spot_img
spot_img

ಭವ್ಯ ಭಾರತದ ನಿರ್ಮಾಣದ ಹೊಣೆ ಯುವ ಜನತೆಯ ಮೇಲಿದೆ- ಚಿಂತಕ ಗುಣ ಚಂದ್ರ ಕುಮಾರ ಜೈನ್

Must Read

spot_img

ಮೈಸೂರು – ಯುವ ಜನರು ಭವಿಷ್ಯದ ಪ್ರಜೆಗಳು. ಉತ್ತಮ ರಾಷ್ಟ್ರ ನಿರ್ಮಾಣ ಅವರ ಕರ್ತವ್ಯವಾಗಬೇಕು ಎಂದು ಚಿಂತಕ ಗುಣ ಚಂದ್ರ ಕುಮಾರ್ ಜೈನ್ ಕರೆನೀಡಿದರು.

ಮೈಸೂರು ಜಿಲ್ಲೆಯ ಸಾಲಿಗ್ರಾಮದ ಸರ್ಕಾರಿ ಬಾಲಕಿಯರ ಕಾಲೇಜಿನಲ್ಲಿ ಇಂದು ಬೆಳಿಗ್ಗೆ ಡಾ.ರಾಜ್ ಕುಮಾರ್ ವೇದಿಕೆ ಏರ್ಪಡಿಸಿದ್ದ ಡಾ.ರಾಜಕುಮಾರ್, ಪುನೀತ್ ರಾಜಕುಮಾರ್ , ಪಾರ್ವತಮ್ಮ ರಾಜಕುಮಾರ್ ನೆನಪಿನ ರಾಜ್ಯಮಟ್ಟದ ನವರತ್ನ ಪ್ರಶಸ್ತಿ ಹಾಗೂ ಶಿಕ್ಷಣ ರತ್ನ ಪ್ರಶಸ್ತಿಗಳ ಪ್ರದಾನ ಹಾಗೂ ಸ್ವರ್ಗೀಯ ನವರತ್ನಮ್ಮ ಹಾಗೂ ಬೊಮ್ಮರಸಯ್ಯ ನೆನಪಿನ ವಿದ್ಯಾರ್ಥಿ ಪುರಸ್ಕಾರ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ವಿದ್ಯಾರ್ಥಿ ಜೀವನದ ಒಂದು ಸೆಕೆಂಡನ್ನೂ ಸಹ ವ್ಯರ್ಥ ಮಾಡಬೇಡಿ. ಉತ್ತಮ ಶಿಕ್ಷಣ ಪಡೆಯಿರಿ.ಆತ್ಮ ವಿಶ್ವಾಸದೊಂದಿಗೆ ಮುನ್ನಡೆಯಿರಿ ಎಂದವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಸಾಲಿಗ್ರಾಮ ತಾಲ್ಲೂಕಿನ ಭೇರ್ಯ ಗ್ರಾಮದಲ್ಲಿ ಜನಿಸಿ ಕನ್ನಡ ನಾಡು-ನುಡಿ ಸೇವೆ, ಪರಿಸರ ಸಂರಕ್ಷಣೆ, ಸಾಮೂಹಿಕ ನೇತ್ರದಾನ, ಹಿರಿಯ ಕವಿಗಳ ನೆನಪಿನಲ್ಲಿ ಸಾಹಿತ್ಯೋತ್ಸವಗಳು, ಪುಸ್ತಕ ಪ್ರಕಟಣೆ, ಕನ್ನಡ ನಾಮಫಲಕ ಅಭಿಯಾನ.. ಮೊದಲಾದ ಕ್ಷೇತ್ರಗಳಲ್ಲಿ ಅಪರಿಮಿತ ಸೇವೆ ಸಲ್ಲಿಸಿರುವ ಡಾ.ಭೇರ್ಯ ರಾಮಕುಮಾರ್ ಅವರಿಗೆ ಸಂಸ್ಥೆಯು ಈ ಸಾಲಿನಿಂದ ಆರಂಭಿಸಿರುವ ರಾಜ್ಯ ಮಟ್ಟದ ನವರತ್ನ ಪ್ರಶಸ್ತಿಯನ್ನು ನೀಡಲು ಬಹಳ ಸಂತಸವಾಗುತ್ತಿದೆ. ಕನ್ನಡ ನಾಡು-ನುಡಿಗೆ ಅವರ ಸೇವೆ ಅಪಾರ. 1985 ರಿಂದ ಇಲ್ಲಿಯವರೆಗೆ 301. ಸಾಹಿತ್ಯ ಕಾರ್ಯಕ್ರಮಗಳು, ಎಂಟು ಸಾವಿರಕ್ಕೂ ಹೆಚ್ಚು ಜನರಿಂದ ಸಾಮೂಹಿಕ ನೇತ್ರದಾನಕ್ಕೆ ಒಪ್ಪಿಗೆ ಪತ್ರಕ್ಕೆ ಮನವೊಲಿಕೆ, ಪ್ರತಿ ಕಾರ್ಯಕ್ರಮದಲ್ಲೂ ಸಸಿಗಳ ಉಚಿತ ವಿತರಣೆ, ತಮ್ಮದೇ ಆದ ಪ್ರಗತಿಪರ ಪ್ರಕಾಶನದ ಮೂಲಕ ಮುನ್ನೂರು ಕೃತಿಗಳ ಪ್ರಕಟಣೆ, ಇತ್ತೀಚೆಗೆ ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರಾಗಿ ಕನ್ನಡ ನಾಮಫಲಕ ಅಭಿಯಾನ, ಹಿರಿಯ ಸಾಹಿತಿಗಳ ಜನ್ಮ ಸ್ಥಳದ ರಸ್ತೆಗಳು ಹಾಗೂ ವೃತ್ತಗಳಿಗೆ ಆ ಸಾಹಿತಿಗಳ ಹೆಸರು ನಾಮಕರಣಕ್ಕೆ ಒತ್ತಾಯ..ಹೀಗೆ ನಮ್ಮ ತಾಲ್ಲೂಕಿನ ಡಾ.ಭೇರ್ಯ ರಾಮಕುಮಾರ್ ಬಹುಮುಖ ಸೇವೆ ಮಾಡಿದ್ದಾರೆ. ಇದನ್ನು ಪರಿಗಣಿಸಿ ಇವರಿಗೆ ಮೊದಲನೆಯ ನವರತ್ನ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಗುಣ ಚಂದ್ರ ಕುಮಾರ್ ಜೈನ್ ಪ್ರಕಟಿಸಿದರು.

ನಂತರ ಸಾಹಿತಿಗಳಾದ ಡಾ.ಭೇರ್ಯ ರಾಮಕುಮಾರ್ ಅವರಿಗೆ ಡಾ.ರಾಜಕುಮಾರ್, ಪುನೀತ್ ರಾಜಕುಮಾರ್ ಹಾಗೂ ಶ್ರೀಮತಿ ಪಾರ್ವತಮ್ಮ ರಾಜಕುಮಾರ್ ನೆನಪಿನ ನವರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಇದೇ ಸಂದರ್ಭದಲ್ಲಿ ಸಾಲಿಗ್ರಾಮದ ಸರ್ಕಾರಿ ಬಾಲಕಿಯರ ಕಾಲೇಜಿನ ಪ್ರಿನ್ಸಿಪಾಲರಾದ ಎಂ.ಜಯರಾಂ, ಉಪನ್ಯಾಸಕರಾದ ರಾಜೇಶ್ .ಎನ್.ಆರ್. ಅವರಿಗೆ ಶಿಕ್ಷಣ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ವಿವಿಧ ಕಾಲೇಜುಗಳ ಸುಮಾರು ಮೂವತ್ತು ವಿದ್ಯಾರ್ಥಿನಿಯರಿಗೆ ಇದೇ ಸಂದರ್ಭದಲ್ಲಿ ಪ್ರತಿಭಾ ಪುರಸ್ಕಾರ ನೀಡಲಾಯಿತು.

ನಿವೃತ್ತ ಪ್ರಾಧ್ಯಾಪಕರಾದ ಪ್ರೊ. ಎಂ.ಕೆ.ಮೃತ್ಯುಂಜಯ ಅವರು ಮಾತನಾಡಿ ಡಾ.ರಾಜಕುಮಾರ್ ವೇದಿಕೆಯಿಂದ ಗ್ರಾಮೀಣ ಪ್ರತಿಭೆಗಳನ್ನು ಗುರ್ತಿಸಿ, ಗೌರವಿಸುತ್ತಿರುವುದು ಸಂತಸದ ವಿಷಯ ಎಂದು ನುಡಿದರು. ಹೆಣ್ಣುಮಕ್ಕಳು ಉತ್ತಮ ವಿದ್ಯೆ ಕಲಿಸಿ ಸ್ವಾವಲಂಬಿಗಳಾಗಬೇಕು. ತಮ್ಮ ತಂದೆ ತಾಯಿಯರಿಗೆ , ಹಿರಿಯರಿಗೆ ಗೌರವ ಕೊಡಬೇಕೆಂದವರು ಕಿವಿಮಾತು ನುಡಿದರು.

ಕನ್ನಡಪರ ಚಿಂತಕ ಡಾ.ಮಿರ್ಲೆ ವಿನಯ್ ಅವರು ಮಾತನಾಡಿ ಎಲ್ಲಾ ವಿದ್ಯಾರ್ಥಿನಿಯರೂ ಆಧುನಿಕ ಪ್ರಪಂಚಕ್ಕೆ ಅಗತ್ಯವಾದ ಶಿಕ್ಷಣ ಪಡೆಬೇಕು. ಕಂಪ್ಯೂಟರ್ ತಂತ್ರಜ್ಞಾನ, ಆಂಗ್ಲ ಭಾಷಾ ಕಲಿಕೆ, ನಾಯಕತ್ವದ ಗುಣ ಬೆಳೆಸಿಕೊಳ್ಳುವಿಕೆ, ಸ್ಪರ್ಧಾ ಜಗತ್ತಿನಲ್ಲಿ ಗೆಲ್ಲುವ ಛಲ ಬೆಳೆಸಿಕೊಳ್ಳಬೇಕು. ಆ ಮೂಲಕ ಜೀವನದಲ್ಲಿ ಉತ್ತಮ ಸ್ಥಾನ-ಮಾನ ಪಡೆಯಬೇಕು ಎಂದು ಕಿವಿಮಾತು ನುಡಿದರು.

ಹಿರಿಯ ಪತ್ರಕರ್ತರಾದ ಭಾಸ್ಕರ್, ಕೆ.ಟಿ.ಮೋಹನ್ ಕುಮಾರ್ ಅವರು ಮಾತನಾಡಿ ಜೀವನದಲ್ಲಿ ಪತ್ರಕರ್ತರಾಗಿ ತಾವು ಮಾಡಿದ ಸಾಧನೆಗಳನ್ನು ವಿವರಿಸಿದರು. ಸಮಾಜಸೇವಕ ಎನ್.ಪಿ.ನೇಮಿಚಂದ್ರ ಕುಮಾರ್ ಅವರು ಮಾತನಾಡಿ ಮೊಬೈಲ್ ಹಾವಳಿಗೆ ಬಲಿಯಾಗದೇ ಉತ್ತಮ ವ್ಯಾಸಂಗ ಮಾಡಿ ಬದುಕಿನಲ್ಲಿ ಸಾಧಕರಾಗಬೇಕೆಂದು ಕರೆ ನೀಡಿದರು.ಬ್ರಹ್ಮಕುಮಾರಿ ಆಸ್ರಮದ ಶಿಲ್ಪಾ ಸಹೋದರಿ ಮಾತನಾಡಿ ವಿದ್ಯಾರ್ಥಿನಿಯರು ಏಕಾಗ್ರತೆಯಿಂದ ತಮ್ಮ ವ್ಯಾಸಂಗದತ್ತ ಗಮನ ಹರಿಸಬೇಕೆಂದು ತಿಳಿಸಿದರು.

ತಮಗೆ ನೀಡಿದ ನವರತ್ನ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸಾಹಿತಿ ಡಾ.ಭೇರ್ಯ ರಾಮಕುಮಾರ್ ಅವರು, ಪರಿಸರ ವಿನಾಶದಿಂದಾಗಿ ನಮ್ಮ ವಿಶ್ವ ನಾಶದತ್ತ ಹೊರಟಿದೆ. ಎಲ್ಲೆಡೆ ಅತಿವೃಷ್ಟಿ, ಪ್ರವಾಹ, ಭೂಕುಸಿತಗಳುಂಟಾಗಿ ಮಾನವ ಕಷ್ಟ-ನಷ್ಟಕ್ಕ ಈಡಾಗುತ್ತಿದ್ದಾನೆ. ಕಾಡುಗಳ ವಿನಾಶದಿಂದ ಆನೆ, ಚಿರತೆ ಮೊದಲಾದ ವನ್ಯ ಪ್ರಾಣಿಗಳು ಆಹಾರ ಅರಸಿ ಗ್ರಾಮಗಳಿಗೆ ನುಗ್ಗುತ್ತಿವೆ .ಇದರಿಂದ ತೀವ್ರ ಸಾವು-ನೋವುಗಳುಂಟಾಗುತ್ತಿವೆ. ಅದೇ ರೀತಿ ಪರಿಸರ ವಿನಾಶದಿಂದ ಮಾನವ ಹೃದಯರೋಗಗಳು ಹಾಗೂ ಶ್ವಾಸಕೋಶದ. ಕ್ಯಾನ್ಸರ್ ಕಾಯಿಲೆಗಳಿಗೆ ಈಡಾಗುತ್ತಿದ್ದಾನೆ. ಆದ್ದರಿಂದ ಪರಿಸರ ಸಂರಕ್ಷಣೆ ಸರ್ಕಾರದ ಕರ್ತವ್ಯ ಎಂದು ನಾವು ತಿಳಿಯಬಾರದು. ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆಗೆ ಕೈಜೋಡಿಸಬೇಕು. ತಮ್ಮ , ತಮ್ಮ ತಂದೆ – ತಾಯಿಗಳ, ಹಿರಿಯರ ಜನ್ಮ ದಿನದಂದು, ವಿವಾಹ ವಾರ್ಷಿಕೋತ್ಸವದಂದು ಪ್ರತಿ ವರ್ಷವೂ ಸಸಿಗಳನ್ನು ನೆಡಬೇಕು. ಆ ಮೂಲಕ ಪರಿಸರ ಸಂರಕ್ಷಣೆಗೆ ಕಾರಣರಾಗಬೇಕು ಎಂದವರು ಕರೆ ನೀಡಿದರು. ಕಾಲೇಜಿನ ಪ್ರಿನ್ಸಿಪಾಲರಾದ ಎಂ.ಜಯರಾಂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಪ್ರಣತಿ ವೃಂದದವರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಸಮಾರಂಭದಲ್ಲಿ ಉಪನ್ಯಾಸಕರಾದ ಹರೀಶ್ ನಾಯಕ ಸ್ವಾಗತಿಸಿದರು. ಉಪನ್ಯಾಸಕಿ ಶ್ರೀಮತಿ ರೂಪಾ ಕಾರ್ಯಕ್ರಮ ನಿರ್ವಹಿಸಿದರು. ಉಪನ್ಯಾಸಕರಾದ ವಿಜಯಕುಮಾರ್ ವಂದಿಸಿದರು.

- Advertisement -
- Advertisement -

Latest News

ಪಂಚಮಸಾಲಿ ಸಮಾಜದ ಹೋರಾಟಕ್ಕೆ ಬೆಂಬಲ ಘೋಷಿಸಿದ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಕೂಡಲ ಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ಜೊತೆ ದೂರವಾಣಿ ಮೂಲಕ ಮಾತನಾಡಿ ಹೋರಾಟಕ್ಕೆ ಸಹಕಾರ ಘೋಷಣೆ ಮೂಡಲಗಿ: ಕೂಡಲಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ನೇತೃತ್ವದಲ್ಲಿ ಪಂಚಮಸಾಲಿ ಸಮಾಜಕ್ಕೆ...
- Advertisement -

More Articles Like This

- Advertisement -
close
error: Content is protected !!