spot_img
spot_img

ಎರಡನೇ ವಿಶ್ವ ಯುದ್ಧದ ಕರಾಳ ದಿನದ ನೆನಪು: ಮತ್ತೆ ಮರುಕಳಿಸದಿರಲಿ

Must Read

- Advertisement -

(ಹಿರೋಷಿಮಾ ದಿನದ ಪ್ರಯುಕ್ತ ಪ್ರಸ್ತುತ ಲೇಖನ)

● ಪ್ರತಿ ಆಗಸ್ಟ್ 6 ರಂದು ಹಿರೋಷಿಮಾ ದಿನವನ್ನು ಶಾಂತಿ ರಾಜಕಾರಣಕ್ಕಾಗಿ ಪ್ರತಿಪಾದಿಸಲು ಮತ್ತು ಹಿರೋಷಿಮಾದ ಮೇಲಿನ ಪರಮಾಣು ಬಾಂಬ್ ದಾಳಿಯ ದುರಂತ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ಒಂದು ಗಂಭೀರ ಸಂದರ್ಭವಾಗಿ ಆಚರಿಸಲಾಗುತ್ತದೆ. ಎರಡನೆಯ ಮಹಾಯುದ್ಧದ ಸಮಯದಲ್ಲಿ ಯುನೈಟೆಡ್ ಸ್ಟೇಟ್ಸ್ ಜಪಾನಿನ ನಗರವಾದ ಹಿರೋಷಿಮಾದ ಮೇಲೆ 6 ಆಗಸ್ಟ್ 1945 ರಂದು ಪರಮಾಣು ಬಾಂಬ್ ಅನ್ನು ಬೀಳಿಸಿತು, ಇದು 20,000 ಕ್ಕೂ ಹೆಚ್ಚು ಸೈನಿಕರು ಮತ್ತು ಸುಮಾರು 70,000-126,000 ನಾಗರಿಕರ ಸಾವಿಗೆ ಕಾರಣವಾಯಿತು. ಮೂರು ದಿನಗಳ ನಂತರ ಜಪಾನಿನ ಮತ್ತೊಂದು ನಗರ ನಾಗಸಾಕಿಯ ಮೇಲೆ ಇದೇ ರೀತಿಯ ಬಾಂಬ್ ಅನ್ನು ಬೀಳಿಸಲಾಯಿತು, ಇದು ಇನ್ನೂ 80000 ಸಾವುಗಳಿಗೆ ಕಾರಣವಾಯಿತು. ಇದು ವಿಶ್ವದಲ್ಲಿ ಪರಮಾಣು ಶಸ್ತ್ರಾಸ್ತ್ರಗಳ ಬಳಕೆಯ ಮೊದಲ ಮತ್ತು ಏಕೈಕ ನಿದರ್ಶನವಾಗಿದೆ.

● ಗುರಿ ಮತ್ತು ಉದ್ದೇಶ:- ಈ ದಿನವು ಸಂಗೀತ, ನೃತ್ಯ ಮತ್ತು ಹಾಡುಗಳನ್ನು ಒಳಗೊಂಡಂತೆ ಹಲವಾರು ಕಾರ್ಯಕ್ರಮಗಳನ್ನು ಒಳಗೊಂಡಿದೆ, ಎಲ್ಲವೂ ಶಾಂತಿ ರಾಜಕೀಯವನ್ನು ಉತ್ತೇಜಿಸುವ ಮತ್ತು ಬಾಂಬ್ ದಾಳಿಯಲ್ಲಿ ತಮ್ಮ ಪ್ರಾಣ ಕಳೆದುಕೊಂಡವರ ಸ್ಮರಣೆಯನ್ನು ಗೌರವಿಸುವ ಗುರಿಯನ್ನು ಹೊಂದಿದೆ.

- Advertisement -

● ಇತಿಹಾಸ:-
1) ಐತಿಹಾಸಿಕ ಸನ್ನಿವೇಶವು 1945 ರಲ್ಲಿ, ಯುನೈಟೆಡ್ ಸ್ಟೇಟ್ಸ್ ಎರಡು ಪರಮಾಣು ಬಾಂಬ್‌ಗಳನ್ನು ‘ದಿ ಲಿಟಲ್ ಬಾಯ್’ ಮತ್ತು ‘ದಿ ಫ್ಯಾಟ್ ಮ್ಯಾನ್’ ಎಂದು ಹೆಸರಿಸಿದ್ದು, ಹಿರೋಷಿಮಾ ಮತ್ತು ನಾಗಸಾಕಿಯಲ್ಲಿ ಕ್ರಮವಾಗಿ ಆಗಸ್ಟ್ 6 ಮತ್ತು 9 ರಂದು ಸ್ಥಾಪಿಸಿತು.
2) ಹಿರೋಷಿಮಾದ ಬಾಂಬ್ ದಾಳಿಯು ನಗರದ ನಾಗರಿಕ ಜನಸಂಖ್ಯೆಯ 39 ಪ್ರತಿಶತದಷ್ಟು ನಷ್ಟಕ್ಕೆ ಕಾರಣವಾಯಿತು.
3) ಈ ದಿನಾಂಕವು 1945 ರಲ್ಲಿ ಪರಮಾಣು ಶಸ್ತ್ರಾಸ್ತ್ರದ ಸ್ಫೋಟದಿಂದಾಗಿ ಕ್ಷಣಾರ್ಧದಲ್ಲಿ ಸಾವಿರಾರು ಜೀವಗಳ ದುರಂತ ನಷ್ಟವನ್ನು ಗುರುತಿಸಿತು, ಹಿರೋಷಿಮಾ ಅಂತಹ ವಿನಾಶಕಾರಿ ಪರಮಾಣು ದಾಳಿಯನ್ನು ಅನುಭವಿಸಿದ ಮೊದಲ ನಗರವಾಗಿದೆ. ಇಂದು ನಾವು ಈ ಘಟನೆಯ ವಾರ್ಷಿಕೋತ್ಸವವನ್ನು ಅಗಷ್ಟ 6 ರಂದು ಸ್ಮರಿಸುತ್ತೇವೆ.
4) 1945 ರಲ್ಲಿ ಯುನೈಟೆಡ್ ಸ್ಟೇಟ್ಸ್ ಹಿರೋಷಿಮಾ ಮತ್ತು ನಾಗಾಸಾಕಿಯ ಪರಮಾಣು ಬಾಂಬ್ ಸ್ಫೋಟಗಳ ಸ್ಮರಣಾರ್ಥವಾಗಿ, ಐರ್ ಸ್ಕ್ವೇರ್‌ನಲ್ಲಿ ಗಾಲ್ವೇ ಅಲೈಯನ್ಸ್ ವಾರ್‌ನಲ್ಲಿ ವಾರ್ಷಿಕ ಕಾರ್ಯಕ್ರಮವನ್ನು ನಡೆಸಲಾಗುತ್ತದೆ.

● ವಿಮರ್ಶೆಯ ಆತ್ಮಾವಲೋಕನ:- 6ನೇ ಅಗಷ್ಟ 1945 ವಿಶ್ವದ ಚರಿತ್ರೆಯಲ್ಲೊಂದು ಕರಾಳ ದಿನ. ವಿಜ್ಞಾನಿಯ ಸಾಮರ್ಥ್ಯ ವಿನಾಶದ ಹಾದಿ ಹಿಡಿದ ದಿನ. ಯಾವನೋ ಒಬ್ಬ ಅಧಿಕಾರ ಶಾಹಿ ಯುದ್ಧ ಬೇಕೇ ಬೇಕು ಎಂದು ಪಟ್ಟು ಹಿಡಿದದ್ದಕ್ಕೆ ಒಂದು ದೇಶ ಮತ್ತು ಇಡೀ ಜನಾಂಗವೇ ಬೆಲೆ ತೆತ್ತ ದಿನ. ಮನುಷ್ಯನ ಕೈನಲ್ಲಿ ವಿನಾಶಕಾರಕವಾದ ಅಸ್ತ್ರ ಇದ್ದರೆ ಅದನ್ನು ಹೆಚ್ಚು ದಿನ ಪ್ರಯೋಗಿಸದೆ ಆತ ಸುಮ್ಮನಿರಲಾರ ಎಂಬುದು ದೃಢಪಟ್ಟ ದಿನ.

ಮಹಾಯುದ್ಧವನ್ನು ಮುಗಿಸುವ ಅಮೆರಿಕಾದ ಅಧ್ಯಕ್ಷ ಟ್ರೂಮನ್ನನ ಆಶಯ ಮತ್ತು ಮಿತ್ರರಾಷ್ಟ್ರಗಳ ಆಗ್ರಹವನ್ನು ಅಂದಿನ ಜಪಾನಿನ ಪ್ರಧಾನಿ ಕಂಟಾಕೋ ಸುಜೂಕಿ ನಿರ್ಲಕ್ಷಿಸಿಬಿಟ್ಟ. ಹಾಗಾಗಿ ಅಮೆರಿಕಾ ತನ್ನ ಬಾಂಬ್ ದಾಳಿಗಾಗಿ ಒಂದು ಲಕ್ಷಕ್ಕೂ ಹೆಚ್ಚು ಸೈನಿಕರನ್ನು ಹೊಂದಿದ್ದು, ಅಗಾಧ ಮದ್ದು ಗುಂಡುಗಳನ್ನು ಶೇಖರಿಸಿದ್ದ ಜಪಾನಿನ ಮಿಲಿಟರಿ ಕೇಂದ್ರವಾದ ಹಿರೋಷಿಮಾ ನಗರವನ್ನು ಆಯ್ಕೆ ಮಾಡಿಕೊಂಡಿತು.

- Advertisement -

ಆಗಸ್ಟ್ 6, 1945ರ ಬೆಳಿಗ್ಗೆ 8.16ರ ಸಮಯದಲ್ಲಿ ಭೀಕರ ಶಬ್ದದೊಂದಿಗೆ 20,000 ಟನ್ನಿಗೂ ಅಧಿಕ ಶಕ್ತಿಯೊಂದಿಗೆ ಸ್ಪೋಟ ವಿಚ್ಛಿದ್ರಕಾರಕ ರೂಪದಲ್ಲಿ ಸಂಭವಿಸಿತು. ಕ್ಷಣಾರ್ಧದಲ್ಲೇ ರಾಕ್ಷಸ ಗಾತ್ರದ ಹಣಬೆಯಾಕಾರದ 40,000 ಅಡಿ ಎತ್ತರದ ಮೋಡ ಸೃಷ್ಟಿಯಾಗಿ ಹಿರೋಷಿಮಾದ ಸುಮಾರು 10 ಚದರ ಮೈಲಿ ಸುತ್ತಳತೆಯ ಪ್ರದೇಶದಲ್ಲಿದ್ದ ಯಾವ ಮನೆಯೂ ಉಳಿಯಲಿಲ್ಲ. 68,000 ಮಂದಿ ಒಮ್ಮೆಗೆ ಬೆಂದು ಹೋದರು. ಅಗಾಧ ಉಷ್ಣತೆಯ ಪರಿಣಾಮದಿಂದಾಗಿ ಕೆಲಕಾಲದಲ್ಲೇ ಕರಿ ನೀರಿನ ಮಳೆ ಹಿರೋಷಿಮಾದಲ್ಲಿ ಸುರಿಯಿತು.

ಈ ದಾಳಿಯ ನಂತರ ಟ್ರೂಮನ್ನನ ದಾಹಾಗ್ನಿಯೇನೂ ಹಿಂಗಲಿಲ್ಲ. ಹಿರೋಷಿಮಾ ಬೆಂಕಿಯ ಜೊತೆಯಲ್ಲಿನ ಆಂತರಿಕ ಬೇಗೆಯಲ್ಲಿ ಬೇಯುತ್ತಿದ್ದ ಜಪಾನ್ ಶರಣಾಗತಿ ಪ್ರಕಟಿಸಲಿಲ್ಲ ಎಂಬ ಕಾರಣಕ್ಕಾಗಿ ಅಮೆರಿಕ, ನಾಗಸಾಕಿ ಪಟ್ಟಣದ ಮೇಲೆ ಆಗಸ್ಟ್ 9ರಂದು ದಾಳಿ ನಡೆಸಿ ಮತ್ತೆ 60,000 ಜನರನ್ನು ಭಸ್ಮ ಮಾಡಿ ಹಾಕಿತು. ಈ ಘಟನೆಗಳಲ್ಲಿ ಒಟ್ಟಾರೆಯಾಗಿ ಅಣು ವಿಕಿರಣಕ್ಕೆ ಸಿಕ್ಕಿ ತೊಂದರೆಗೊಳಪಟ್ಟವರು ಸುಮಾರು ಒಂದು ಲಕ್ಷ ನಲವತ್ತು ಸಾವಿರ ಜನಕ್ಕೂ ಹೆಚ್ಚು.

ಈ ಘಟನೆಯ ನಂತರದಲ್ಲಿ ಎರಡನೆಯ ಮಹಾಯುದ್ಧವೇನೋ ಮುಕ್ತಾಯವಾಯಿತು. ಆದರೆ ಮನುಷ್ಯ ಮತ್ತು ರಾಷ್ಟ್ರಗಳು ಇದರಿಂದ ಪಾಠವನ್ನೇನೂ ಕಲಿತಿಲ್ಲ. ಅಂದು ಬಾಂಬ್ ಹಾಕಿದ ಅಮೆರಿಕಾ, ನಾನು ನಿಮಗೆಲ್ಲಾ ಮಾನಿಟರ್. ನಾನು ಬಾಂಬ್ ಇಟ್ಕೋಬಹುದು. ನೀವೆಲ್ಲಾ ಜವಾಬ್ಧಾರಿ ಇರೋವ್ರಲ್ಲ, ನೀವು ಇಟ್ಕೋಬೇಡಿ ಅಂತ ಬಾಯಿ ಮಾತಲ್ಲಿ ಹೇಳ್ಕೊಂಡು ಕ್ಷುದ್ರವಾಗಿ ಬದುಕ್ತಾ, ಹಿಂದಿನ ಬಾಗಿಲಿನಿಂದ ತನ್ನ ಬಾಂಬ್ ತಂತ್ರಜ್ಞಾನವನ್ನು ಮಾರಿ ಕಾಸು ಮಾಡೋ ಹೀನ ಬುದ್ಧಿಯನ್ನು ಮುಂದುವರೆಸುತ್ತಲೇ ಇದೆ. ಜಪಾನ್ ಕೆಲವರ್ಷದ ಹಿಂದೆ ಸುನಾಮಿ ಸಂದರ್ಭದಲ್ಲಿ ಸುನಾಮಿ ಕಷ್ಟ ತಡೆಯೋದಕ್ಕಿಂತ ಹೆಚ್ಚಿಗೆ ಅಣುವಿಕಿರಣ ಸೋರಿಕೆ ತಡೆಯೋಕೆ ತಿಪ್ಪರಲಾಗ ಹಾಕಿದ್ದು ಜಗಜ್ಜಾಹೀರಾಗಿದೆ. ಚಿಂದಿ ಚಿಂದಿಯ ರಾಷ್ಟ್ರವಾದರೂ ಸೋವಿಯತ್ ರಷ್ಯಾ ಇನ್ನೂ ತನ್ನ ಯುದ್ಧ ತಂತ್ರಜ್ಞಾನದ ಪೊಗರು ಬಿಟ್ಟಿಲ್ಲ. ಮಧ್ಯ ಪ್ರಾಚ್ಯ ದೇಶಗಳು ತಮಗೆ ಪ್ರಕೃತಿ ದಯಪಾಲಿಸಿರುವ ಶ್ರೀಮಂತಿಕೆಯಿದ್ದೂ ಯಾವುದೋ ಮಣ್ಣುಹಂಟೆಯ ದುರಾಸೆಯಲ್ಲಿ ತಮ್ಮ ಮೇಲೆ ತಾವೇ ಬಾಂಬ್ ಹಾಕಿಕೊಳ್ಳತೊಡಗಿವೆ. ಯಾರನ್ನೂ ನಂಬದ ಚೀಣಾ ತನಗೆ ಲಭ್ಯವಾದ ಶ್ರೀಮಂತಿಕೆಯನ್ನು ಒಳಿತಿಗಾಗಿ ಉಪಯೋಗಿಸಿಕೊಳ್ಳದೆ ಪುಟ್ಟ ಪುಟ್ಟ ದೇಶಗಳಿಗೆ ಅಭಿವೃದ್ಧಿ ಮಾಡುವೆ ಎಂದು ವ್ಯಾಪಾರ ವಿಸ್ತರಿಸುತ್ತಾ, ತನಗೆ ಯಾರಾದರೂ ಪ್ರತಿಸ್ಪರ್ಧಿ ಹುಟ್ಟಿ ತನ್ನ ದೇಶಕ್ಕೆ ಪ್ರಜಾಪ್ರಭುತ್ವ ಬಂದುಬಿಟ್ರೆ ಎಂಬ ಭಯದಲ್ಲಿ ದಿನಾ ಹೊಸ ಹೊಸ ರೀತಿಯ ಕರೋನಾವನ್ನು ವಿಶ್ವಕ್ಕೆ ಬಿತ್ತುತ್ತಾ ಸಾಗಿದೆ. ಪಾಕಿಸ್ಥಾನದಂತಹ ದೇಶದ ಸರ್ಕಾರಗಳಿಗೆ ತನ್ನ ಜನರಿಗೆ ಕುಡಿಯೋ ನೀರು ಸರಿಯಾಗಿ ಸಿಗದಿದ್ರೂ ಪರಮಾಣು ಅಸ್ತ್ರ ಮಾಡೋ ಷೋಕಿ ಮಾತ್ರ ನಿಲ್ಲೋದೇ ಇಲ್ಲ.

● ಬಾಂಬ್ ದಾಳಿಯ ಪರಿಣಾಮ – ಹಿರೋಷಿಮಾ ದಿನ:-
1) ಹಿರೋಷಿಮಾದಲ್ಲಿ 90000 ಮತ್ತು 146000 ಜನರು ಸತ್ತರು. ಬಾಂಬ್ ಸ್ಫೋಟದ ನಂತರ ನಗರವು ತಕ್ಷಣವೇ ನಾಶವಾಯಿತು.
2) ಬಾಂಬ್ ದಾಳಿಯ ನಂತರ ತಿಂಗಳುಗಳವರೆಗೆ ವಿಕಿರಣ ಕಾಯಿಲೆ, ಸುಟ್ಟಗಾಯಗಳು ಮತ್ತು ಇತರ ಗಾಯಗಳಿಂದಾಗಿ ಜನರು ಸಾಯುವುದನ್ನು ಮುಂದುವರೆಸಿದರು.
3) ಅಪೌಷ್ಟಿಕತೆ ಮತ್ತು ಅನಾರೋಗ್ಯವು ಸಹ ವಿಷಯಗಳನ್ನು ಸಂಕೀರ್ಣಗೊಳಿಸಿತು. ಬಲಿಪಶುಗಳಲ್ಲಿ ಹೆಚ್ಚಿನವರು ನಾಗರಿಕರಾಗಿದ್ದರು, ಕೆಲವು ಮಿಲಿಟರಿ ಸಿಬ್ಬಂದಿ ಕೂಡ ಕೊಲ್ಲಲ್ಪಟ್ಟರು.

● ಕೊನೆಯ ಮಾತು:- ಈ ಹುಚ್ಚಾಟಕ್ಕೆ ಎಂದಾದರೂ ಕೊನೆ ಬರುತ್ತದೆಯೇ? “ವಿಶ್ವದ ಇತಿಹಾಸ ತುಂಬಿರೋದು ಎರಡೇ ಎರಡರಿಂದ. ಒಂದು ಯುದ್ಧದಿಂದ, ಮತ್ತೊಂದು ಯುದ್ಧದ ಸಿದ್ಧತೆಗಳಿಂದ”. ಈ ಮಧ್ಯೆ ಈ ಸುಡುಬೂದಿಗಳಿಂದ ಮೈದಳೆದು ಮಹೋನ್ನತವಾಗಿ ಬದುಕನ್ನು ನಡೆಸಿ ತೋರಿರುವ ಜಪಾನಿನ ಸಾಮರ್ಥ್ಯ ಅಭಿನಂದನೀಯ ಕೂಡಾ. ಆದರೆ ವಿಶ್ವದಲ್ಲಿನ ಬಾಂಬ್ ಕರಾಳತೆಯ ನೆರಳು ಕರಗುವವರೆಗೆ ಎಲ್ಲವೂ ಕ್ಷಣಿಕ. ಅದು ಎಲ್ಲಾ ದೇಶಗಳೂ ತಮ್ಮ ಅಹಂ ಅನ್ನು ಬಿಸಾಕಿ ಒಮ್ಮೆಲೆ ಮಾಡಬೇಕಿರುವ ಅನಿವಾರ್ಯ ಕಾಯಕ. ಪರಮಾಣು ಬಳಕೆಯ ಕರಾಳ ಮುಖದ ನಿದರ್ಶನ ನೆನೆದಾಗ, ಅದೇ ಅಂತಿಮವಾಗಲಿ ಎಂದು ಆ ದೇವರಲ್ಲಿ ಬೇಡಿಕೊಳ್ಳೋಣ. ಮೂರನೇ ಮಹಾಯುದ್ಧ ಬೇಡವೆಂಬ ನಿರ್ಧಾರ ಮಾಡಿ ವಿಶ್ವಶಾಂತಿಗಾಗಿ ಪ್ರಾರ್ಥಿಸೋಣ….

ಸಂಗ್ರಹ:- ಎನ್.ಎನ್.ಕಬ್ಬೂರ
ಶಿಕ್ಷಕರು, ತಾ-ಸವದತ್ತಿ ಜಿ-ಬೆಳಗಾವಿ
ಮೊಬೈಲ್-9740043452
mutturaj.kabbur@gmail.com

- Advertisement -
- Advertisement -

Latest News

ಶಿಕ್ಷಕರಾದ ಮೆಟ್ಯಾಲಮಠ ರವರಿಗೆ ಆದರ್ಶ ಶಿಕ್ಷಕ ಪ್ರಶಸ್ತಿ

ಬೆಳಗಾವಿ:-ತಾಲೂಕಿನ ಹಿಂಡಲಗಾ ವಿಜಯನಗರ ದ ಸರಕಾರಿ ಪ್ರಾಥಮಿಕ ಮರಾಠಿ ಶಾಲೆಯ ಕ್ರಿಯಾಶೀಲ ಕನ್ನಡ ಶಿಕ್ಷಕರಾದ ರುದ್ರಯ್ಯ ಈರಯ್ಯ ಮೆಟ್ಯಾಲಮಠ ರವರಿಗೆ ತಾಲೂಕು ಆದರ್ಶ ಶಿಕ್ಷಕ ಪ್ರಶಸ್ತಿ...
- Advertisement -

More Articles Like This

- Advertisement -
close
error: Content is protected !!
Join WhatsApp Group