spot_img
spot_img

ಓತಿಹಾಳ ಸಾರಾಯಿ ಮುಕ್ತ ಗ್ರಾಮ ಮಾಡಲು ಆಗ್ರಹಿಸಿ ಮನವಿ

Must Read

spot_img
- Advertisement -

ಸಿಂದಗಿ: ತಾಲೂಕಿನ ಓತಿಹಾಳ ಸಾರಾಯಿ ಮುಕ್ತ ಗ್ರಾಮವಾಗಬೇಕು ಎಂದು ಆಗ್ರಹಿಸಿ ಓತಿಹಾಳ ಗ್ರಾಮಸ್ಥರು ಅಬಕಾರಿ ಇಲಾಖೆಯ ಉಪ ನಿರೀಕ್ಷಕ ರಜಪೂತ ಹಾಗೂ ತಹಶೀಲ್ದಾರ ಕಾರ್ಯಾಲಯದ ಶಿರಸ್ತೆದಾರ ಸುರೇಶ ಮ್ಯಾಗೇರಿ ಅವರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಮಾಜಿ ಶಾಲಾ ಅಭಿವೃಧ್ಧಿ ಅಧ್ಯಕ್ಷ ಶಿವಾನಂದ ಸಾಲಿಮಠ ಮಾತನಾಡಿ, ತಾಲೂಕಿನ ಓತಿಹಾಳ ಗ್ರಾಮದ ಶ್ರೀ ಸಿದ್ದಲಿಂಗೇಶ್ವರ ಮಠದ ಟ್ರಸ್ಟ್ ಕಮಿಟಿ ಪರವಾಗಿ ಓತಿಹಾಳ ಗ್ರಾಮದಲ್ಲಿ ಪರವಾನಿಗೆ ಇಲ್ಲದೆ ಸಾರಾಯಿ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ. ಈ ಬಗ್ಗೆ ಬಗ್ಗೆ ಕಳೆದ ಹಲವು ದಿನಗಳಿಂದ ಮೌಖಿಕವಾಗಿ ಅಬಕಾರಿ ಇಲಾಖೆಗೆ ತಿಳಿಸಿದ್ದಾಗ್ಯೂ ಯಾವುದೇ ಪ್ರಯೋಜನವಾಗಿಲ್ಲ ಅಲ್ಲದೆ ಅಕ್ರಮ ಸಾರಾಯಿ ಮಾರಾಟವಾಗುತ್ತಿರುವ ಬಗ್ಗೆ ಹಲವಾರು ಪತ್ರಿಕೆಗಳು ವರದಿ ಮಾಡಿವೆ ಆದರೆ ಇಲಾಖೆ ಮಾತ್ರ ಜಾಣ ಕುರುಡುತನ ಪ್ರದರ್ಶಿಸುತ್ತಿದೆ ಈ ಕೆಟ್ಟ ಹಾವಳಿಯಿಂದ ಗ್ರಾಮದಲ್ಲಿ ಶಾಂತಿ ಸಹನೆ, ಕುಟುಂಬಸ್ಥರು ನೆಮ್ಮದಿ ಕಳೆದು ಕೊಂಡು ಗ್ರಾಮದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ ಹಾಗೂ ಗ್ರಾಮದಲ್ಲಿ ತಂಟೆ, ತಕರಾರು, ಗಲಾಟೆ ಜಗಳದಿಂದಾಗಿ ಗ್ರಾಮದ ಸಂಸ್ಕೃತಿಗೆ ಧಕ್ಕೆ ತರುವಂತಾಗಿದ್ದು ತಕ್ಷಣ ಸಂಬಂಧಪಟ್ಟ ಅಧಿಕಾರಿಗಳು ಅಕ್ರಮ ಸಾರಾಯಿ ಮಾರಾಟ ತಡೆಯುವಂತೆ ಕ್ರಮಕೈಗೊಳ್ಳಬೇಕು ಎಂದು ಅಬಕಾರಿ ಇಲಾಖೆಗೆ ಹಾಗೂ ತಾಲೂಕು ದಂಡಾಧಿಕಾರಿಗಳಿಗೆ ಹಾಗೂ ಪೊಲೀಸ್ ಇಲಾಖೆಗೆ ಸಮಸ್ತ ಓತಿಹಾಳ ಗ್ರಾಮಸ್ಥರ ಪರವಾಗಿ ಹಾಗೂ ಕಮಿಟಿಯ ಪರವಾಗಿ ಮನವಿಯನ್ನು ಸಲ್ಲಿಸಿ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರ ಪ್ರತಿನಿಧಿ ಕೇಸುರಾಯ ಮಕಣಾಪುರ,ಸಿದ್ದಲಿಂಗ ಮಹಾರಾಜರ ಕಮಿಟಿ ಕಾರ್ಯದರ್ಶಿ ಕಿರಣಕುಮಾರ ನಾಟಿಕಾರ, ಪ್ರಗತಿಪರ ರೈತ ನಾಗಪ್ಪ ಪೂಜಾರಿ, ಗ್ರಾಮದ ಯುವ ಮುಖಂಡರಾದ ಮಂಜುನಾಥ ಮಣುರ,ಶಿವಪುತ್ರ ಬೂದಿಹಾಳ ಹಾಗೂ ಇನ್ನಿತರರು ಆಗ್ರಹ ಪಡಿಸಿದರು.

- Advertisement -
- Advertisement -

Latest News

ನಗರ ಕೇಂದ್ರ ಗ್ರಂಥಾಲಯದಲ್ಲಿ ವಿಶ್ವ ಮಾನವ ಹಕ್ಕುಗಳ ದಿನ ಆಚರಣೆ

ಬೆಳಗಾವಿ: ಮನುಷ್ಯ ಬದುಕಿನ ಹಕ್ಕುಗಳ ಮಹತ್ವವನ್ನು ಸಾರುವ ದಿನ ಮಾನವ ಹಕ್ಕುಗಳ ದಿನ. ಪ್ರತಿವರ್ಷ ಡಿಸೆಂಬರ್‌ 10 ರಂದು ಮಾನವ ಹಕ್ಕುಗಳ ದಿನವನ್ನು ಆಚರಿಸಲಾಗುತ್ತದೆ. 1948ರಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group