ಶರಣ ಸಮಾಜದ ಶಾಂತಿ, ಸ್ವಾಸ್ಥ್ಯ ಹಾಳು ಮಾಡುತ್ತಿರುವ ‘ವಚನ ದರ್ಶನ’ ಪುಸ್ತಕವನ್ನು ಮುಟ್ಟುಹೋಲು ಹಾಕಬೇಕೆಂದು ಒತ್ತಾಯಿಸಿ ಬಸವಧರ್ಮದ ಸಂಘಟನೆಯವರು ಮನವಿ ಪತ್ರ ಸಲ್ಲಿಸಲು ಧಾರವಾಡದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಿದ್ದಾರೆ
ಗದಗ, ಹುಬ್ಬಳ್ಳಿ, ಧಾರವಾಡ, ಬೆಳಗಾವಿಯ ಬಸವಭಕ್ತರು, ಅಕ್ಕನ ಅರಿವು ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಬೆಂಬಲ ಸೂಚಿಸಬೇಕಾಗಿ ಬಸವ ತಿಳಿವಳಿಕೆ ಮತ್ತು ಸಂಶೋಧನ ಕೇಂದ್ರದ ಡಾ. ಶಶಿಕಾಂತ ಪಟ್ಟಣ ವಿನಂತಿ ಮಾಡಿದ್ದಾರೆ.
ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿವಿಧ ಬಸವ ಸಂಘಟನೆಗಳ ಮುಖಂಡರು ಮಾತನಾಡಿ ಶರಣ ಸಮಾಜದ ಶಾಂತಿ, ಸ್ವಾಸ್ಥ್ಯ ಹಾಳು ಮಾಡುತ್ತಿರುವ ‘ವಚನ ದರ್ಶನ’ ಪುಸ್ತಕವನ್ನು ಕೂಡಲೇ ಮುಟ್ಟುಗೋಲು ಹಾಕಬೇಕೆಂದು ಆಗ್ರಹಿಸಿದ್ದರು.
ಸರಕಾರ ಒಂದು ವೇಳೆ ಈ ನಿಟ್ಟಿನಲ್ಲಿ ಸೂಕ್ತ ಕ್ರಮವನ್ನು ತೆಗೆದುಕೊಳ್ಳದಿದ್ದಲ್ಲಿ ಮುಂಬರುವ ದಿನಗಳಲ್ಲಿ ಬಸವ ಕೇಂದ್ರ, ಬಸವ ತಿಳುವಳಿಕೆ ಸಂಶೋಧನಾ ಕೇಂದ್ರ ಪುಣೆ, ಲಿಂಗಾಯತ ಏಕತಾ ಸಮಿತಿ ಅನುಭವ ಮಂಟಪ ಯಾಲಕ್ಕಿ ಶೆಟ್ಟರ ಕಾಲೋನಿ, ಬಸವ ಸಮಿತಿ, ಶರಣ ಸಾಹಿತ್ಯ ಪರಿಷತ್, ಜೆ. ಎಲ್.ಎಂ, ರಾಷ್ಟ್ರೀಯ ಬಸವ ದಳ ಮುಂತಾದ ಬಸವ ಪರ ಸಂಘಟನೆಗಳು ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ.