spot_img
spot_img

ಸಂಸಾರದಲ್ಲಿ ಇದ್ದುಕೊಂಡು ದೇವರ ನಾಮಸ್ಮರಣೆ ಮಾಡಿದರೆ ಕಷ್ಟದೂರ: ಶಾಸಕ ದುರ್ಯೋಧನ ಐಹೊಳಿ

Must Read

spot_img
- Advertisement -

ಮೂಡಲಗಿ:-ತಾಲೂಕಿನ ಹಳ್ಳೂರ ಗ್ರಾಮದಲ್ಲಿ ಸಂಸಾರ ಜಂಜಾಟದಲ್ಲಿದ್ದುಕೊಂಡು ದೇವರ ನಾಮಸ್ಮರಣೆ ಮಾಡುತ್ತಾಯಿದ್ದರೆ ಬಂದ ಕಷ್ಟ ಬಯಲಾಗಿ ಮನಸ್ಸಿಗೆ ಶಾಂತಿ ನೆಮ್ಮದಿ ದೊರೆತು ಜೀವನವು ಸಾರ್ಥಕತೆಯನ್ನು ಪಡೆಯುತ್ತದೆ ಎಂದು ರಾಯಬಾಗ ಶಾಸಕ ದುರ್ಯೋಧನ ಐಹೊಳೆ ಹೇಳಿದರು.

ಅವರು ಗ್ರಾಮದ ಗಿರಿಮಲ್ಲೇಶ್ವರ ಮಹಾರಾಜರ ಆಶ್ರಮದಲ್ಲಿ ನಡೆದ ಗಿರಿಮಲ್ಲೇಶ್ವರ ಮಹಾರಾಜರ ಮತ್ತು ಶ್ರೀ ಮಾಧವಾನಂದ ಪ್ರಭುಜಿಯವರ ಸ್ಮರಣಾರ್ಥ ಅಧ್ಯಾತ್ಮ ಸಪ್ತಾಹ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಶ್ರೇಷ್ಠವಾದ ಇಂಚಗೇರಿ ಸಂಪ್ರದಾಯದ ಪರಮ ಭಕ್ತನಾಗಿದ್ದಕ್ಕೆ ನಾನು ರಾಜಕೀಯವಾಗಿ ಉನ್ನತಮಟ್ಟಕ್ಕೆ ಬೆಳೆದಿದ್ದೇನೆ ನೀವು ಕೂಡಾ ದೇವರನ್ನು ನಂಬಿ ನಡೆದರೆ ಯಾವುದಕ್ಕೂ ಕೊರತೆಯಿಲ್ಲ ಒಬ್ಬ ವ್ಯಕ್ತಿ ಮುಂದುವರೆಯ ಬೇಕಾದರೆ ಗುರುವಿನ ಆಶೀರ್ವಾದವಿದ್ದರೆ ಮಾತ್ರ ಸಾದ್ಯ ಎಂದು ಹೇಳಿದರು.

ಬೆನ್ನಾಳೆ ಪ್ರಭುಜಿ ಮಹಾರಾಜರು ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿ  ಕೆಲವು ರಾಜಕಾರಣಿಗಳು ಅಧಿಕಾರದ ಆಸೆಗಾಗಿ ಜಾತಿ ಎಂಬ ವಿಷ ಬೀಜ ಬಿತ್ತಿ ಜನರಲ್ಲಿರುವ ಪ್ರೀತಿ, ಸಂಬಂಧವನ್ನು ಕೆಡಿಸುತ್ತಿದ್ದಾರೆ. ತಮ್ಮ ಸ್ವಾರ್ಥಕ್ಕಾಗಿ ಇನ್ನೊಬ್ಬರ ಮನಸ್ಸನ್ನು ನೋಯಿಸಿ ಕೆಟ್ಟ ಕರ್ಮಾದಿಗಳನ್ನು ಮಾಡಿ ಪಾಪಕ್ಕೆ ಗುರಿಯಾಗದೆ ಸತ್ಕಾರ್ಯಗಳನ್ನು ಮಾಡಿ ಪುಣ್ಯ ಪಡೆದುಕೊಳ್ಳಿರಿ. ದಿನಾಲೂ ಕೋಳಿ ಕೂಗುವ ಮುನ್ನ ಎದ್ದು  ಕಾಯಕದ ಜೊತೆಗೆ ದೇವರ ನಾಮಸ್ಮರಣೆ ಮಾಡುತ್ತಾ ಇದ್ದರೆ ಮಾಡುವ ಕೆಲಸ ಕಾರ್ಯ ಸರಳ ನಡೆದು ಸಕಲ ಸೌಭಾಗ್ಯ ದೊರೆಯುತ್ತವೆ. ಧ್ಯಾನದಲ್ಲಿ ಅಗಾಧವಾದ ಶಕ್ತಿ ಅಡಗಿದೆ.ಇಂಚಗೇರಿ ಸಂಪ್ರದಾಯದಲ್ಲಿ ಜಾತಿ ಭೇದವಿಲ್ಲ ಎಲ್ಲರೂ ಪ್ರೀತಿ ವಿಶ್ವಾಸದಿಂದ ಜೀವನ ಸಾಗಿಸಿರಿ. ಅಧಿಕಾರ ಅಂತಸ್ತು ಯಾವುದೂ ಸ್ಥಿರವಲ್ಲ. ಜೀವನದಲ್ಲಿ ಅವಮಾನ ಅಪಮಾನವಾದರು ಕೊನೆಗೆ ಸನ್ಮಾನದ ಭಾಗ್ಯ ದೊರೆಯುತ್ತದೆ ತಾಳ್ಮೆ ಬೇಕು. ಪ್ರತಿಯೊಬ್ಬರಲ್ಲಿ ದೇಶಾಭಿಮಾನವಿರಬೇಕೆಂದು ಹೇಳಿದರು.

- Advertisement -

ಮಹಾದೇವ ಮಹಾರಾಜರು ಸಾನ್ನಿಧ್ಯ ವಹಿಸಿ ಮಾತನಾಡಿ, ಯುವ ಜನತೆ ಟಿ ವಿ ಮೊಬೈಲ ಮೊರೆ ಹೋಗಿ ಚಿಕ್ಕ ವಯಸ್ಸಿನಲ್ಲಿ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಶಿಕ್ಷಣದ ಜೊತೆಗೆ ಸಂಸ್ಕಾರ ಕಲಿತು ಮಹಾತ್ಮರ ಮಾತುಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಹೋಗಬೇಕೆಂದು ಹೇಳಿದರು.

ಶ್ರೀಮಂತ ಮಹಾರಾಜರು. ವಿಜಯ ಮಹಾರಾಜರು. ಅರವಿಂದ ವಕೀಲರು. ಮಾತೋಶ್ರೀ ನುರುಜಾನ ಬಾಯಿ. ಹಿಡಕಲ್ ಮಹಾರಾಜರು ಪ್ರವಚನ ಹೇಳಿದರು.                       ಬಾಳಯ್ಯ ಹೀರೆಮಠ, ಲಕ್ಷ್ಮಣ ಹೊಸಮನಿ, ಗಿರಮಲ್ಲ ಸಂತಿ, ಲಕ್ಷ್ಮಣ ಕುಲಿಗೋಡ, ಅಲ್ಲಪ್ಪ ಕೌಜಲಗಿ, ರಮೇಶ ಬಿರಾದರ, ಸಂಗಪ್ಪ ದುರದುಂಡಿ, ದುಂಡಪ್ಪ ಕತ್ತಿ, ಬಾಬುಲ ಮುಜಾವರ, ಗಿರಮಲ್ಲ ಕೌಜಲಗಿ, ಶಿವಾನಂದ ಹೊಸಮನಿ, ಕೆಂಪಣ್ಣ ರುದ್ರಾಪುರ ಸೇರಿದಂತೆ ಅನೇಕರಿದ್ದರು.                                     ಕಾರ್ಯಕ್ರಮವನ್ನು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಮುರಿಗೆಪ್ಪ ಮಾಲಗಾರ ಸ್ವಾಗತಿಸಿ ,ನಿರೂಪಿಸಿದರು.

 

- Advertisement -
- Advertisement -

Latest News

ಅಗತ್ಯ ದಾಖಲಾತಿಗಳನ್ನು ನೀಡಿ ಇ- ಆಸ್ತಿ ದಾಖಲಿಸಿಕೊಳ್ಳಿ-ತುಕಾರಾಮ ಮಾದರ

ಮೂಡಲಗಿ - ಪಟ್ಟಣದ ಪುರಸಭೆ ವ್ಯಾಪ್ತಿಯೊಳಗೆ ಬರುವ ಎಲ್ಲಾ ರೀತಿಯ ಕಟ್ಟಡ, ನಿವೇಶನಗಳಿಗೆ ಆಸ್ತಿ ತೆರಿಗೆಯನ್ನು ೨೦೨೪-೨೫ ನೇ ಸಾಲಿನ ಅಂತ್ಯದವರೆಗೆ ಪೂರ್ಣ ಪ್ರಮಾಣದಲ್ಲಿ ಪಾವತಿಸಿಕೊಂಡು...
- Advertisement -

More Articles Like This

- Advertisement -
close
error: Content is protected !!
Join WhatsApp Group