನುಪಮ ಸೇವೆಯನ್ನು ಪರಿಗಣಿಸಿ ಪ್ರಸ್ತುತ 2023ನೇ ಸಾಲಿನ ಉತ್ತಮ ಸಂಸ್ಥೆಯ ವಿಭಾಗದಡಿ ಪೇರೆಂಟ್ಸ್ ಅಸೋಸಿಯೇಷನ್ ಆಫ್ ಡೆಫ್ ಚಿಲ್ಡ್ರನ್,...
- Advertisement -

More Articles Like This

- Advertisement -
close
error: Content is protected !!
Join WhatsApp Group