ಶೌಚಾಲಯಕ್ಕೆ ಹಣ ಬಿಡುಗಡೆ ಮಾಡಿ ವಾಪಸ್ ಪಡೆದುಕೊಂಡ ಪಂಚಾಯಿತಿ; ಹೀಗೂ ಉಂಟು !!!

Must Read

25 ಸಾವಿರ ಮತಗಳಿಂದ ಬಿಜೆಪಿ ಗೆಲ್ಲುತ್ತದೆ – ಜೊಲ್ಲೆ ವಿಶ್ವಾಸ

ಸಿಂದಗಿ: ಎರಡು ಬಾರಿ ಚುನಾಯಿತರಾದ ರಮೇಶ ಭೂಸನೂರ ಅವರು ಅನೇಕ ಕೆಲಸಗಳನ್ನು ಮಾಡಿದ್ದಾರೆ ಅಲ್ಲದೆ ಕೇಂದ್ರ ಹಾಗೂ ರಾಜ್ಯದಲ್ಲಿ ಭಾಜಪ ಅಧಿಕಾರದಲ್ಲಿದೆ ಕ್ಷೇತ್ರದ ಅಭಿವೃದ್ಧಿ ದಿಸೆಯಲ್ಲಿ...

“ಕಲಾಸೃಷ್ಟಿ” ಆರ್ಟ್ ವರ್ಕ್ ಗೆ ಚಾಲನೆ ನೀಡಿದ ಲೋಕಲ್ ಲೀಡರ್ ನಟ ಕಲ್ಮೇಶ್

ಬಾಗಲಕೋಟೆ: ಇದೆ ಅಕ್ಟೋಬರ್ ೧೫ ರಂದು, ಗದ್ದನಕೇರಿಯಲ್ಲಿ "ಕಲಾಸೃಷ್ಟಿ" ಆರ್ಟ್ ವರ್ಕ್ ಪ್ರಾರಂಭವಾಯಿತು. ಇದನ್ನು ನಟ ಕಲ್ಮೇಶ್, ಬಾಗಲಕೋಟೆಯ ನಟಿ ಅಂಕಿತಾ ನಾಯ್ಡು ಹಾಗೂ ಸಹ...

ಗೋವಿಂದಹಳ್ಳಿಯ ಪಂಚಲಿಂಗೇಶ್ವರ ; ಐದು ಶಿಖರಗಳ ಅಪರೂಪದ ಗುಡಿ

ಸ್ಥಳದ ಬಗ್ಗೆ ಕಿರು ಪರಿಚಯ: ಪ್ರಖ್ಯಾತ ಪ್ರವಾಸಿ ತಾಣವಾದ ಗೋವಿಂದನಹಳ್ಳಿಯ ಬ್ರಹ್ಮಲಿಂಗೇಶ್ವರ ಗುಡಿಯಿರುವುದು ಮಂಡ್ಯದಿಂದ 52 ಕಿ.ಮೀ ಹಾಗೂ ಕೃಷ್ಣರಾಜಪೇಟೆಯಿಂದ 20 ಕಿ.ಮೀ ಹಾಗು ಕಿಕ್ಕೇರಿಯಿಂದ...

ಮೂಡಲಗಿ: ಮಹಿಳೆಯರು ಬಯಲು ಶೌಚಕ್ಕೆ ಹೋಗಬಾರದು ಎಂಬ ಧ್ಯೇಯದಿಂದ ಮನೆಮನೆಗೆ ಶೌಚಾಲಯ ಕಟ್ಟಿಸಿಕೊಡುವ ಸರ್ಕಾರದ ಯೋಜನೆಯನ್ನೇ ಸಮೀಪದ ಧರ್ಮಟ್ಟಿ ಗ್ರಾಮ ಪಂಚಾಯತ ಕಾರ್ಯಾಲಯ ಬುಡಮೇಲು ಮಾಡಿದೆ ಎನ್ನಬೇಕು.

ಶೌಚಾಲಯಕ್ಕಾಗಿ ಬಿಡುಗಡೆಯಾದ ಹಣವನ್ನೇ ಫಲಾನುಭವಿಗಳಿಂದ ವಾಪಸ್ ಪಡೆದುಕೊಂಡು ಶೌಚಾಲಯ ಕಟ್ಟಿ ಕೊಡುವ ಭರವಸೆಯಲ್ಲಿಯೇ ದಿನ ದೂಡುವಂತೆ ಮಾಡಿರುವ ಧರ್ಮಟ್ಟಿ ಗ್ರಾಮ ಪಂಚಾಯತಿಯು ಭ್ರಷ್ಟಾಚಾರದಲ್ಲಿ ಒಂದು ದಾಖಲೆಯನ್ನೇ ಮಾಡಿದೆ ಎಂದರೆ ತಪ್ಪಲ್ಲ.

- Advertisement -

ವಿಚಿತ್ರವೆಂದರೆ ಈ ಗ್ರಾಮ ಬಯಲು ಶೌಚಮುಕ್ತ ಎಂದು ಗುರುತಿಸಿಕೊಂಡಿದ್ದು ! ಧರ್ಮಟ್ಟಿ ಗ್ರಾಮದಲ್ಲಿ ಈಗಲೂ ಗ್ರಾಮ ಪಂಚಾಯಿತಿ ಮುಂದೆಯೇ ಬಯಲೇ ಬಹಿರ್ದೆಸೆಯ ತಾಣವಾಗಿದೆ. ಸರ್ಕಾರ ಶೌಚಾಲಯ ಕಟ್ಟಿಕೊಳ್ಳಲು ಬಿಡುಗಡೆ ಮಾಡಿರುವ ಸಹಾಯಧನವನ್ನು ದುರ್ಬಳಕೆ ಮಾಡಿಕೊಂಡಿರುವ ಪ್ರಕರಣಗಳು ಈಗ ಒಂದೊಂದಾಗಿ ಬಯಲಿಗೆ ಬರುತ್ತಿವೆ.

ಹೀಗೂ ಉಂಟು !!

ಧರ್ಮಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ವಾರ್ಡ ನಂ. 3 ರಲ್ಲಿ ಯಮನವ್ವ ಯಶವಂತ ಢವಳೇಶ್ವರ ಹಾಗೂ ರೇಣುಕಾ ಚಂದ್ರಕಾಂತ ಪರಕನಟ್ಟಿ ಎಂಬ ಫಲಾನುಭವಿಗಳಿಗೆ ಬ್ಯಾಂಕ್ ಖಾತೆಗೆ ಸರ್ಕಾರದಿಂದ ಬರುವ ಸಹಾಯಧನ ಜಮಾ ಆಗಿದ್ದು, ಪಂಚಾಯಿತಿ ಅಧಿಕಾರಿಗಳು ಫಲಾನುಭವಿಗಳಿಗೆ ಶೌಚಾಲಯ ಕಟ್ಟಿಕೊಡುವಂತೆ ಹೇಳಿ ಅವರಿಂದ ಖಾತೆಯಲ್ಲಿನ ಹಣವನ್ನು ಮರಳಿ ಪಡೆದುಕೊಂಡು ಶೌಚಾಲಯ ಕಟ್ಟಡಕ್ಕೆ ಬೇಕಾಗಿರುವ ವಸ್ತುಗಳನ್ನು ಅವರ ಮನೆ ಮುಂದೆ ಇಟ್ಟು ಹೋಗಿದ್ದಾರೆ.

ಇದು ಒಂದು ವರ್ಷದ ಕಥೆಯಲ್ಲ ಮೂರು ವರ್ಷಗಳಿಂದ ಫಲಾನುಭವಿಗಳ ಮನೆ ಮುಂದೆ ಶೌಚಾಲಯ ಕಟ್ಟಡಕ್ಕೆ ಬೇಕಾಗಿರುವ ವಸ್ತುಗಳು ಬಿದ್ದು ಹಾಳಾಗಿ ಹೋಗಿವೆ.

ಗ್ರಾಮ ಪಂಚಾಯಿತಿಯಲ್ಲಿ ಶೌಚಾಲಯದ ದಾಖಲಾತಿ ಕೂಡ ಸರಿಯಾಗಿ ಇರದೇ ಬಿಲ್ ಪಾವತಿ ಮಾಡಿದ್ದು, ಇದು ಅಧಿಕಾರಿಗಳ ನಿರ್ಲಕ್ಷವೋ ಅಥವಾ ಅವರು ಕೂಡಾ ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆಯೋ ಎಂಬ ಅನುಮಾನಗಳು ಕೂಡ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

- Advertisement -

LEAVE A REPLY

Please enter your comment!
Please enter your name here

- Advertisement -

Latest News

25 ಸಾವಿರ ಮತಗಳಿಂದ ಬಿಜೆಪಿ ಗೆಲ್ಲುತ್ತದೆ – ಜೊಲ್ಲೆ ವಿಶ್ವಾಸ

ಸಿಂದಗಿ: ಎರಡು ಬಾರಿ ಚುನಾಯಿತರಾದ ರಮೇಶ ಭೂಸನೂರ ಅವರು ಅನೇಕ ಕೆಲಸಗಳನ್ನು ಮಾಡಿದ್ದಾರೆ ಅಲ್ಲದೆ ಕೇಂದ್ರ ಹಾಗೂ ರಾಜ್ಯದಲ್ಲಿ ಭಾಜಪ ಅಧಿಕಾರದಲ್ಲಿದೆ ಕ್ಷೇತ್ರದ ಅಭಿವೃದ್ಧಿ ದಿಸೆಯಲ್ಲಿ...
- Advertisement -

More Articles Like This

- Advertisement -
close
error: Content is protected !!