spot_img
spot_img

ಮೂಡಲಗಿ ತಾಲೂಕಾ ಗ್ರಾ.ಪಂ ನೌಕರರ ಸಂಘದ ವಿವಿಧ ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ ಮನವಿ

Must Read

- Advertisement -

ಮೂಡಲಗಿ: ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ನೌಕರರ ಸಂಘ (ಸಿ ಐ ಟಿ ಯು ಸಂಯೋಜಿತ) ಮೂಡಲಗಿ ತಾಲೂಕಾ ಸಮಿತಿಯಿಂದ ಗ್ರಾಮ ಪಂಚಾಯತ ನೌಕರರ ವಿವಿಧ ಬೇಡಿಕೆಗಳ ಈಡೇರಿಸುವಂತೆ ಆಗ್ರಹಿಸಿ ಮೂಡಲಗಿ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಹಲವಾರು ವರ್ಷಗಳಿಂದ ಗ್ರಾಮ ಪಂಚಾಯತಿಗಳಲ್ಲಿ ದುಡಿಯುತ್ತಿರುವ ಗ್ರಾಮ ಪಂಚಾಯತ ನೌಕರರು ಕನಿಷ್ಠ ಮೂಲಭೂತ ಸೌಲಭ್ಯಗಳನ್ನು ಪಡೆದುಕೊಳ್ಳದೇ ಸಾಮಾಜಿಕವಾಗಿ, ಆರ್ಥಿಕವಾಗಿ, ಕೌಟುಂಬಿಕವಾಗಿ ಅನೇಕ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಕನಿಷ್ಠ ಸಣ್ಣ ಕೈಗಾರಿಕೆಗಳಲ್ಲಿ ದುಡಿಯುತ್ತಿರುವ ಕಾರ್ಮಿಕರು ಪಡೆಯುತ್ತಿರುವ ಸೇವಾ ಸೌಲಭ್ಯವನ್ನೂ ಕೂಡ ಪಂಚಾಯತಿ ನೌಕರರಿಗೆ ಇಲ್ಲಿಯವರೆಗೂ ಸರಕಾರದಿಂದ ಪಡೆಯಲು ಸಾಧ್ಯವಾಗಿರುವುದಿಲ್ಲಾ. ಈ ಬಗ್ಗೆ ರಾಜ್ಯ ಮಟ್ಟದ, ಜಿಲ್ಲಾ ಮಟ್ಟದ ಹಾಗೂ ತಾಲೂಕಾ ಮಟ್ಟದಲ್ಲಿ ಸಾಕಷ್ಟು ಬಾರಿ ರಾಜ್ಯ ಸರಕಾರಗಳ ಗಮನಕ್ಕೆ ತರಲು ಹೋರಾಟ ಮಾಡುತ್ತ ಬಂದರೂ ಕೂಡ ಸರಕಾರವು ಗ್ರಾಮ ಪಂಚಾಯತಿ ನೌಕರರ ಬಗ್ಗೆ ಕಿಂಚಿತ್ತೂ ಕಾಳಜಿ ತೊರದೇ ಸತಾಯಿಸುತ್ತ ಬಂದಿವೆ, ಗ್ರಾಮೀಣ ಪ್ರದೇಶದಲ್ಲಿ ಜನರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಗ್ರಾಮ ಪಂಚಾಯತಿ ನೌಕರರು ಪ್ರಮುಖ ಪಾತ್ರ ವಹಿಸಿರುತ್ತಾರೆ, ಆದರೆ ಸದರಿ ನೌಕರರಿಗೆ ಮೂಲಭೂತ ಸೌಲಭ್ಯ, ಕನಿಷ್ಠ ವೇತನ, ಸೇವಾ ಭದ್ರತೆ, ಕಾಲ ಕಾಲಕ್ಕೆ ವೇತನ ಪಾವತಿಸದಿರುವುದು, ಅನುಮೋದನೆ ಸೇರಿದಂತೆ ಇನ್ನೂ ಹಲವಾರು ನೌಕರರ ಬೇಡಿಕೆಗಳನ್ನು ಇಡೇರಿಸುವಲ್ಲಿ ಸರಕಾರವು ವಿಫಲವಾಗಿದೆ, ಸ್ಥಳೀಯ ಬೇಡಿಕೆಗಳನ್ನು ಕೂಡಲೇ ಇಡೇರಿಸ ಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಬೇಡಿಕೆಗಳು:

  1. ಗ್ರಾಮ ಪಂಚಾಯತಿಯಲ್ಲಿ ದುಡಿಯುತ್ತಿರುವ ಎಲ್ಲ ನೌಕರರಿಗೆ ಪ್ರತಿ ತಿಂಗಳು 5 ನೇ ತಾರೀಖಿನೊಳಗೆ ವೇತನ ಪಾವತಿಸುವಂತೆ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸುವುದು.
  2. 15 ನೇ ಹಣಕಾಸು ಯೋಜನೆಯಲ್ಲಿ ವಾಟರಮನ್ ಹಾಗೂ ಸ್ವಚ್ಛತಾಗಾರರಿಗೆ ಮೀಸಲಿರಿಸಿದ ಅನುದಾನದಲ್ಲಿ ಅವರ ಬಾಕಿ ಉಳಿದ ವೇತನ ಪಾವತಿಸಲು ಕ್ರಮವಹಿಸುವುದು.
  3. ತಾಲೂಕಿನ ಮುನ್ಯಾಳ ಗ್ರಾಮ ಪಂಚಾಯತಿಯಲ್ಲಿನ ನೌಕರನ ವಿವರವನ್ನು 20 ಪಂಚತಂತ್ರಾಂಶದಲ್ಲಿ ನಮೂದಿಸುವಾಗ ಸ್ವಚ್ಛತಾಗಾರರ ವೇತನ ಕೇವಲ 13810- ರೂ.ಗಳು ಮಾತ್ರ ಕಣ್ಣಪ್ಪಿನಿಂದ ತಪ್ಪು ಮಾಹಿತಿ ಸೇರಿಸಿದ್ದರಿಂದ ನೌಕರರ ವೇತನ ಪಡೆಯಲು ವಿಳಂಬವಾಗುತ್ತಿದ್ದು ಸದರಿ ಸಮಸ್ಯೆಯನ್ನು ಕೂಡಲೇ ಪರಿಹರಿಸಿ ನೌಕರರಿಗೆ ವೇತನ ಪಡೆದುಕೊಳ್ಳಲು ಅನುಕೂಲ ಮಾಡಿಕೊಡಬೇಕು.
  4. ತಾಲೂಕಿನ ಗುಜನಟ್ಟಿ-28 ತಿಂಗಳು, ಧರ್ಮಟ್ಟಿ-9 ತಿಂಗಳು, ಮಸಗುಪ್ಪಿ-6 ತಿಂಗಳು ರಾಜಾಪೂರ -9 ತಿಂಗಳು, ಕುಲಗೋಡ- 9 ತಿಂಗಳು, ಅವರಾದಿ-14 ತಿಂಗಳು, ವೇತನ ಬಾಕಿ ಇದ್ದು, ಈ ಎಲ್ಲ ನೌಕರರ ವೇತನ ಪಡೆಯಲು ವಿಳಂಬವಾಗುತ್ತಿದೆ ಸದರಿ ಸಮಸ್ಯೆಯನ್ನು ಕೂಡಲೇ ಪರಿಹರಿಸಿ ನೌಕರರಿಗೆ ಹಿಂದಿನ ಬಾಕಿ ವೇತನ ಪಡೆದುಕೊಳ್ಳಲು ಅನುಕೂಲ ಮಾಡಿಕೊಡಬೇಕು.
  5. ತಾಲೂಕಿನ ಕಾಮನಕಟ್ಟಿ ಗ್ರಾಮ ಪಂಚಾಯತಿಯಲ್ಲಿ ಸ್ವಚ್ಛತಾಗಾರರ ವೇತನದಲ್ಲಿ ಕಡಿತಗೊಳಿಸಿ ದಿನಗೂಲಿ ನೌಕರರಿಗೆ ವೇತನ ಪಾವತಿಸುತ್ತಿರುವುದು ತಿಳಿದು ಬಂದಿದ್ದು, ವಸೂಲಿ ಖಾತೆಯಿಂದ ದಿನಗೂಲಿ ನೌಕರರಿಗೆ ವೇತನ ಪಾವತಿಸಲು ಅನುಕೂಲತೆ ಮಾಡಿಕೊಡಬೇಕು.
  6. ತಾಲೂಕಿನಲ್ಲಿ ಅನೇಕ ಗ್ರಾಮ ಪಂಚಾಯತ ನೌಕರರು ಸೇವಾ ನಿವೃತ್ತಿ ಹೊಂದಿದ್ದು ಅವರಿಗೆ ಇಲ್ಲಿಯವರೆಗೂ ಗ್ರಾಚುಯಿಟಿ (ನಿವೃತ್ತಿಉಪದಾನ) ಯನ್ನು ಗ್ರಾಮ ಪಂಚಾಯತಿಯವರು ನೀಡಿರುವುದಿಲ್ಲಾ, ಗ್ರಾಮ ಪಂಚಾಯತಿಗಳಲ್ಲಿ ನಿವೃತ್ತಿ ಹೊಂದಿದ ನೌಕರರ ಮಾಹಿತಿಯನ್ನು ಪಡೆದು ಪಂಚಾಯತಿಯಿಂದ ಗ್ರಾಚುಯಿಟಿ (ನಿವೃತ್ತಿ ಉಪದಾನ)ಯನ್ನು ನೀಡಲು ಕ್ರಮಕೈಗೊಳ್ಳುವುದಾಗಬೇಕು.
  7. 20 ಪಂಚತಂತ್ರಾಂಶದಲ್ಲಿ ನೌಕರರ ಮಾಹಿತಿ ಅಳವಡಿಸುವುದು ಬಾಕಿ ಇದ್ದರೆ ಕೂಡಲೇ ಅಳವಡಿಸಲು ಕ್ರಮಕೈಗೊಳ್ಳಬೇಕು. 8) .ತಾಲೂಕಿನ ಹಳ್ಳೂರ, ಶಿವಾಪೂರ, ಹುಣಶಾಳ ಪಿ.ವಾಯ್, ಢವಳೇಶ್ವರ ಗ್ರಾಮ ಪಂಚಾಯತಿಗಳಲ್ಲಿ ಕರವಸೂಲಿಗಾರ/ಕರ್ಕ ಕಂ ಡಾಟಾ ಎಂಟ್ರಿ ಅಪರೇಟರಗಳು ಕಾರ್ಯದರ್ಶಿ ಗ್ರೇಡ್ -2 ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಹುದ್ದೆಗೆ ಆಂತರಿಕ ನೇಮಕಾತಿ ಹೊಂದಿದ್ದರಿಂದ ಕರವಸೂಲಿಗಾರ/ ಕರ್ಕ ಕಂ. ಡಾಟಾ ಎಂಟ್ರಿ ಅಫರೇಟರ ಹುದ್ದೆಗಳು ಖಾಲಿಯಾಗಿದ್ದು, ಸದರೀ ಖಾಲಿ ಹುದ್ದೆಗಳಿಗೆ ಈಗಾಗಲೇ ಗ್ರಾಮ ಪಂಚಾಯತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕನಿಷ್ಠ 5 ವರ್ಷ ಸೇವೆ ಪೂರೈಸಿದ ವಾಟರಮನ್ ಸಿಪಾಯಿ/ಸ್ವಚ್ಛತಾಗಾರರನ್ನು ಜೇಷ್ಠತೆಯ ಆಧಾರದಲ್ಲಿ ಸರಕಾರದ ನಿಯಮಾನುಸಾರ ಮುಂಬಡ್ತಿ ನೀಡಲು ಕೂಡಲೇ ಕ್ರಮಕೈಗೊಳ್ಳಬೇಕು.
  8. ದಿನಾಂಕ 31-10-2017 ಕ್ಕೆ ಇದ್ದಂತೆ ಅನುಮೋದನೆಯಾಗದ ಮೂಡಲಗಿ ತಾಲೂಕಿನಲ್ಲಿ ಕರವಸೂಲಿಗಾರ, ಡಿ.ಇ.ಓ.ವಾಟರಮನ್ ಹಾಗೂ ಸ್ವಚ್ಛತಾಗಾರರು ಸೇರಿ, ಒಟ್ಟು 39 ಜನ ಗ್ರಾಮ ಪಂಚಾಯತ ನೌಕರರಿಗೆ ಅನುಮೋದನೆ ನೀಡಲು ಮೇಲಾಧಿಕಾರಿಗಳಿಗೆ ಸಿಫಾರಸ್ಸು ಮಾಡಬೇಕು.
  9. ಗ್ರಾಮ ಪಂಚಾಯತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ಒಂದು ಪಂಚಾಯತಿಯಿಂದ ಮತ್ತೊಂದು ಪಂಚಾಯತಿಗೆ ವರ್ಗಾವಣೆ ಮಾಡಲು ಮೇಲಧಿಕಾರಿಗಳಿಗೆ ಸಿಫಾರಸ್ಸು ಮಾಡಬೇಕು.
  10. ಗ್ರಾಮ ಪಂಚಾಯತಿಗಳಲ್ಲಿ ಪ್ರತಿದಿನ ಧ್ವಜಾರೋಹಣ ಮಾಡುವ ನೌಕರರಿಗೆ ಈಗಿದ್ದ ರೂ. 30. ಗೌರವಧನವನ್ನು ರೂ. 60. ಗಳಿಗೆ ಹೆಚ್ಚಿಸಲು ಸಿಫಾರಸ್ಸು ಮಾಡಬೇಕು.
  11. ಶಿವಾಪೂರ ಗ್ರಾಮ ಪಂಚಾಯತಿಯಲ್ಲಿ ಕಳೆದ 17 ವರ್ಷಗಳಿಂದ ಠರಾವು ಇಲ್ಲದೆ, ಕನಿಷ್ಠ ವೇತನ ವಿಲ್ಲದೆ ದುಡಿಯುತ್ತಿರುವ ಸಂಜು ಶಿವಪ್ಪ ಕೆಳಗಡೆ ಹಾಗೂ ರುಕ್ಕವ್ವ ಸಂಗಪ್ಪ ಹನಮಪ್ಪಗೋಳ ಇವರಿಗೆ ನ್ಯಾಯ ದೊರಕಿಸಿ ಕೊಡಲು ಕ್ರಮ ಕೈಗೊಳ್ಳಬೇಕು.
  12. ರಾಜಾಪೂರ ಗ್ರಾಮ ಪಂಚಾಯತಿಯಲ್ಲಿ ಸುನಿತವ್ವ ಭೀಮಪ್ಪ ಹರಿಜನ ಇವರು ಅನುಕಂಪದ ಮೇಲೆ ಠರಾವು ಆಗಿದ್ದರೂ ಕೂಡ ಮಾಡಲು ಕ್ರಮ ಕೈಗೊಳ್ಳಬೇಕು.
  13. ಗ್ರಾಮ ಪಂಚಾಯತಿಯ ಎಲ್ಲ ನೌಕರರಿಗೆ ಪೆನ್‍ಶನ್ ನೀಡುವ ಬಗ್ಗೆ ಕಡತವು ಹಣಕಾಸು ಇಲಾಖೆಯಲ್ಲಿದ್ದು ಕೂಡಲೇ ಜಾರಿ ಮಾಡಲು ಮನವಿ ಮೂಲಕ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮೂಡಲಗಿ ತಾಲೂಕಾ ಗ್ರಾ.ಪಂ ನೌಕರ ಸಂಘದ ಅಧ್ಯಕ್ಷ ರಮೇಶ ಹೋಳಿ, ಗೋಕಾಕ ತಾಲೂಕಾ ಅಧ್ಯಕ್ಷ ಮಡ್ಡೆಪ್ಪ ಭಜಂತ್ರಿ, ಕಾರ್ಯದರ್ಶಿ ಬಾಳೇಶ ದುಂಡಾನಟ್ಟಿ, ಮೂಡಲಗಿ ತಾಲೂಕಾ ಘಟಕದ ಉಪಾಧ್ಯಕ್ಷ ಬಸವರಾಜ ಮಿರ್ಜಿ, ಪ್ರ.ಕಾರ್ಯದರ್ಶಿ ಜಿ.ಎ.ಫಿರಜಾದೆ, ಖಜಾಂಚಿ ಗೋಳಪ್ಪ ಹೊಸೂರ, ಪದಾಧಿಕಾರಿಗಳಾದ ಸಿದ್ರಾಯ ಬಟಕುರ್ಕಿ, ಶಿವಲಿಂಗ ಪೂಜೇರಿ, ರಾಜು ದೊಡಮನ್ನಿ, ಮಹಾದೇವ ರೋಡ್ಡನವರ, ಮಹಾದೇವ ಮಾದರ ಮತ್ತಿತರರು ಉಪಸ್ಥಿತರಿದರು.

- Advertisement -
- Advertisement -

Latest News

ಇದು ಇಂದಿನ ಹಾಸ್ಟೆಲ್ ಹುಡುಗ ಹುಡುಗಿಯರಿಗೆ ನಾವೆಲ್ಲ ಹೇಳಬೇಕಾದ ಖಾಸ್ ಬಾತ್

ಸರ್... ಓ ಸರ್...ಕಾಂಬಳೆ ಸರ್  ... ಸರ್ ನಮಸ್ಕಾರ್ರಿ ಆರಾಮ ಅದೀರಿ?? ನಾ ಯಾರ್ ಹೇಳ್ರಿ ಅನ್ನುತ್ತಿದ್ದಂತೆಯೇ ನಿವೃತ್ತಿ ಹೊಂದಿ ಐದಾರು ವರ್ಷ ಆಗಿದ್ದ ಬಿಸಿಎಮ್...
- Advertisement -

More Articles Like This

- Advertisement -
close
error: Content is protected !!
Join WhatsApp Group