ಸಿಂದಗಿ; ರಾಜ್ಯ ಮಾಜಿ ದೇವದಾಸಿ ತಾಯಂದಿರ ಹಕ್ಕುಗಳಿಗೋಸ್ಕರ ಸದನದಲ್ಲಿ ಧ್ವನಿ ಎತ್ತುವಂತೆ ಸಿಂಧೂ ತಾಯಿ ದೇವದಾಸಿ ತಾಯಂದಿರ ಒಕ್ಕೂಟದ ಪದಾಧಿಕಾರಿಗಳು ಶಾಸಕ ಅಶೋಕ ಮನಗೂಳಿ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ನೇತೃತ್ವ ವಹಿಸಿದ ಒಕ್ಕೂಟದ ಅಧ್ಯಕ್ಷೆ ಸರಿತಾ ಹರಿಜನ್ ಮಾತನಾಡಿ, ಇದೇ ತಿಂಗಳಿನಲ್ಲಿ ಬೆಳಗಾವಿಯಲ್ಲಿ ನಡೆಯಲ್ಲಿರುವ ಚಳಿಗಾಲದ ಅಧಿವೇಶನದಲ್ಲಿ ರಾಜ್ಯದ ಮಾಜಿ ದೇವದಾಸಿ ತಾಯಿಂದಿರ ಹಕ್ಕುಗಳಿಗೋಸ್ಕರ ಮಾಜಿ ದೇವದಾಸಿ ತಾಯಿಂದಿರ ಪ್ರಮುಖ ಬೇಡಿಕೆಗಳಾದ ರಾಜ್ಯದಲ್ಲಿ ೧೪ ಜಿಲ್ಲೆಗಳಲ್ಲಿ ಮಾಜಿ ದೇವದಾಸಿ ತಾಯಿಂದಿರ ಇರುವುದರಿಂದ ಪ್ರತ್ಯೇಕ ದೇವದಾಸಿ ಮಹಿಳಾ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು. ಮಾಜಿ ದೇವದಾಸಿ ತಾಯಂದಿರಿಗೆ ಭೂ ಒಡೆತನ ಯೋಜನೆಯಡಿಯಲ್ಲಿ ಆಸ್ತಿ ನೀಡಬೇಕು. ಮಾಜಿ ದೇವದಾಸಿ ತಾಯಂದಿರ ಮಕ್ಕಳಿಗೆ ಶೈಕ್ಷಣಿಕ ಸಹಾಯಧನ ನೀಡಬೇಕು. ಮಾಜಿ ದೇವದಾಸಿ ತಾಯಂದಿರ ಮಕ್ಕಳಿಗೆ ಸ್ವಯಂ ಉದ್ಯೋಗಕ್ಕೆ ಸಹಾಯಧನ ನೀಡಬೇಕು. ಮಾಜಿ ದೇವದಾಸಿ ತಾಯಂದಿರಿಗೆ ವಸತಿ ಯೋಜನೆಗೆ ಸಹಾಯಧನ ನೀಡಬೇಕು ಎಂದು ಶಾಸಕರು ಧ್ವನಿ ಎತ್ತುವಂತೆ ಸಿಂಧೂತಾಯಿ ದೇವದಾಸಿ ಮಹಿಳಾ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಸರಿತಾ ಹರಿಜನ್ ಹಾಗೂ ಉಪಾಧ್ಯಕ್ಷರಾದ ಕಸ್ತೂರಿಬಾಯಿ ಕಟ್ಟಿಮನಿ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಸಿಂದಗಿ ಹಾಗೂ ಆಲಮೇಲ ತಾಲೂಕಿನ ಮಾಜಿ ದೇವದಾಸಿ ತಾಯಂದಿರು ಹಾಜರಿದ್ದರು. ಶಾಸಕರು ಚಳಿಗಾಲ ಅಧಿವೇಶನದಲ್ಲಿ ಮಾತನಾಡುವುದಾಗಿ ಭರವಸೆ ನೀಡಿದರು.