ಸಿಂದಗಿ; ಪಟ್ಟಣದಲ್ಲಿ ಹಲವು ದಿನಗಳಿಂದ ನಡೆದ ಅತಿಕ್ರಮಣ ಶೆಡ್ಡು ತೆರವು ಕಾರ್ಯಾಚರಣೆ ದೀಪಾವಳಿ ಹಬ್ಬವಿದ್ದ ಕಾರಣಕ್ಕೆ ನಿಲ್ಲಿಸಲಾಗಿದ್ದು ಮಂಗಳವಾರದಿಂದ ಪುನಃ ಪ್ರಾರಂಭಗೊಳ್ಳುವುದು ತೆರವು ಕಾರ್ಯಾಚರಣೆ ಯಾವ ಕಾಲಕ್ಕೂ ನಿಲ್ಲದು ಎಂದು ಪುರಸಭೆ ಅದ್ಯಕ್ಷ ಶಾಂತವೀರ ಬಿರಾದಾರ ಸ್ಪಷ್ಟಪಡಿಸಿದರು.
ಪಟ್ಟಣದ ಖಾಸಗಿ ಹೊಟೇಲೊಂದರಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಬೇಕಾಬಿಟ್ಟಿಯಾಗಿ ಪಟ್ಟಣವನ್ನು ಅಗೆದು ಹಾಳು ಮಾಡಿ ಅರ್ಧಕ್ಕೆ ಕೈಬಿಟ್ಟಿದ್ದಾರೆ ಎನ್ನುವ ಮಾತುಗಳು ಗಾಳಿಯಲ್ಲಿ ಹರಿದಾಡುತ್ತಿದ್ದು. ಪಟ್ಟಣದ ರಾಜ್ಯ ಹೆದ್ದಾರಿಗೆ ಅಂಟಿಕೊಂಡಿದ್ದ ರಸ್ತೆಯ ಪಕ್ಕದಲ್ಲಿ ಸರ್ವಿಸ ರಸ್ತೆಯಿದ್ದು ಅದರಲ್ಲಿ ಪಟ್ಟಣದ ಸೌಂದರ್ಯೀಕರಣಕ್ಕೆ ಸಂಭಂಧಿಸಿದಂತೆ ಕಾರ್ಯ ಕ್ರಮಗಳು ಕೂಡಲೇ ಪ್ರಾರಭಿಸಲಾಗುವುದು ಮತ್ತು ಬಸವೇಶ್ವರ ವೃತ್ತದಲ್ಲಿ ಶಾಸಕರ ಪ್ರಧೇಶಾಭಿವೃದ್ದಿ ಅನುದಾನದಲ್ಲಿ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣವಾಗುತ್ತದೆ. ಮಂಗಳವಾರ ಬಸವೇಶ್ವರ ವೃತ್ತದಿಂದ ಕನಕದಾಸ ವೃತ್ತದವರೆಗೆ, ಬುದವಾರ ಟಿಪ್ಪು ಸುಲ್ತಾನ ವೃತ್ತದಿಂದ ಡೋಹರ ಕಕ್ಕಯ್ಯ ವೃತ್ತದವರೆಗೆ, ಗುರುವಾರ ಡಾ. ಅಂಬೇಡ್ಕರ ವೃತ್ತದಿಂದ ಬಸವೇಶ್ವರ ವೃತ್ತದವರೆಗೆ ತೆರವು ಕಾರ್ಯಾಚರಣೆ ನಡೆಸಲಾಗುವುದು ಸಾರ್ವಜನಿಕರ ಶೆಡ್ಡುಗಳಿದ್ದರೆ ಈ ಎರಡು ದಿನಗಳಲ್ಲಿ ಸ್ವಯಂಪ್ರೇರಿತ ತೆಗೆದುಕೊಂಡು ಪುರಸಭೆಯೊಂದಿಗೆ ಸಹರಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಸಂದೀಪ ಚೌರ, ಸಿನೆಟರಿ ಅಧಿಕಾರಿ ನಬೀರಸೂಲ ಉಸ್ತಾದ, ಜೆಇ ಅಜರ ನಾಟೀಕಾರ, ಮುಖಂಡರಾದ ಮಲ್ಲನಗೌಡ ಪಾಟೀಲ, ಸೇರಿದಂತೆ ಹಲವರು ಇದ್ದರು.