spot_img
spot_img

ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡಿ – ಅಧಿಕಾರಿಗಳಿಗೆ ಲೋಕಾಯುಕ್ತರ ಸಲಹೆ

Must Read

 

ಸಿಂದಗಿ: ಪ್ರಚಾರದ ಕೊರತೆಯಿಂದ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಆಗದೇ ಬರೀ ಅಧಿಕಾರಿಗಳ ಸಭೆಯಾಗಿ ಪರಿಣಮಿಸಿತ್ತು ತಾಲೂಕಿನ ಎಲ್ಲ ಅಧಿಕಾರಿಗಳು ಆಯಾ ಇಲಾಖೆಗಳಲ್ಲಿ ಇದ್ದು ನಿತ್ಯ ಬರುವ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡಿ, ವಿನಾಕಾರಣ ಆಫೀಸುಗಳಿಗೆ ಅಲೆದಾಡುವಂತೆ ಮಾಡಬೇಡಿ ಎಂದು ಕರ್ನಾಟಕ ಲೋಕಾಯುಕ್ತ ಉಪ ಅಧಿಕ್ಷಕ ಅರುಣ ನಾಯಕ ಸೂಚಿಸಿದರು.

ಪಟ್ಟಣದ ತಾಲೂಕು ಪಂಚಾಯತಿಯಲ್ಲಿ ಕರ್ನಾಟಕ ಲೋಕಾಯುಕ್ತ ಅವರು ಉಪ ವಿಭಾಗಾಧಿಕಾರಿಗಳಾದ ರಾಮಚಂದ್ರ ಗಡೆದ ನೇತೃತ್ವದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಹಾಗೂ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಪುರಸಭೆಯಲ್ಲಿ ಅವರವರ ಆಸ್ತಿಗಳ ಉತಾರ ಸಲುವಾಗಿ ಅಲೆದಾಡುತ್ತಿರುವ ಪ್ರಸಂಗಗಳು ಬೆಳಕಿಗೆ ಬಂದಿದ್ದು ಹಾಗೆ ಮಾಡಬೇಡಿ, ಪತ್ರಿಕೆಗಳಲ್ಲಿ ವರದಿಯಾಗುವುದು ನಿಮ್ಮ ನ್ಯೂನತೆಗಳನ್ನು ತಿದ್ದಿಕೊಳ್ಳಲು ಅದೊಂದು ಸದವಕಾಶ ಪತ್ರಿಕಾ ವರದಿಗಾರರ್ಯಾರು ವಿರೋಧಿಗಳಲ್ಲ ವರದಿಯಾಗದ ಹಾಗೆ ನೋಡಿಕೊಳ್ಳುವುದು ಅಧಿಕಾರಿಗಳ ಕರ್ತವ್ಯವಾಗಿದೆ ಎಂದರು.   

ತಾಲೂಕಾ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆಯಿಂದ ಹೆರಿಗೆ ಆಸ್ಪತ್ರೆಯಲ್ಲಿ ಸ್ವಚ್ಚತೆಯಿಲ್ಲದಂತಾಗಿದೆ ಅಲ್ಲದೆ ಪ್ರತಿ ವಾರ್ಡಗಳಲ್ಲಿ ನಲ್ಲಿಯ ಮೂಲಕ ಕುಡಿಯುವ ಹಾಗೂ ಬಿಸಿ ನೀರಿನ ವ್ಯವಸ್ಥೆಯಿಲ್ಲ ಅದನ್ನು ತುರ್ತು ವ್ಯವಸ್ಥೆ ಕಲ್ಪಿಸಿ 2 ಕಡೆ ಚಾರ್ಜ ಇದ್ದರು ಕೂಡಾ ಸರಕಾರಕ್ಕೆ ಪತ್ರ ಬರೆದು ಸಿಬ್ಬಂದಿ ನೇಮಕ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.

ವಸತಿ ನಿಲಯಗಳಲ್ಲಿ ಗುಟ್ಕಾ, ಸಿಗರೇಟ ಸೇದುತ್ತಿರುವುದು ಕಂಡುಬರುತ್ತಿದ್ದು ಅಧಿಕಾರಿಗಳು ಕೂಡಲೇ ನಿಗಾವಹಿಸಬೇಕು ಕಾವಲುಗಾರರನ್ನು ನೇಮಕ ಮಾಡಿಕೊಳ್ಳಬೇಕು ಅಲ್ಲದೆ ಹಾಸ್ಟೇಲ್‍ಗಳಲ್ಲಿ ಶಾಲಾ-ಕಾಲೇಜುಗಳಲ್ಲಿ ನಡೆಯುತ್ತಿರುವ ವಿದ್ಯಾಭ್ಯಾಸ ಮನವರಿಕೆಯಾಗುವ ಹಾಗೆ ವಾರ್ಡನ್‍ಗಳು ನೋಡಿಕೊಳ್ಳಬೇಕು ಮತ್ತು ಹೆಚ್ಚು ಪುಸ್ತಕಗಳನ್ನು ಸಂಗ್ರಹಿಸಿ ಗ್ರಂಥಾಲಯ, ಕಂಪ್ಯೂಟರ ಬಳಕೆ ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂದು ಹೇಳಿದರು.

ಗ್ರಾಮೀಣ ಭಾಗದ ಶಾಲೆಗಳಲ್ಲಿ ಶೌಚಾಲಯಗಳ ಸ್ವಚ್ಚತೆ ಕಾಪಾಡಿ ಜೆಜಿಎಂ ಯೋಜನೆಯಿಂದ ನೀರಿನ ವ್ಯವಸ್ಥೆ ಕಲ್ಪಿಸಿಕೊಳ್ಳಿ ಎಂದು ಹೇಳಿದ ಅವರು ಸರಕಾರ ನೀಡಿವ ಮೂಲ ಸೌಲಭ್ಯಗಳನ್ನು ಕಳಪೆ ಮಟ್ಟದ್ದಾಗಿ ಇರದೇ ಸರಿಯಾಗಿ ಬಳಕೆ ಮಾಡಿ ಮತ್ತು ಬಯಲು ಶೌಚಾಲಯ ತಪ್ಪಿಸಲು ಮಕ್ಕಳಿಂದ ಜಾಗೃತಿ ಅಭಿಯಾನ ರೂಪಿಸಿ ಎಂದು ತಿಳಿಸಿದರು.

ಅಬಕಾರಿ ಅಧಿಕಾರಿಗಳು ಡಾಬಾಗಳಲ್ಲಿ ನಡೆಯುತ್ತಿರುವ ಅಕ್ರಮ ಮದ್ಯ ತಡೆಗಟ್ಟಬೇಕು. ಎಲ್ಲೆಂದರಲ್ಲಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟ ನಡೆಯುತ್ತಿರುವ ಬಗ್ಗೆ ಗುಮಾನಿಗಳಿದ್ದು ದಾಳಿ ನಡೆಸಿ ಕ್ರಮ ಜರುಗಿಸಿ ಎಂದರು.

ಹೆಸ್ಕಾಂ ಅಧಿಕಾರಿ ಬಿರಾದಾರ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಬಡತನ ರೇಖೆಯಲ್ಲಿದ್ದು ಕಡು ಬಡವರ ಮನೆಗಳಲ್ಲಿ ವಿದ್ಯುತ್ ಪೂರೈಸುವ ನಿಟ್ಟಿನಲ್ಲಿ ನಮ್ಮ ಬೆಳಕು, ಅಮೃತ್ ಯೋಜನೆಯಡಿ ಜಾರಿಯಲ್ಲಿದ್ದು ಗ್ರಾಪಂ ಮೂಲಕ ಡಂಗುರ ಸಾರಿ ಮಾಹಿತಿ ಪಡೆದುಕೊಳ್ಳಲಾಗುತ್ತಿದೆ ಎಂದು ತಿಳಿಸಿದರು. 

ಸಬ್ ರಜಿಸ್ಟ್ರಾರ ಕಚೇರಿಯಲ್ಲಿ ಸಾರ್ವಜನಿಕರು ಋಣಭಾರ ಪತ್ರಕ್ಕಾಗಿ ವಿನಾಕಾರಣ ಹಣ ಲೂಟಿಯಗುತ್ತಿದೆ ಎಂದು ಸಾರ್ವಜನಿಕರ ದೂರು ಇದ್ದು ಸರಕಾರಿ ಫೀ ಪಡೆದು ಬೇಗ ಪೂರೈಸಿ ಹಿಟ್ಲರ್ ರೀತಿಯಲ್ಲಿ ವರ್ತಿಸದೇ ಅವರನ್ನು ಅಲೆದಾಡುವಂತೆ ಮಾಡದಿರಿ ಎಂದು ಖಡಕ್ಕಾಗಿ ಸೂಚಿಸಿದರು.

ಈ ಸಂದರ್ಭದಲ್ಲಿ ಇಂಡಿ ಉಪವಿಭಾಗಾಧಿಕಾರಿ ರಾಮಚಂದ್ರ ಗಡೇದ, ತಹಶೀಲ್ದಾರ ನಿಂಗಣ್ಣ ಬಿರಾದಾರ, ಗ್ರೇಡ್ 2 ತಹಶೀಲ್ದಾರ ಪ್ರಕಾಶ ಸಿಂದಗಿ, ಲೋಕಾಯುಕ್ತ ಸಿಪಿಐ ಆನಂದ ವಿ.ಟಿ. ಆನಂದ ಡೋಣಿ, ಸಿಬ್ಬಂದಿ ಆನಂದ ಪಡಶೆಟ್ಟಿ, ಗುರು ಹಡಪದ, ಸಂತೋಷ ಅಮರಖೇಡ, ವಸೀಮ, ಸಂತೋಷ ಚವ್ಹಾಣ ಸೇರಿದಂತೆ ಕೃಷಿ ಇಲಾಖೆ, ಕೆಎಸ್‍ಆರ್‍ಟಿಸಿ, ಹೆಸ್ಕಾಂ, ತೋಟಗಾರಿಕೆ, ಕೃಷಿ ಸಂಶೋಧನಾ ಕೇಂದ್ರ, ಅಕ್ಷರ ದಾಸೋಹ, ಲೋಕೋಪಯೋಗಿ ಇಲಾಖೆ, ಜಿಲ್ಲಾ ಪಂಚಾಯತಿಯ ಹಲವು ಇಲಾಖೆಗಳ ಅಧಿಕಾರಿಗಳು ಅಹವಾಲುಗಳ ಬಗ್ಗೆ ವಿವರಣೆ ನೀಡಿದರು.

- Advertisement -
- Advertisement -

Latest News

ಉಂಡು ಮಲಗಿದ ಮೇಲೂ ಗಂಡ ಹೆಂಡಿರ ಜಗಳ !

ಸಂಸಾರದ ಬಂಡಿ ಸರಾಗವಾಗಿ ಸಾಗಬೇಕಾದರೆ ಗಂಡ ಹೆಂಡತಿ ಎನ್ನುವ ಎರಡು ಗಾಲಿಗಳು ಸಮಸಮವಾಗಿ ಚಲಿಸಬೇಕು. ಎರಡೂ ಗಾಲಿಗಳಿಗೆ ಪ್ರಾಧಾನ್ಯತೆಯಿದೆ. ಒಂದು ಹೆಚ್ಚು ಒಂದು ಕಡಿಮೆ ಇಲ್ಲ....
- Advertisement -

More Articles Like This

- Advertisement -
close
error: Content is protected !!