spot_img
spot_img

ಅಂಗವಿಕಲರಿಗೆ ಆಹಾರ ಕಿಟ್ ವಿತರಿಸಲು ಗ್ರಾಪಂ ಗಳಿಗೆ ಸೂಚಿಸಲು ಮನವಿ

Must Read

- Advertisement -

ಸಿಂದಗಿ: ಗ್ರಾಮ ಪಂಚಾಯತ ಅಭಿವೃದ್ದಿ ಅಧಿಕಾರಿಗಳಿಗೆ 5 ಪ್ರತಿಶತ ಹಣದಲ್ಲಿ ಅಹಾರ ಧಾನ್ಯಗಳ ಕಿಟ್ ಗಳನ್ನು ಪೂರೈಕೆ ಮಾಡಲು ಆದೇಶ ಮಾಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದಿಂದ ಘಟಕ ಸಿಂದಗಿ ಮತ್ತು ಶೌರ್ಯಸಾಯಿ ಕೃಪಾ ಅಂಗವಿಕಲರ ಅಭಿವೃದ್ದಿ ಸಂಸ್ಥೆ ವಿಜಯಪುರ (ಅದ್ಯಕ್ಷರು ವಿಜಯಪುರ) ಇವರ ಸಹಯೋಗದಲ್ಲಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಅಂಗವಿಕಲರ ಸಂಘದ ಅಧ್ಯಕ್ಷ ವಿಠ್ಠಲ ಕರ್ಜಗಿ ಮಾತನಾಡಿ, ತಾಲೂಕಿನ 29 — ಗ್ರಾಮಪಂಚಾಯತಿಗಳ ವ್ಯಾಪ್ತಿಗೆ ಬರುವ ವಿವಿಧ ಹಳ್ಳಿಗಳಲ್ಲಿ ವಾಸ ಮಾಡಿಕೊಂಡಿರುವ ಬಡ ಅಂಗವಿಕಲ ಫಲಾನುಭವಿಗಳಿಗೆ ಯಾವುದೇ ಬಜೆಟ್ ನಲ್ಲಿ ಘೋಷಣೆ ಮಾಡಿರುವುದಿಲ್ಲ, ಮತ್ತು ಕೋವಿಡ್ ಸಮಯದಲ್ಲೂ ಕೂಡಾ ಸಂಪೂರ್ಣವಾಗಿ ಅಂಗವಿಕಲರನ್ನು ಕಡೆಗಣಿಸಿದ್ದರಿಂದ ಅಂಗವಿಕಲರ ಪಾಡು ಭಿಕ್ಷೆ ಬೇಡುವವರಿಗಿಂತ ಕನಿಷ್ಠವಾಗಿದೆ ಕಾರಣ ಮುಖ್ಯಮಂತ್ರಿಗಳು ಗ್ರಾ.ಪಂ 2020-2021 ರ ಅವಧಿಯಲ್ಲಿನ 5 ಪ್ರತಿಶತ ಹಣದಲ್ಲಿ ಉಚಿತವಾಗಿ ಆಹಾರ ಕಿಟ್ ಪೂರೈಕೆ ಮಾಡುವಂತೆ ಅಭಿವೃದ್ದಿ ಅಧಿಕಾರಿಗಳಿಗೆ ಆದೇಶ ನೀಡಬೇಕು ಅಲ್ಲದೆ ಅಂಗವಿಕಲರಿಗಾಗಿ ಕೋವಿಡ್- ೧೯ ಪರಿಹಾರ ಧನವನ್ನು ಘೋಷಿಸಬೇಕು.

ಈಗ ಕೋವಿಡ್-೧೯ ಸಮಯದಲ್ಲಿ ಬಡ ಅಂಗವಿಕಲರಿಗೆ ಕೆಲಸ ಕಾರ್ಯಗಳು ಏನೂ ಇಲ್ಲದೆ ಸಂಪೂರ್ಣವಾಗಿ ನಿರ್ಗತಿಕರಾಗಿರುವ ಕಾರಣ ತುಂಬಾ ಕಷ್ಟದಲ್ಲಿರುವ ಬಡ ಅಂಗವಿಕಲ ಫಲಾನುಭವಿಗಳ ಹೆಸರಿಗೆ ಆಹಾರ ಸಾಮಗ್ರಿಗಳ ಕಿಟ್ ಗಳನ್ನು ವಿತರಣೆ ಮಾಡಲು ಕ್ರಮ ಕೈಕೊಂಡು ಗ್ರಾಮ ಪಂಚಾಯತ ಅಭಿವೃದ್ದಿ ಅಧಿಕಾರಿಗಳಿಗೆ ಹಾಗು ಅದ್ಯಕ್ಷರಿಗೆ ಮತ್ತು ಕಾರ್ಯದರ್ಶಿಗಳಿಗೆ ಇಲಾಖೆಯಿಂದ ಸೂಚಿಸಿ ಆದೇಶ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿಕೊಂಡರು.

- Advertisement -

ಈ ಸಂದರ್ಭದಲ್ಲಿ ವಿಠ್ಠಲ ಕರ್ಜಗಿ, ಕಸ್ತೂರಿ ಬೂದಿಹಾಳ, ವಸಂತ ರಾವ ವೆಂಕಟರಾವ ಕುಲಕರ್ಣಿ, ಬಂದೇನವಾಜ ಕಲ್ಲೂರ, ವಿಜಯಕುಮಾರ ಬಜಂತ್ರಿ, ಪುಂಡಲೀಕ ಹಿರೇಕುರಬರ, ಸಬೀಯಾ ಮರ್ತುರ ಇದ್ದರು.

- Advertisement -
- Advertisement -

Latest News

ನಮ್ಮ ಊರ ಜಾತ್ರೆಯೊಂದನ್ನು ನಿಮ್ಮ ಬದುಕಿನ ಯಾತ್ರೆಗೆ ಹೋಲಿಸುತ್ತ….

ಹಾಯ್, ಹಲೋ, ನಮಸ್ಕಾರ...ಸ್ನೇಹಿತರೆ ನೀವೆಲ್ಲ ಹೇಗಿದ್ದೀರಿ? ಬಹಳಷ್ಟು ಜನ ಪರವಾಗಿಲ್ಲ ಚೆನ್ನಾಗಿದ್ದೀವಿ ಅಂತೀರಿ ಇನ್ನು ಕೆಲವಷ್ಟು ಜನ ಅಯ್ಯೋ ಅದ್ ಏನ್ ಕೇಳ್ತೀರಾ ಬಿಡಿ ಅನ್ನುವಂತಹ...
- Advertisement -

More Articles Like This

- Advertisement -
close
error: Content is protected !!
Join WhatsApp Group