ಇಲ್ಲಿ ಧರ್ಮ ಕೂಡಿಡಬೇಕು, ಕರ್ಮ ಕಳೆಯಬೇಕು. ಪುಣ್ಯ ಗುಣಿಸಬೇಕು ಪಾಪ ಭಾಗಿಸಬೇಕು

Must Read

ಕುಡಿಯುವ ನೀರು ವ್ಯತ್ಯಯ ಆಗದಂತೆ ನೋಡಿಕೊಳ್ಳುವ ಭರವಸೆ ನೀಡಿದ ರುದ್ರೇಶ ಘಾಳೆ

ಬೆಳಗಾವಿ - ಕಾರ್ಮಿಕರು ತಮ್ಮ ಬೇಡಿಕೆಗಳನ್ನು ಈಡೇರಿಸಲು ನಡೆಸಿದ ಮುಷ್ಕರದಿಂದಾಗಿ ಬೆಳಗಾವಿ ಜನತೆಗೆ ಕುಡಿಯುವ ನೀರಿನ ವ್ಯವಸ್ಥೆಯಲ್ಲಿ ತೊಂದರೆ ಉಂಟಾಗಿದ್ದು ವಿಷಾದನೀಯವಾಗಿದೆ ವ್ಯವಸ್ಥೆಯನ್ನು ಸಂಪೂರ್ಣವಾಗಿ ಸರಿ...

ಹೆಣ್ಣು ಮಕ್ಕಳು ಪೌಷ್ಠಿಕ ಆಹಾರ ಸೇವನೆ ಮಾಡಬೇಕು – ಡಾ.ನಯನಾ ಭಸ್ಮೇ

ಸವದತ್ತಿ - “ಹೆಣ್ಣು ಮಕ್ಕಳು ಮಾನಸಿಕವಾಗಿ ಹಾಗೂ ದೈಹಿಕವಾಗಿಯೂ ಸದೃಢವಾಗಿರಬೇಕು ಅವರು ಹದಿ ಹರೆಯದ ವಯಸ್ಸಿಗೆ ಬಂದಾಗ ಅವರಲ್ಲಿ ನೈಸರ್ಗಿಕವಾದ ಬದಲಾವಣೆಗಳು ಆಗುತ್ತವೆ ಅಂತಹ ಸಂದರ್ಭದಲ್ಲಿಯೂ...

ಪ್ರೊ.ಅಲಕಾ ಕುರಣೆ ಯವರಿಗೆ ‘ ಶಿಕ್ಷಕ ಶ್ರೀ ‘ ರಾಜ್ಯ ಮಟ್ಟದ ಪ್ರಶಸ್ತಿ

ಬೆಳಗಾವಿ: ಅಕ್ಷರ ದೀಪ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಲಾ ವೇದಿಕೆ, ಧಾರವಾಡ ಬೆಂಗಳೂರು ಘಟಕದಿಂದ ನೀಡಲಾಗುವ ರಾಜ್ಯ ಮಟ್ಟದ ಶಿಕ್ಷಕ ಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಬೆಳಗಾವಿಯ...

ಜೀವನದ ವ್ಯವಹಾರದಲ್ಲಿ ಗೆಲುವು ಯಾವುದು? ಸೋಲು ಯಾವುದು? ಜ್ಞಾನದ ಗೆಲುವು ವಿಜ್ಞಾನದ ಸೋಲಾದರೆ,ವಿಜ್ಞಾನದ ಗೆಲುವು ಜ್ಞಾನದ ಸೋಲು. ಇಲ್ಲಿ ಜ್ಞಾನದಲ್ಲಿರುವ ಸತ್ಯ ಅಸತ್ಯಗಳ ನಡುವಿರುವ ಮಾನವನಿಗೆ ನಿಜವಾದ ಗೆಲುವು ಅವನ ಸತ್ಯಜ್ಞಾನದಿಂದ ಸಿಗುವುದೆನ್ನುವುದೆ ಆಧ್ಯಾತ್ಮ.

ಆದರೆ ಭೌತಿಕ ವಿಜ್ಞಾನ ಇದನ್ನು ಸೋಲು ಎನ್ನುತ್ತದೆ. ಹೀಗಾಗಿ ಮನುಕುಲ ಭೌತಿಕಾಸಕ್ತಿ ಹೆಚ್ಚಿಸಿಕೊಂಡು ಒಬ್ಬರನ್ನೊಬ್ಬರು ತುಳಿದಾದರೂ ಮುಂದೆ ನಡೆಯೋ ರಾಜಕೀಯಕ್ಕೆ ಇಳಿದು ತನ್ನೊಳಗೆ ಇದ್ದ ಸತ್ಯವನ್ನು ಬಿಟ್ಟು ಮಿಥ್ಯದ ರಾಜಕೀಯ ವ್ಯವಹಾರದಲ್ಲಿ ಮುಳುಗಿಹೋಗಿದೆ. ಇದಕ್ಕೆ ಸಹಕಾರ ನೀಡಿರುವ ಮಹಾಪ್ರಜಾಪ್ರಭುತ್ವ ಇಂದಿಗೂ ತಾನೆಲ್ಲಿ ಸೋತೆ ಎನ್ನುವ ಪ್ರಶ್ನೆ ಹಾಕಿಕೊಳ್ಳಲಾಗದೆ ಸರ್ಕಾರದ ಹಿಂದೆ ನಿಂತು ನಮಗೇನು ಸಿಗುತ್ತದೆ? ಏನು ಕೊಡುತ್ತದೆ?

ನಮ್ಮ ಜೀವ ಉಳಿಸುತ್ತದೆ?ನಮ್ಮ ಸಂಸಾರ ನಡೆಸುತ್ತದೆ ಎಂದುಕೊಂಡರೆ ವ್ಯವಹಾರಕ್ಕೆ ಕೊನೆಯಿಲ್ಲ. ವ್ಯವಹಾರ ಜೀವನದ ಮೂರನೆಯ ಅಂಗವಾಗಿದೆ. ಬ್ರಾಹ್ಮಣ, ಕ್ಷತ್ರಿಯ,ವೈಶ್ಯ,ಶೂದ್ರ ವರ್ಣದ ಧರ್ಮಕರ್ಮ ಇಂದಿಲ್ಲವಾದರೂ ಜಾತಿಯಿದೆ. ಹುಟ್ಟಿದ ಜಾತಿ,ಕುಲ,ಗೋತ್ರ,ನಕ್ಷತ್ರದಿಂದ ನಮ್ಮ ಭವಿಷ್ಯವಿದ್ದರೆ ಹುಟ್ಟಿದಾಕ್ಷಣ ಮಕ್ಕಳ ಭವಿಷ್ಯವೂ ನಿರ್ಧಾರ ವಾಗಿ ಅದೇ ರೀತಿಯಲ್ಲಿ ಬೆಳೆಸಿ,ಶಿಕ್ಷಣ ನೀಡಿ ಜೀವನದಲ್ಲಿ ಚಿಂತೆ ಮಾಡದೆ ಆರಾಮಾಗಿರಬಹುದಿತ್ತು.

- Advertisement -

ಆದರೆ, ನಮ್ಮ ಭವಿಷ್ಯ ನಮ್ಮ ವ್ಯವಹಾರದ ಮೇಲೆ ನಿಂತಿದೆ. ಪೋಷಕರಾದವರು ಮಕ್ಕಳನ್ನು ಬೆಳೆಸಿ,ಸಾಕಿ,ಸಲಹಿ ದೊಡ್ಡವರನ್ನಾಗಿಸೋದು ಧರ್ಮ. ಆದರೆ, ತನ್ನ ಕರ್ಮ ಅಥವಾ ಕೆಲಸದ ಮೇಲೆ ಮಕ್ಕಳ ಭವಿಷ್ಯವೂ ನಿಂತಿದೆ.

ಎಷ್ಟು ಹೊರಗಿನ ಸಾಲ ಮಾಡಿ ಮಕ್ಕಳನ್ನು ಬೆಳೆಸಿ,ಶಿಕ್ಷಣವನ್ನೂ ಹೊರಗಿನ ಶಿಕ್ಷಣವನ್ನೇ ನೀಡಲು ಮಕ್ಕಳ ತಲೆಯ ಮೇಲೆ ಇನ್ನಷ್ಟು ಸಾಲದ ಹೊರೆ ಏರಿಸಿದರೆ ಮುಂದೆ ಆ ಹೊರೆ ಇಳಿಸಿಕೊಳ್ಳಲು ಮಕ್ಕಳು ತುಂಬಾ ಸಂಪಾದನೆ ಮಾಡಲೇಬೇಕು. ಹೆಚ್ಚು ಹಣಗಳಿಸಲು ದೊಡ್ಡ  ನೌಕರಿಯ ಅಗತ್ಯವಿದೆ. ಇಂದಿನ ದಿನಗಳಲ್ಲಿ ಉತ್ತಮ ಅಂಕ ಗಳಿಸಿದವರಿಗೇ ಸರಿಯಾದ ಕೆಲಸವಿಲ್ಲದೆ ಅಲೆಯುವಂತಾಗಿರುತ್ತದೆ.

ಏನೂ ತಿಳಿಯವರಿಗೇ ರಾಜಕೀಯ ನಡೆಸೋ ಅವಕಾಶ ಇರುತ್ತದೆ. ಇವೆಲ್ಲವೂ ಅವರವರ ಹಣೆ ಬರಹ ಎಂದರೆ ವಿಜ್ಞಾನ ಒಪ್ಪದು.ಆದರೂ ಹಾಗೆ ನಡೆದಿದೆ. ಇಲ್ಲಿ ವ್ಯವಹಾರದ ಪ್ರಶ್ನೆ ಬಂದಾಗ ಭೂಮಿ ಮಾರಿಯಾದರೂ ರಾಜಕೀಯಕ್ಕೆ ಇಳಿದು ಹಣಮಾಡೋದರಲ್ಲಿ ಯಾವುದೆ ಲಾಭವಿಲ್ಲ. ಅಧಿಕಾರ ಪಡೆದರೂ ಹಣ ಹಂಚಬೇಕು. ಸಿಗದಿದ್ದರೂ ಹಣ ಹಂಚಬೇಕು.

ಒಟ್ಟಿನಲ್ಲಿ ಹಣವಿದ್ದರೆ ಮಾತ್ರ ಜನ ಬಲ.ಹೀಗಾಗಿ ರಾಜಕೀಯ ವ್ಯವಹಾರದಿಂದ ನಷ್ಟ ಕಷ್ಟಗಳೆ ಹೆಚ್ಚು. ಇದರಿಂದ ಮುಕ್ತಿಯಂತೂ ಸಿಗದು
ಕಾರಣ ಇದರಲ್ಲಿ ಸತ್ಯ ಧರ್ಮ ಇರೋದಿಲ್ಲ. ಒಟ್ಟಿನಲ್ಲಿ ಮಾನವನ ವ್ಯವಹಾರಜ್ಞಾನ ಕೇವಲ ಮಧ್ಯವರ್ತಿಗಳಿಗೆ ಲಾಭವೆನಿಸಿದರೂ  ಆಧ್ಯಾತ್ಮದ ಪ್ರಕಾರ ನಷ್ಟವೆ. ಕೊಟ್ಟು ಮರೆಯುವುದು ಅತ್ಯುತ್ತಮ, ಕೊಟ್ಟ ನಂತರ ಪಡೆಯುವುದು ಮಧ್ಯಮ,ಕೊಡದೆ ಪಡೆಯುವುದು ಅಧಮ. ಈ ಮೂರೂ ವ್ಯವಹಾರ ಭೂಮಿಯಲ್ಲಿ ನಡೆದಿದೆ.

ಹಾಗಾದರೆ ಇಲ್ಲಿ ತೆಗೆದುಕೊಂಡು ಹೋಗುವುದು ಹಣವಲ್ಲವಾದಾಗ ಹಣವನ್ನು ದಾನ,ಧರ್ಮಕ್ಕೆ ಬಳಸಿದರೆ ಉತ್ತಮ ಜ್ಞಾನದಿಂದ ಲಾಭ ಇದೆ. ಜೀವನದ ವ್ಯವಹಾರದಲ್ಲಿ ಸುಖವಾಗಿರುವವರು ವಿರಳ ಇಲ್ಲಿ ಧರ್ಮ ಕೂಡಿಡಬೇಕು, ಕರ್ಮ ಕಳೆಯಬೇಕು. ಪುಣ್ಯ ಗುಣಿಸಬೇಕು ಪಾಪ ಭಾಗಿಸಬೇಕು.

ಇದನ್ನು ಯಾರಾದರೂ ಅರ್ಥಮಾಡಿಕೊಂಡರೆ  ನಿಜವಾದಲಾಭ ಯಾವುದು ನಷ್ಟ ಯಾವುದೆನ್ನುವ ಸತ್ಯಜ್ಞಾನವಿದೆ ಎನ್ನಬಹುದು. ಆದರೆ, ಹಿಂದಿನ ಹಿರಿಯರಿಂದಲೂ ಸೇರಿಕೊಂಡಿರುವ ಈ ಅವಶೇಷಗಳನ್ನು ಅನುಭವಿಸದೆ ವಿಧಿಯಿಲ್ಲ. ಯಾರಾದರೂ ಯಾವ ಆಸ್ತಿಯನ್ನೂ ಮಾಡದೆ ಭೂಮಿ ಬಿಟ್ಟು ಹೋಗಿದ್ದರೆ ಅವರ ಋಣ ಕಳೆದಿದೆಯೆಂದರ್ಥ. ಹಾಗಂತ ಸಂನ್ಯಾಸಿಗಳಂತೆ ಸಂಸಾರಿಗಳಿರಲಾಗದು.

ಇದಕ್ಕಾಗಿ ದಾನಧರ್ಮ ಕಾರ್ಯ ನಡೆಸುತ್ತಾ ಜೀವನದ ವ್ಯವಹಾರ ನಡೆಯುತ್ತಿದ್ದರೆ ಸಮಾನತೆ ಇರುತ್ತದೆ. ದಾಸರಾಗೋದಾದರೆ ಪರಮಾತ್ಮನ ದಾಸರಾಗಬೇಕಂತೆ.ಪರಕೀಯರ ದಾಸರಾದರೆ ಮುಕ್ತಿಯಿಲ್ಲ. ಭಾರತೀಯರ ಸಮಸ್ಯೆಗೆ ಕಾರಣವೆ ವ್ಯವಹಾರಜ್ಞಾನ ಧಾರ್ಮಿಕ ಜ್ಞಾನದಿಂದ ದೂರ ನಡೆದಿರೋದು.

ಹಿಂದೆ ತಿರುಗಿ ಬಂದರೆ ನಷ್ಟವೆನಿಸುತ್ತದೆ ಮುಂದೆ ಮುಂದೆ ಹೋದಂತೆ ಕಷ್ಟವಾಗುತ್ತದೆ. ಹೀಗಾಗಿ ಅತಿಯಾದ ವ್ಯವಹಾರದ ಲೆಕ್ಕಾಚಾರ ಹಾಕದೆ, ಇದ್ದಲ್ಲೇ ಎಷ್ಟು ಸಾಧ್ಯವೋ ಅಷ್ಟು ಶುದ್ದವಾದ ಕೆಲಸ ಕಾರ್ಯ ನಡೆಸಿಕೊಂಡರೆ ಜೀವನದ ಸುಖ ಶಾಂತಿ ನೆಮ್ಮದಿ ತೃಪ್ತಿ ಕಾಣಬಹುದು.

ಮಧ್ಯವರ್ತಿಗಳಿದ್ದರೆ ಕಷ್ಟ ನಷ್ಟ ಹೆಚ್ಚು.ನೇರ ನಡೆ ನುಡಿ ಪರಮಾತ್ಮನಿಗೆ ಅಚ್ಚುಮೆಚ್ಚು. ಇದರ ಕೊರತೆಯಿಂದಲೇ ಇಂದು ಮಾನವನಲ್ಲಿ ಹೊಟ್ಟೆಕಿಚ್ಚು ಹೆಚ್ಚಾಗಿದೆ. ಹೊಟ್ಟೆ ಕಿಚ್ಚು ಒಳಗೆ ಇದೆ.ಇದರ ಫಲವೂ ಒಳಗಿರುತ್ತದೆ.


ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು

- Advertisement -
- Advertisement -

Latest News

ಕುಡಿಯುವ ನೀರು ವ್ಯತ್ಯಯ ಆಗದಂತೆ ನೋಡಿಕೊಳ್ಳುವ ಭರವಸೆ ನೀಡಿದ ರುದ್ರೇಶ ಘಾಳೆ

ಬೆಳಗಾವಿ - ಕಾರ್ಮಿಕರು ತಮ್ಮ ಬೇಡಿಕೆಗಳನ್ನು ಈಡೇರಿಸಲು ನಡೆಸಿದ ಮುಷ್ಕರದಿಂದಾಗಿ ಬೆಳಗಾವಿ ಜನತೆಗೆ ಕುಡಿಯುವ ನೀರಿನ ವ್ಯವಸ್ಥೆಯಲ್ಲಿ ತೊಂದರೆ ಉಂಟಾಗಿದ್ದು ವಿಷಾದನೀಯವಾಗಿದೆ ವ್ಯವಸ್ಥೆಯನ್ನು ಸಂಪೂರ್ಣವಾಗಿ ಸರಿ...
- Advertisement -

More Articles Like This

- Advertisement -
close
error: Content is protected !!