ಮೂಡಲಗಿ: ಪುರಸಭೆಯ ವಿವಿಧ ವಿಭಾಗಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಹೊರಗುತ್ತಿಗೆ ಸಿಬ್ಬಂದಿಗಳನ್ನು ನೇರ ವೇತನಕ್ಕೆ ಒಳಪಡಿಸಬೇಕು ಹಾಗೂ ವಿಶೇಷ ನಿಯಮಾವಳಿಯನುಸಾರ ಖಾಯಂಗೊಳಿಸುವಂತೆ ಆಗ್ರಹಿಸಿ ಗುರುವಾರ ಪುರಸಭೆ ಮುಖ್ಯಾಧಿಕಾರಿ ದೀಪಕ್ ಹರ್ದಿ ಹಾಗೂ ತಹಸೀಲ್ದಾರ ಡಿ ಜಿ ಮಹಾತ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಕರ್ನಾಟಕ ರಾಜ್ಯ ನಗರಪಾಲಿಕೆ, ನಗರಸಭೆ,ಪುರಸಭೆ, ಪಟ್ಠಣ ಪಂಚಾಯಿತಿ ಹೊರ ಗುತ್ತಿಗೆ ನೌಕರರ ಸಂಘದ ರಾಜ್ಯಾಧ್ಯಕ್ಷ ಎಮ್ ಬಿ ನಾಗಣ್ಣಗೌಡ ಅವರ ನಿರ್ದೇಶನದ ಮೇರೆಗೆ ಮೇ. 19ರಂದೇ ರಾಜ್ಯದೆಲ್ಲೆಡೆ ಮನವಿ ನೀಡಲಾಗುತ್ತಿದ್ದು ಅದರಂತೆ ನಾವೂ ಕೂಡ ಮನವಿ ಸಲ್ಲಿಸುತ್ತಿದ್ದು ಹೊರ ಗುತ್ತಿಗೆಯಾಗಿ ಕೆಲಸ ನಿರ್ವಹಿಸುತ್ತಿರುವ ನೌಕರರು,ಕಾರ್ಮಿಕರೆಲ್ಲರಿಗೂ ಆಯಾ ಸ್ಥಳೀಯ ಸಂಸ್ಥೆಗಳು ನೇರ ವೇತನ ಪಾವತಿಸಬೇಕು ಹಾಗೂ ನಮ್ಮ ಸೇವೆಯನ್ನು ಕಾಯಂಗೊಳಿಸಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ರಮೇಶ ಆಲಗೂರ, ಪಾಂಡು ಮುತಗಿ, ಶಂಕರ ಹಂದಿಗುಂದ, ಲಕ್ಕಪ್ಪ ಗಾಜಿ, ಸಂತೋಷ ನಾಯಿಕ, ಯಶವಂತ ಶಿದ್ಲಿಂಗಪ್ಪಗೋಳ, ರವಿ ಕೆಳಗೇರಿ, ನಾಗಪ್ಪ ತಪ್ಸಿ, ಮಿಥುನ ಸಣ್ಣಕ್ಕಿ, ಶಿವಬೋಧ ಕೊಪ್ಪದ, ಶಿವಬೋಧ ಕಪ್ಪಲಗುದ್ದಿ, ಧರೆಪ್ಪ ಕಪ್ಪಲಗುದ್ದಿ, ಅಬ್ದುಲ್ ಪೀರಜಾದೆ, ಈರಪ್ಪ ಕಂಬಾರ, ಪ್ರಕಾಶ ಮಾರಿಹಾಳ, ಶಿವಪ್ಪ ಪೂಜೇರ ಇದ್ದರು.