spot_img
spot_img

ಮಹಿಳೆಯರ ಶೌಚಾಲಯ ನಿರ್ಮಾಣಕ್ಕೆ ಆಗ್ರಹ

Must Read

- Advertisement -

ಸಿಂದಗಿ; ಪಟ್ಟಣದ ಶಿವಶಂಕರ ಬಡಾವಣೆಯಲ್ಲಿ ಮಹಿಳೆಯರ ಶೌಚಾಲಯ ಕಲ್ಪಿಸಿಕೊಡುವಂತೆ ಆಗ್ರಹಿಸಿ ಬಡಾವಣೆಯ ಮಹಿಳೆಯರು ಅಧ್ಯಕ್ಷ ಶಾಂತವೀರ ಬಿರಾದಾರ ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ಮಹಿಳಾ ಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷೆ ನೀಲಮ್ಮ ಯಡ್ರಾಮಿ ಮಾತನಾಡಿ, ಪಟ್ಟಣದ ಶಿವಶಂಕರ ಬಡಾವಣೆಯಲ್ಲಿ ಮಹಿಳೆಯರಿಗೆ ಶೌಚಾಲಯವಿಲ್ಲದೆ ಪರಿತಪ್ಪಿಸುವಂತಾಗಿದ್ದು ಅಲ್ಲದೆ ಮಳೆಯಾದರೆ ಸಾಕು ಬಡಾವಣೆಯ ರಸ್ತೆಗಳು ಗಟಾರಮಯವಾಗಿ ನಿರ್ಮಾಣವಾಗುತ್ತದೆ ಇದರಿಂದ ಮಹಿಳೆಯರು ಬಯಲು ಶೌಚಾಲಯಕ್ಕೆ ತೆರಳಲು ಹರಸಾಹಸ ಪಡುವಂತಾಗಿ ಏಳು ಬೀಳುಗಳ ಮಧ್ಯೆ ವೃದ್ದೆಯರಿಗೆ ಗಾಯಗಳಾಗಿದೆ ಇನ್ನೂ ಕೆಲವರು ಕಾಲು ಮುರಿದುಕೊಂಡ ಘಟನೆಗಳು ಜರುಗಿವೆ ಕಾರಣ ಅಧ್ಯಕ್ಷರು ಸ್ಥಳ ಪರಿಶೀಲಿಸಿ ಕೂಡಲೆ ಶೌಚಾಲಯ ನಿರ್ಮಿಸಿ ಮಹಿಳೆಯರಿಗೆ ಆಗುವ ತಾಪತ್ರಯವನ್ನು ತಪ್ಪಿಸಬೇಕು ಎಂದು ಮನವಿ ಮಾಡಿಕೊಂಡರು.

ತಾಲೂಕಾಧ್ಯಕ್ಷೆ ಜಯಶ್ರೀ ಹದನೂರ ಮಾತನಾಡಿ, ಕಾಂಗ್ರೆಸ್ ಸರಕಾರ ಮಹಿಳೆಯರ ಸಬಲಿಕರಣಕ್ಕೆ ಅನೇಕ ಯೋಜನೆಗಳನ್ನು ರೂಪಿಸಿ ಸಹಾನುಭೂತಿ ತೋರಿಸಿದೆ ಅದರಲ್ಲೂ ಕೇಂದ್ರ ಸರಕಾರ ಸ್ವಚ್ಚತೆಗೆ ಹೆಚ್ಚಿನ ಆಧ್ಯತೆ ನೀಡಿದೆ ಕಾರಣ ಅಧ್ಯಕ್ಷರು ಕೂಡಾ ಮಹಿಳೆಯರ ಸಮಸ್ಯೆಯನ್ನು ಅರಿತು ಈ ಸಮಸ್ಯೆಗೆ ಕೂಡಲೇ ಸ್ಪಂಧಿಸಿ ಕ್ರಮಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು.

- Advertisement -

ಮನವಿಗೆ ಸ್ಪಂದಿಸಿದ ಅಧ್ಯಕ್ಷ ಶಾಂತವೀರ ಬಿರಾದಾರ ಮಾತನಾಡಿ, ಆ ಬಡಾವಣೆಯಲ್ಲಿ ಶೌಚಾಲಯ ನಿರ್ಮಿಸಲು ಸ್ಥಳಾವಕಾಶವಿದ್ದರೆ ಕೂಡಲೇ ಕ್ರಮ ಜರುಗಿಸುತ್ತೇನೆ ತುರ್ತು ಪರಿಸ್ಥಿತಿಗೆ ಜೆಸಿಬಿಯಿಂದ ಸ್ವಚ್ಚಗೊಳಿಸಲು ಸೂಚಿಸುತ್ತೇನೆ ಎಂದು ಭರವಸೆ ಕೊಟ್ಟರು.

ಈ ಸಂದರ್ಭದಲ್ಲಿ ಮಾಜಿ ಉಪಾಧ್ಯಕ್ಷ ಹಾಸೀಂ ಆಳಂದ, ಸದಸ್ಯ ಸಂದೀಪ ಚೌರ, ಹಾಗೂ ಬಡಾವಣೆಯ ಮಹಿಳೆಯರಾದ ಸಾವಿತ್ರಿ, ಸೀತಮ್ಮ, ಬೋರಮ್ಮ, ಮಹಾದೇವಿ, ಗಂಗುಬಾಯಿ, ಸುಬ್ಬಮ್ಮ, ರೇಣುಕಾ, ಯಮನಾಬಾಯಿ, ಕಸ್ತೂರಿ, ಮಲಕಮ್ಮ, ಕವಿತಾ, ನಿರ್ಮಲಾ, ನಾಗಮ್ಮ, ಕಾಶೀಬಾಯಿ, ಮೈರುನ್, ಸಂಗಮ್ಮ, ಲಕ್ಷ್ಮಿ, ಗೀತಾ, ರಾಧಾಬಾಯಿ, ಶಿಲ್ಪಾ, ಯಲ್ಲಮ್ಮ, ಲಲಿತಾಬಾಯಿ, ಸುಮಿತ್ರಾ ಸೇರಿದಂತೆ ಅನೇಕ ಮಹಿಳೆಯರು ಇದ್ದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಸಮುದ್ರ ವಿಹಾರ ತಂದಿತು ಜೀವಕ್ಕೆ ಕುತ್ತು; ನೋಡನೋಡುತ್ತಲೇ ಮುಳುಗಿದ ಬೋಟ್

ಗೋವಾದಂಥ ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಭೇಟಿ ಕೊಟ್ಟಾಗ ಅಲ್ಲಿನ ಸಮುದ್ರದಲ್ಲಿ ವಿಹಾರ ಮಾಡುವುದು ಅತ್ಯಂತ ಹೆಚ್ಚಿನ ಬೇಡಿಕೆಯಾಗಿರುತ್ತದೆ. ಹಾಗೆಯೇ ಗೋವಾದಲ್ಲಿ ನಡೆದಿದೆಯೆಂದು ಹೇಳಲಾದ ಬೋಟ್ ಪಯಣ ಅದರ...
- Advertisement -

More Articles Like This

- Advertisement -
close
error: Content is protected !!
Join WhatsApp Group