ಗೌರವ, ಘನತೆ, ಸ್ವನಿರ್ಧಾರಗಳನ್ನು ತಗೆದುಕೊಳ್ಳುವ ಮೂಲಕ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಿ – ಬಿ.ಎನ್.ಹೊಸೂರ

Must Read

ಕುಡಿಯುವ ನೀರು ವ್ಯತ್ಯಯ ಆಗದಂತೆ ನೋಡಿಕೊಳ್ಳುವ ಭರವಸೆ ನೀಡಿದ ರುದ್ರೇಶ ಘಾಳೆ

ಬೆಳಗಾವಿ - ಕಾರ್ಮಿಕರು ತಮ್ಮ ಬೇಡಿಕೆಗಳನ್ನು ಈಡೇರಿಸಲು ನಡೆಸಿದ ಮುಷ್ಕರದಿಂದಾಗಿ ಬೆಳಗಾವಿ ಜನತೆಗೆ ಕುಡಿಯುವ ನೀರಿನ ವ್ಯವಸ್ಥೆಯಲ್ಲಿ ತೊಂದರೆ ಉಂಟಾಗಿದ್ದು ವಿಷಾದನೀಯವಾಗಿದೆ ವ್ಯವಸ್ಥೆಯನ್ನು ಸಂಪೂರ್ಣವಾಗಿ ಸರಿ...

ಹೆಣ್ಣು ಮಕ್ಕಳು ಪೌಷ್ಠಿಕ ಆಹಾರ ಸೇವನೆ ಮಾಡಬೇಕು – ಡಾ.ನಯನಾ ಭಸ್ಮೇ

ಸವದತ್ತಿ - “ಹೆಣ್ಣು ಮಕ್ಕಳು ಮಾನಸಿಕವಾಗಿ ಹಾಗೂ ದೈಹಿಕವಾಗಿಯೂ ಸದೃಢವಾಗಿರಬೇಕು ಅವರು ಹದಿ ಹರೆಯದ ವಯಸ್ಸಿಗೆ ಬಂದಾಗ ಅವರಲ್ಲಿ ನೈಸರ್ಗಿಕವಾದ ಬದಲಾವಣೆಗಳು ಆಗುತ್ತವೆ ಅಂತಹ ಸಂದರ್ಭದಲ್ಲಿಯೂ...

ಪ್ರೊ.ಅಲಕಾ ಕುರಣೆ ಯವರಿಗೆ ‘ ಶಿಕ್ಷಕ ಶ್ರೀ ‘ ರಾಜ್ಯ ಮಟ್ಟದ ಪ್ರಶಸ್ತಿ

ಬೆಳಗಾವಿ: ಅಕ್ಷರ ದೀಪ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಲಾ ವೇದಿಕೆ, ಧಾರವಾಡ ಬೆಂಗಳೂರು ಘಟಕದಿಂದ ನೀಡಲಾಗುವ ರಾಜ್ಯ ಮಟ್ಟದ ಶಿಕ್ಷಕ ಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಬೆಳಗಾವಿಯ...

ಸವದತ್ತಿ: “ಶಿಕ್ಷಕ ವೃತ್ತಿ ಪವಿತ್ರವಾದದ್ದು. ಅದರಲ್ಲೂ ತಾಲೂಕಿನ ಶಿಕ್ಷಕರ ಸಂಘದ ಅಧ್ಯಕ್ಷ ಹುದ್ದೆ ಬಹಳಷ್ಟು ಜವಾಬ್ದಾರಿಗಳನ್ನು ಹೊತ್ತಿರುತ್ತದೆ.ಎಚ್.ಆರ್.ಪೆಟ್ಲೂರರವರು ಈ ಹುದ್ದೆಗೆ ಆಯ್ಕೆ ಆಗಿದ್ದು ಸಂತಸ ತಂದಿದೆ.ಈ ಹುದ್ದೆಯಲ್ಲಿರುವವರೆಗೂ ತಮ್ಮ ಹುದ್ದೆಗೆ ನ್ಯಾಯ ಸಲ್ಲಿಸುವ ಜೊತಗೆ ತಮ್ಮ ವ್ಯಕ್ತಿತ್ವದ ಘನತೆಗೆ ತಕ್ಕಂತೆ ಗೌರವದೊಂದಿಗೆ ಕ್ಲಿಷ್ಟಕರ ಸಂದರ್ಭದಲ್ಲಿ ಸ್ವ ನಿರ್ಧಾರಗಳನ್ನು ತಗೆದುಕೊಳ್ಳುವ ಮೂಲಕ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂಧಿಸುವ ಮೂಲಕ ಶಿಕ್ಷಕರ ಅಚ್ಚುಮೆಚ್ಚಿನ ಅಧ್ಯಕ್ಷರಾಗಲಿ,ದೇವರು ಅವರಿಗೆ ಆಯುರಾರೋಗ್ಯ ಕರುಣಿಸಲಿ”ಎಂದು ಸವದತ್ತಿ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಗಳು ಹಾಗೂ ಸಂಸ್ಕøತ ಪಾಠಶಾಲೆಯ ಮುಖ್ಯ ಗುರುಗಳಾದ ಬಿ.ಎನ್.ಹೊಸೂರ ಕರೆ ನೀಡಿದರು.

ಅವರು ಸವದತ್ತಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ 4 ರಲ್ಲಿ ಶಿಕ್ಷಕ ಎಚ್.ಆರ್.ಪೆಟ್ಲೂರ್ ನೂತನವಾಗಿ ಸವದತ್ತಿ ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಅಧಿಕಾರ ವಹಿಸಿದ ಪ್ರಯುಕ್ತ ಗೌರವ ಸನ್ಮಾನ ಕಾರ್ಯಕ್ರಮದ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಕರೀಕಟ್ಟಿ ವಲಯದ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಪ್ರಕಾಶ ಫರೀಟ್ ಗುರ್ಲಹೊಸೂರಿನ ಸಮೂಹ ಸಂಪನ್ಮೂಲ ಕೇಂದ್ರ ಸಂಪನ್ಮೂಲ ವ್ಯಕ್ತಿಗಳಾದ ರಾಮಚಂದ್ರಪ್ಪ ಸವದತ್ತಿ ಉತ್ತರ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ರವಿ ನಲವಡೆ. ಉರ್ದು ಹಾಗೂ ಸವದತ್ತಿ ದಕ್ಷಿಣ ಸಮೂಹ ಸಂಪನ್ಮೂಲ ವ್ಯಕ್ತಿಗಳಾದಎಚ್.ಎಲ್.ನದಾಫ್. ಸಂಸ್ಕøತ ಶಿಕ್ಷಕರಾದ ಎಸ್.ಎಂ.ದೀಕ್ಷಿತ.ಸತೀಶ ಹಾನಗಲ್ ಮುಖ್ಯೋಪಾಧ್ಯಾಯರಾದ ಶ್ರೀಮತಿ ಎಲ್.ಎನ್.ಗಾಣಗೇರ ಗುರುಮಾತೆಯರಾದ ಆರ್.ಎಚ್.ನಾಗನೂರ.ಡಿ.ಪಿ.ಪತ್ತಾರ.ವ್ಹಿ.ವ್ಹಿ.ಸುಬೇದಾರ.ಜಿ.ಎಸ್.ಹೊಸಮನಿ.ಎಸ್.ಎಂ.ಮಲ್ಲೂರ ಮೊದಲಾದವರು ಉಪಸ್ಥಿತರಿದ್ದರು.ಈ ಗೌರವ ಸನ್ಮಾನವನ್ನು ಕರೀಕಟ್ಟಿ ಸವದತ್ತಿ ಉತ್ತರ ಮತ್ತು ಸವದತ್ತಿ ದಕ್ಷಿಣ ಸಮೂಹ ಸಂಪನ್ಮೂಲ ವ್ಯಕ್ತಿಗಳು ಹಾಗೂ ಶಾಲೆಯ ಗುರುವೃಂದದವರು ಮಾಡಿ ಗೌರವಿಸಿದರು.

- Advertisement -

ಸನ್ಮಾನ ಸ್ವೀಕರಿಸಿ ಮಾತನಾಡಿದ ಎಚ್.ಆರ್.ಪೆಟ್ಲೂರ “ ಶಿಕ್ಷಣ ಇಲಾಖೆಯ ಯಾವುದೇ ಸೌಲಭ್ಯಗಳನ್ನು ಕಾಯಾ ವಾಚಾ ಮನಸಾ ಶಿಕ್ಷಕರಿಗೆ ತಲುಪಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವೆನು.ಮುಂಬರುವ ದಿನಗಳಲ್ಲಿ ಶಿಕ್ಷಕರಿಗೆ ಅಂತರ್ಜಾಲ ತತ್ರಾಂಶವನ್ನು ಬಳಸಿಕೊಂಡು ಎಲ್ಲ ಸೌಲಭ್ಯಗಳು ಆ ತತ್ರಾಂಶದಲ್ಲಿ ಲಭ್ಯವಾಗುವ ರೀತಿಯಲ್ಲಿ ಅನುಕೂಲ ಮಾಡುವ ಕಾರ್ಯದಲ್ಲಿ ಪ್ರವೃತ್ತರಾಗಿದ್ದು ನನ್ನೆಲ್ಲ ಪದಾಧಿಕಾರಿಗಳ ಸಹಕಾರದೊಂದಿಗೆ ಆ ಕಾರ್ಯವನ್ನು ತಾಲೂಕಿನ ಎಲ್ಲ ಶಿಕ್ಷಕರಿಗೆ ಅನುಕೂಲವಾಗುವಂತೆ ಯೋಜನೆ ರೂಪಿಸಲಾಗಿದ್ದು ಇಷ್ಟರಲ್ಲೇ ಅದರ ಅನಾವರಣಗೊಳಿಸಲಾಗುವುದು” ಎಂದು ತಿಳಿಸಿದರು.

ಮುಖ್ಯೋಪಾಧ್ಯಾರಾದ ಶ್ರೀಮತಿ ಎಲ್.ಎನ್,ಗಾಣಿಗೇರ ಪ್ರಾಸ್ತಾವಿಕವಾಗಿ ಮಾತನಾಡುತ್ತ “ ನಮ್ಮ ಸಹೋದರ ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕನಾಗಿದ್ದು ನಮ್ಮೆಲ್ಲರ ಹೆಮ್ಮೆ.ಇವರಿಗೆ ದೇವರು ಆಯುರಾರೋಗ್ಯ ಕರುಣಿಸಲಿ.ಕಿರಿಯ ವಯಸ್ಸಿನಲ್ಲಿ ಈ ಜವಾಬ್ದಾರಿ ದೊರಕಿದ್ದು ನಮಗೆಲ್ಲ ಸಂತಸ ನಮ್ಮ ಶಾಲೆಯ ಹೆಮ್ಮೆ” ಎಂದು ನುಡಿದರು. ಕಾರ್ಯಕ್ರಮದ ಪ್ರಾರಂಭದಲ್ಲಿ ಎಸ್.ಎಂ.ದೀಕ್ಷಿತ್ ಸ್ವಾಗತಿಸಿದರು.ಶಿಕ್ಷಕ ಜಗದೀಶ ಗೋರಾಬಾಳ ಕಾರ್ಯಕ್ರಮ ನಿರೂಪಿಸಿದರು. ಗುರುಮಾತೆಯರಾದ ಆರ್.ಎಚ್.ನಾಗನೂರ ವಂದಿಸಿದರು.

- Advertisement -
- Advertisement -

Latest News

ಕುಡಿಯುವ ನೀರು ವ್ಯತ್ಯಯ ಆಗದಂತೆ ನೋಡಿಕೊಳ್ಳುವ ಭರವಸೆ ನೀಡಿದ ರುದ್ರೇಶ ಘಾಳೆ

ಬೆಳಗಾವಿ - ಕಾರ್ಮಿಕರು ತಮ್ಮ ಬೇಡಿಕೆಗಳನ್ನು ಈಡೇರಿಸಲು ನಡೆಸಿದ ಮುಷ್ಕರದಿಂದಾಗಿ ಬೆಳಗಾವಿ ಜನತೆಗೆ ಕುಡಿಯುವ ನೀರಿನ ವ್ಯವಸ್ಥೆಯಲ್ಲಿ ತೊಂದರೆ ಉಂಟಾಗಿದ್ದು ವಿಷಾದನೀಯವಾಗಿದೆ ವ್ಯವಸ್ಥೆಯನ್ನು ಸಂಪೂರ್ಣವಾಗಿ ಸರಿ...
- Advertisement -

More Articles Like This

- Advertisement -
close
error: Content is protected !!