spot_img
spot_img

ಸತ್ಕಾರ್ಯದಿಂದ ಜೀವನ ರೂಪಿಸಿಕೊಳ್ಳವುದು ಧರ್ಮ – ಅಶೋಕ ಮನಗೂಳಿ

Must Read

- Advertisement -

ಸಿಂದಗಿ; ಧರ್ಮ ಸಮಾಜದಷ್ಟೇ ಪ್ರಾಚೀನತೆಯ ಪರಂಪರೆಯನ್ನು ಹೊಂದಿದೆ ಯುಗಯುಗಾಂತರ ಕಾಲ ಧರ್ಮಗಳನ್ನು ನಂಬಿಕೆ ಮತ್ತು ಆಚರಣೆಗಳನ್ನು ಸಂಯೋಜಿಸಿ ನೀತಿನಿಯಮಗಳಿಂದ ಸತ್ಕಾರ್ಯ ಜೀವನದ ಮಾದರಿಯನ್ನು ರೂಪಿಸಿಕೊಳ್ಳುವುದು ಧರ್ಮವಾಗಿದೆ ಎಂದು ಕಾಂಗ್ರೆಸ ಮುಖಂಡ ಅಶೋಕ ಮನಗೂಳಿ ಅಭಿಮತ ವ್ಯಕ್ತಪಡಿಸಿದರು.

ತಾಲೂಕಿನ ಯಂಕಂಚಿ ಗ್ರಾಮದ ಕುಂಟೋಜಿ ಹಿರೇಮಠದಲ್ಲಿ ಲಿಂ. ಶ್ರೀ. ಷ. ಬ್ರ ಅಭಿನವ ರುದ್ರಮುನಿ ಶಿವಾಚಾರ್ಯರ 44ನೆಯ ಪುಣ್ಯರಾಧನೆ, ಧರ್ಮಸಭೆ, ರಾಜರತ್ನ ಗ್ರಂಥಬಿಡುಗಡೆ ಹಾಗೂ ಹಿರೇಮಠದ ಭಕ್ತಿಗೀತೆಗಳ ದ್ವನಿಸುರುಳಿ ಬಿಡುಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಇಂತಹ ಮಠಮಾನ್ಯಗಳ ಮೂಲಕ ಮಠಗಳಲ್ಲಿ ಹಮ್ಮಿಕೊಳ್ಳುವ ಇಂತಹ ಪುರಾಣ ಪ್ರವಚನದಂತಹ ಕಾರ್ಯಕ್ರಮಗಳ ಮೂಲಕ ಮನಸ್ಸಿಗೆ ಶಾಂತಿ ನೆಮ್ಮದಿ ನೀಡುವುದರೊಂದಿಗೆ ಮಾರ್ಗಸೂಚಿ ಯನ್ನು ನೀಡುತ್ತದೆ. ಇದರಲ್ಲಿ ವಿಶೇಷವಾಗಿ ಗ್ರಂಥ ಬಿಡುಗಡೆ ಮತ್ತು ಭಕ್ತಿಗೀತೆಗಳ ದ್ವನಿ ಸುರುಳಿ ಬಿಡುಗಡೆ ಇಂತಹ ಕಾರ್ಯಕ್ರಮಗಳನ್ನು ನೋಡಿದಾಗ ನಿಜಕ್ಕೂ ಪೂಜ್ಯರ ಕಾರ್ಯ ಶ್ಲಾಘನೀಯ ಎಂದರು.

ಸಾನ್ನಿಧ್ಯ ವಹಿಸಿದ ಮುದೋಳದ ಶ್ರೀ ವೈಜನಾಥ ಶಿವಲಿಂಗ ಶಿವಾಚಾರ್ಯರು, ಶ್ರೀ ರಾಚೋಟೇಶ್ವರ ಶಿವಾಚಾರ್ಯರು ಹಾಗೂ ವಿಶ್ವರಾಧ್ಯ ಮಳಿಂದ್ರ ಶಿವಾಚಾರ್ಯರು ಮಾತನಾಡಿ, ಅಧ್ಯಾತ್ಮ ಬದುಕಿನ ತಳಹದಿ ನಾವೆಲ್ಲ ಶರಣರ ಮಾರ್ಗದಲ್ಲಿ ನಡೆದರೆ ನಮ್ಮ ಜೀವನ ಸಾರ್ಥಕವಾಗುತ್ತದೆ. ಭಕ್ತರಿಗೆ ಆಧ್ಯಾತ್ಮಿಕ ಚಿಂತನೆ ರಸದೌತಣ ಉಣಿಸುವುದರಲ್ಲಿ ಶ್ರೀಮಠದ ಕಾರ್ಯವು ಶ್ಲಾಘನೀಯವಾದದ್ದು, ಭಕ್ತರ ಕಷ್ಟ-ನಷ್ಟ ಗಳಲ್ಲಿ ಕ್ಷಣಾರ್ಧದಲ್ಲಿ ಸ್ಪಂದಿಸುವ ಮನೋಭಾವನೆಯನ್ನು ಯಂಕಂಚಿ ಶ್ರೀಮಠದ ಪೂಜ್ಯರಲ್ಲಿದೆ. ಯಂಕಂಚಿ ಸುತ್ತಮುತ್ತಲಿನ ಹಳ್ಳಿಗಳಿಗೆ ತಿರುಗಾಡಿಸುತ್ತ ಮುತ್ತಲಿನ ಜನರಿಗೆ ಜ್ಞಾನದ ಬೆಳಕನ್ನು ಚೆಲ್ಲುತ್ತಿದ್ದಾರೆ ಇಂತಹ ಶ್ರೀಗಳನ್ನು ಪಡೆದ ಗ್ರಾಮವು ನಿಜಕ್ಕೂ ಪುಣ್ಯ. ಸುತ್ತಮುತ್ತಲಿನ ಗ್ರಾಮದ ಜನರು ಶ್ರೀಮಠಕ್ಕೆ ಆಗಮಿಸಿ ಪೂಜ್ಯರ ಆಶೀರ್ವಾದವನ್ನು ಪಡೆಯುತ್ತಾರೆ ಎಂದು ಹೇಳಿದರು..

- Advertisement -

ಶ್ರೀ ಅಭಿನವ ರುದ್ರಮುನಿ ಶಿವಾಚಾರ್ಯರು, ಶ್ರೀ ಸಂಗನಬಸವ ಶಿವಾಚಾರ್ಯರು ಅರ್ಜುನಗಿ, ಯುವ ಪ್ರವಚನಕಾರರಾಗಿ ಬಂಡಾಯ ಶಾಸ್ತ್ರಿಗಳು, ಗವಾಯಿಗಳಾದ ಸಿದ್ದಯ್ಯಸ್ವಾಮಿ ಪಡೆದಹಳ್ಳಿ, ತಬಲಾ ವಾದಕರು ರಾಜು ಕಟ್ಟಿಸಂಗಾವಿ ದೊಡ್ಡನಗೌಡ ಪಾಟೀಲ್, ಮಲ್ಲಪ್ಪಗೌಡ ಬಿರಾದಾರ, ಡಾ. ಪ್ರಕಾಶ ರಾಗರಂಜಿನಿ, ಕರ್ನಾಟಕ ಜನಸ್ಪಂದನ ಟ್ರಸ್ಟ್ವಿನ ಜಿಲ್ಲಾಧ್ಯಕ್ಷ ಮಹಾಂತೇಶ ನೂಲಾನವರ ವೇದಿಕೆ ಮೇಲಿದ್ದರು.

ಇದೇ ಸಂದರ್ಭದಲ್ಲಿ ನವೀನ ಶಳ್ಳಗಿ, ಭಾಗಣ್ಣ ತಮದೊಡ್ಡಿ, ದಯಾನಂದ ಜಾಡರ್, ಮಹೇಶ ಹಿರೇಮಠ, ಶಿವುಕುಂಬಾರ, ಶಂಕರಗೌಡ ಹೊಸಮನಿ, ಶ್ರೀಮಂತ ನಾಗೂರ, ಶಾಂತಗೌಡ ನೀರಲಗಿ ಸೇರಿದಂತೆ ಅನೇಕ ಉಪಸ್ಥಿತರಿದ್ದರು.

ಬಂಡಯ್ಯ ಶಾಸ್ತ್ರೀಗಳು ನಿರೂಪಿಸಿದರು. ಮಹಾಂತೇಶ ನೂಲಾನವರ ಸ್ವಾಗತಿಸಿದರು ಹಾಗೂ ಶ್ರೀಶೈಲ ಡಗ್ಗಾ ವಂದಿಸಿದರು.

- Advertisement -
- Advertisement -

Latest News

ಇದು ಇಂದಿನ ಹಾಸ್ಟೆಲ್ ಹುಡುಗ ಹುಡುಗಿಯರಿಗೆ ನಾವೆಲ್ಲ ಹೇಳಬೇಕಾದ ಖಾಸ್ ಬಾತ್

ಸರ್... ಓ ಸರ್...ಕಾಂಬಳೆ ಸರ್  ... ಸರ್ ನಮಸ್ಕಾರ್ರಿ ಆರಾಮ ಅದೀರಿ?? ನಾ ಯಾರ್ ಹೇಳ್ರಿ ಅನ್ನುತ್ತಿದ್ದಂತೆಯೇ ನಿವೃತ್ತಿ ಹೊಂದಿ ಐದಾರು ವರ್ಷ ಆಗಿದ್ದ ಬಿಸಿಎಮ್...
- Advertisement -

More Articles Like This

- Advertisement -
close
error: Content is protected !!
Join WhatsApp Group