ಕಿತ್ತೂರು : ಕಿತ್ತೂರು ತಾಲೂಕ ನೌಕರರ ಬೇಡಿಕೆಯಂತೆ ಸರಕಾರಿ ನೌಕರರ ಮಕ್ಕಳ ಶಿಕ್ಷಣಕ್ಕೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಲಭ್ಯವಿಲ್ಲದೆ ರೂ. ೮ ಲಕ್ಷ ಮೀರುತ್ತಿದ್ದು ಕ್ರೀಮಿ ಲೇಯರ ( ಕೆನೆ ಪದರ ) ವ್ಯಾಪ್ತಿ ಮೀರಿರುವ ಕಾರಣದಿಂದ ಬಹುತೇಕ ಸಾಮಾನ್ಯ ನೌಕರರ ಮಕ್ಕಳಿಗೆ ಉನ್ನತ ಶಿಕ್ಷಣದಲ್ಲಿ ಜಾತಿ ಆದಾಯದ ಕೆಟಗರಿಯಲ್ಲಿ ಅವಕಾಶ ವಂಚಿತ ರಾಗುತ್ತಿದ್ದಾರೆ. ಅದನ್ನು ರೂ. ೧೫ ಲಕ್ಷದವರೆಗೆ ಹೆಚ್ಚಿಸಬೇಕೆಂದು ನೌಕರರ ಸಂಘದ ಮಾಜಿ ರಾಜ್ಯ ಪರಿಷತ್ ಸದಸ್ಯ ಡಾ ಶೇಖರ ಬಾಬು ಹಲಸಗಿಯವರು ರಾಜ್ಯಾಧ್ಯಕ್ಷ ಸಿ ಎಸ್ ಷಡಕ್ಷರಿ ಯವರನ್ನು ಒತ್ತಾಯಿಸಿದರು.
ನೌಕರರ ಸಂಘದ ಮಾಜಿ ತಾಲೂಕಾ ಅಧ್ಯಕ್ಷರು ಎಸ್ ಎಸ್ ಹುಲಮಣಿ, ನಿರ್ದೇಶಕರಾದ ಕೆ ಎ ಜಾಯಕ್ಕನವರ, ಎಂ ಎನ್ ಕಮ್ಮಾರ ಉಪಸ್ಥಿತರಿದ್ದರು
ಇದೆ ಸಂದರ್ಭದಲ್ಲಿ ದ್ವಿತೀಯ ಬಾರಿಗೆ ರಾಜ್ಯದ ನೌಕರರ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಪ್ರಯುಕ್ತ ಕಿತ್ತೂರು ತಾಲೂಕ ನೌಕರರ ಬಳಗದ ವತಿಯಿಂದ ಷಡಕ್ಷರಿಯವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ಶಿವಮೊಗ್ಗ ಜಿಲ್ಲಾ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಹಾಸನ ಜಿಲ್ಲಾ ನೌಕರರ ಸಂಘದ ಪದಾಧಿಕಾರಿಗಳು ಹಾಗೂ ಕೊಟ್ಟೂರ ತಾಲೂಕ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು