ಸಿಂದಗಿ: ಹೂವಾಡಿಗ, ಹೂಗಾರ. ಜೀರ, ಗುರವ, ಪೂಜಾರಿ ಸಮಾಜಗಳ ಸರ್ವತೋಮುಖ ಬೆಳವಣಿಗೆಗೆ ಕರ್ನಾಟಕ ಸರ್ಕಾರ ಕರ್ನಾಟಕ ಮಾಲಿ, ಮಾಲಗಾರ ಹಾಗೂ ಹೂಗಾರ ಅಭಿವೃದ್ಧಿ ನಿಗಮದ ಕೇಂದ್ರ ಕಚೇರಿ ಸ್ಥಾಪಿಸಿ 100 ಕೋಟಿ ರೂ. ಹಣ ಮಿಸಲಿಡಬೇಕು ಎಂದು ಸಿಂದಗಿ ತಾಲೂಕಾ ಹೂಗಾರ ಸಮಾಜ ಸೇವಾ ಸಂಘ ತಾಲೂಕಾ ಘಟಕದ ವತಿಯಿಂದ ಸೋಮವಾರ ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿ ಗ್ರೇಡ್-2 ತಹಶೀಲ್ದಾರ ಇಂದಿರಾಬಾಯಿ ಬಳಗಾನೂರ ಅವರಿಗೆ ಮನವಿ ಸಲ್ಲಿಸುವ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ನಂತರ ಶಾಸಕ ಅಶೋಕ ಮನಗೂಳಿ ಅವರಿಗೆ ಪ್ರತ್ಯೇಕವಾಗಿ ಮನವಿ ಸಲ್ಲಿಸಿ ಅಧಿವೇಶನದಲ್ಲಿ ನಮ್ಮ ಸಮಾಜದ ಧ್ವನಿಯಾಗಿ ಮಾತನಾಡಬೇಕು ಎಂದು ಮನವಿ ಮಾಡಿಕೊಂಡರು.
ಕರ್ನಾಟಕ ಮಾಲಿ, ಮಾಲಗಾರ ಹಾಗೂ ಹೂಗಾರ ಅಭಿವೃದ್ಧಿ ನಿಗಮಕ್ಕೆ ಶ್ರೀ ಹೂಗಾರ ಮಾದಯ್ಯ ಅಭಿವೃದ್ಧಿ ನಿಗಮ ಎಂದು ಮರು ನಾಮಕರಣ ಮಾಡಬೇಕು ಎಂಬ ಹತ್ತು ಹಲವು ಬೇಡಿಕೆಗಳನ್ನು ಈಡೇರಿಸಬೇಕು ಇಲ್ಲದ ಪಕ್ಷದಲ್ಲಿ ಜು.27 ರಂದು ಅಖಂಡ ಕನಾಟಕ ಹೂಗಾರ ಮಹಾಸಭಾ ವತಿಯಿಂದ ಬೆಂಗಳೂರಿನ ಸ್ವತಂತ್ರ ಉದ್ಯಾನವನದಲ್ಲಿ ಜು.27 ರಂದು ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಸಲಾಯಿತು.
ಹಣಮಂತ ಹೂಗಾರ ಗಬಸಾವಳಗಿ, ಸಂತೋಷ ಪೂಜಾರಿ, ವಿಜಯಕುಮಾರ ಹೂಗಾರ, ಅಂಬಣ್ಣ ಹೂಗಾರ, ಬಸವರಾಜ ಹೂಗಾರ, ಅರವಿಂದ ಹೂಗಾರ, ಆನಂದ ಹೂಗಾರ, ಶಂಕರ ಹೂಗಾರ ಯರಗಲ್ ಬಿ.ಕೆ., ರಾಘವೇಂದ್ರ ಹೂಗಾರ, ಸುನೀಲ ಪೂಜಾರಿ, ರಮೇಶ ಪೂಜಾರ, ರಾಘು ಹೂಗಾರ, ಮುತ್ತು ಹೂಗಾರ, ಬಮ್ಮಲಿಂಗ ಹೂಗಾರ, ಶ್ರೀಶೈಲ ಹೂಗಾರ, ವಿ.ಎಸ್. ಹೂಗಾರ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳ ಹೂಗಾರ ಸಮಾಜದ ಬಾಂಧವರು ಮನವಿ ಸಲ್ಲಿಸಿದರು.