spot_img
spot_img

ಹೊಲಗಳಿಗೆ ರಾತ್ರಿ ಸಿಂಗಲ್ ಫೇಸ್ ನೀಡದಿರಲು ಮನವಿ

Must Read

ಮೂಡಲಗಿ – ರೈತನೇ ದೇಶದ ಬೆನ್ನೆಲುಬು ಎಂದು ಕಾಗದದಲ್ಲಿ , ಮಾತಿನಲ್ಲಿ ಹೇಳಿದರೆ ಸಾಲದು ಅದನ್ನು ಕಾರ್ಯರೂಪಕ್ಕೆ ತರಬೇಕು ಮತ್ತು ರೈತರಿಗೆ ಅನುಕೂಲವಾಗುವಂತಹ ಯೋಜನೆಗಳನ್ನು  ತರಬೇಕು ಎಂದು ಕರ್ನಾಟಕ ರೈತರ ಹಿತ ರಕ್ಷಣಾ ವೇದಿಕೆಯಿಂದ ಹೆಸ್ಕಾಂ ಅಧಿಕಾರಿಗಳಿಗೆ ಮನವಿ ಮಾಡಿಕೊಳ್ಳಲಾಗಿದೆ.

ರಾತ್ರಿಯ ವೇಳಯಲ್ಲಿ ರೈತರಿಗೆ ಕೇವಲ ಸಿಂಗಲ್ ಫೇಸ್ ವಿದ್ಯುತ್ ನೀಡುತ್ತಿರುವುದನ್ನು ಖಂಡಿಸಿ ಪ್ರಧಾನ ವ್ಯಸ್ಥಾಪಕರು ನಿಗಮ ಕಛೇರಿ ಹೆಸ್ಕಾಂ ಹುಬ್ಬಳ್ಳಿ ಇವರಿಗೆ ಕಾರ್ಯನಿರ್ವಾಹಕ ಅಭಿಯಂತರು ಹೆಸ್ಕಾಂ.

ಮೂಡಲಗಿ ಇವರ ಮುಖಾಂತರ ಮನವಿ ಸಲ್ಲಿಸಿದ ಕರ್ನಾಟಕ  ರೈತರ ಹಿತರಕ್ಷಣಾ ವೇದಿಕೆ ಬೆಳಗಾವಿ ಜಿಲ್ಲಾ ಅಧ್ಯಕ್ಷರು ಸುರೇಶ ನಾಯ್ಕ ಅವರು ಮಾತನಾಡಿ, ಹೆಸ್ಕಾಂ ವಿಭಾಗದಿಂದ ಹೊರಡಿಸಿರುವ ಆದೇಶದಿಂದ ರೈತರಿಗೆ ಅನಾನೂಕೂಲವಾಗಿದೆ.ರೈತರು ಬೆಳೆದ ಬೆಳೆ ಕೈ ತಲುಪಬೇಕಾದರೆ ವಿದ್ಯುತ್ ಅವಶ್ಯ .ಸಿಂಗಲ್ ಫೇಸ ವಿದ್ಯುತ್ ಸರಬರಾಜರಾದರೆ ಹೊಲಗಳಿಗೆ ನೀರು ಹಾಯಿಸುವದು ಕಷ್ಟ ಸಾಧ್ಯ. ಇನ್ನು ಸಂಜೆಯಾದರೆ ಸಾಕು ಹೊಲಗಳಲ್ಲಿ ಕೇವಲ ಮನೆಗಳಲ್ಲಿ ಬೆಳಕಿಗಾಗಿ ವಿದ್ಯುತ್ ನೀಡಿದರೆ ಹೇಗೆ ರೈತರಿಗೆ ತೊಂದರೆಯಾಗುತ್ತದೆ ಎಂದರು.

ಸದ್ಯ ಮಾಡಿರುವ ಆದೇಶವು ರೈತರ ಹಿತಾಸಕ್ತಿಗೆ ವಿರುದ್ದವಾಗಿದ್ದು ಕೂಡಲೇ ತಮ್ಮ‌ ಆದೇಶವನ್ನು ಹಿಂಪಡೆಯುವದು ಸೂಕ್ತ ಎಂದು ಮನವಿ ಪತ್ರದಲ್ಲಿ ಅವರು ಆಗ್ರಹಿಸಿದ್ದಾರೆ.

ಇದೇ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಸುರೇಶ ನಾಯ್ಕ ಜೊತೆಗೆ ರೈತ ಮುಖಂಡರಾದ ಭೀಮಪ್ಪ ರೊಡ್ಡನವರ, ಪಾರೀಶ ಉಪ್ಪಿನ, ಮಲ್ಲಪ್ಪ ಕಬ್ಬೂರ, ಸಂಜು ಡವಳೇಶ್ವರ ಉಪಸ್ಥಿತರಿದ್ದರು.

- Advertisement -
- Advertisement -

Latest News

ಗಾಣಿಗ ಅಭಿವೃದ್ಧಿ ನಿಗಮ ಸ್ಥಾಪನೆಗೆ ಕಲ್ಲಿನಾಥ ಶ್ರೀ ಆಗ್ರಹ

ಮೂಡಲಗಿ: ಜಗತ್ತಿಗೆ ಬೆಳಕನ್ನು ಕೊಟ್ಟ  ಗಾಣಿಗ ಸಮುದಾಯ ಇಂದು ಗಾಣಗಳು ಬತ್ತಿ ಹೋಗಿ ಯಂತ್ರೋಪಕರಣ ಬಂದಾಗಿನಿಂದ ಮೂಲ ಕಸಬು ಕಳೆದುಕೊಂಡು ಶೋಷನೆಗೆ ಒಳಗಾಗಿರುವದರಿಂದ ಗಾಣಿಗ ಸಮಾಜಕ್ಕೆ...
- Advertisement -

More Articles Like This

- Advertisement -
close
error: Content is protected !!