spot_img
spot_img

ನಮ್ಮ ಹೋರಾಟಕ್ಕೆ ಸ್ಪಂದಿಸಿ ಇಲ್ಲವಾದರೆ ನಿಮಗೆ ಕಷ್ಟ : ದಲಿತ ಮುಖಂಡ ಅನಿಲ ಬೆಲ್ದಾರ ಎಚ್ಚರಿಕೆ

Must Read

ಬೀದರ – ಗಡಿ ಜಿಲ್ಲೆ ಬೀದರ್ ನಲ್ಲಿ ಕರ್ನಾಟಕ ಸ್ವಾಭಿಮಾನಿ ಎಸ್ ಸಿ – ಎಸ್ ಟಿ ಸಂಘಟನೆಗಳ ಒಕ್ಕೂಟ ಮತ್ತು ಮೀಸಲಾತಿ ಹೆಚ್ಚಳ ಹೋರಾಟ ಕ್ರಿಯಾ ಸಮಿತಿ ವತಿಯಿಂದ ರಾಜ್ಯ ಸರ್ಕಾರ ವಿರುದ್ಧ ಹೋರಾಟ ನಡೆಸಲಾಯಿತು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ (101 ಪರಿಶಿಷ್ಟ ಜಾತಿಗಳ ಮತ್ತು 50 ಪರಿಶಿಷ್ಟ ಪಂಗಡಗಳ) ಶಿಕ್ಷಣ ಮತ್ತು ಉದ್ಯೋಗದಲ್ಲಿ ಕ್ರಮವಾಗಿ ಶೇ. 15 ರಿಂದ 17 ಮತ್ತು ಶೇಕಡ 3 ರಿಂದ 7 ಕ್ಕೆ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಲು ನಿವೃತ್ತ ನ್ಯಾಯಮೂರ್ತಿ ನಾಗ ಮೋಹನದಾಸ ಆಯೋಗದ ವರದಿಯನ್ನು ಶೀಘ್ರವಾಗಿ ಜಾರಿಗೊಳಿಸಲು ಹೋರಾಟಗಾರರು ಒತ್ತಾಯಿಸಿದರು.

ಜನಸಂಖ್ಯೆಗನುಗುಣವಾಗಿ ಎಸ್ ಸಿ ಎಸ್ ಟಿ ಗಳ ಮೀಸಲಾತಿ ಪ್ರಮಾಣವನ್ನು ಹೆಚ್ಚಳ ಮಾಡಬೇಕೆಂದು ಸಂವಿಧಾನ ಬದ್ಧವಾಗಿ ಹೋರಾಟ ಮಾಡುತ್ತಿದ್ದೇವೆ. ನಾವು ರಸ್ತೆಗೆ ಇಳಿಯುವಂತೆ ಮಾಡಬೇಡಿ. ಆಮೇಲೆ ನಮ್ಮ ಪ್ರವಾಹ ತಡೆಗಟ್ಟಲು ಯಾರಿಂದಲೂ ಸಾಧ್ಯವಿಲ್ಲ ಆದ್ದರಿಂದ ನಮ್ಮ ಬೇಡಿಕೆಗೆ ಸ್ಪಂದಿಸಿ ಎಂದು ಸಂವಿಧಾನ ರಕ್ಷಣಾ ಸಮಿತಿಯ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಅನಿಲ್ ಬೆಲ್ದಾರ್ ಹೇಳಿದರು.

ಬೀದರ ಪಟ್ಟಣದ ಅಂಬೇಡ್ಕರ್ ವೃತ್ತದಿಂದ, ಭಗತ್ ಸಿಂಗ್ ವೃತ್ತದ ಮಾರ್ಗವಾಗಿ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಶಾಂತಿಯುತ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಯವರ ಮುಖಾಂತರ ರಾಜ್ಯದ ಮುಖ್ಯಮಂತ್ರಿಯವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಎನ್ ಸಿ ಪಿ ಯುವ ನಾಯಕ ಭರತ ಕಾಂಬಳೆ, ಇನ್ನಿತರ ಹೋರಾಟಗಾರರು ಭಾಗವಹಿಸಿದ್ದರು.


ವರದಿ: ನಂದಕುಮಾರ ಕರಂಜೆ, ಬೀದರ

- Advertisement -
- Advertisement -

Latest News

ಅಮೃತ ಮಹೋತ್ಸವ ನಿಮಿತ್ತ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ

ಬೆಳಗಾವಿ - ಸ್ವಾತಂತ್ರ್ಯದ ಅಮೃತ ಮಹೋತ್ಸವದ ನಿಮಿತ್ತ ಗಣಪತಿ ಗಲ್ಲಿ ಪ್ರದೇಶದಲ್ಲಿ ಶಾಲಾ ಮಟ್ಟದಲ್ಲಿ ನಡೆದ ಸ್ಪರ್ಧೆಗಳ ಬಹುಮಾನ ವಿತರಣಾ ಕಾರ್ಯಕ್ರಮವು ಸರ್ಕಾರಿ ಮರಾಠಿ ಶಾಲೆ...
- Advertisement -

More Articles Like This

- Advertisement -
close
error: Content is protected !!