ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ಸಮುದಾಯದ ಪಾತ್ರ ಅವಶ್ಯ

Must Read

ಮೂಡಲಗಿ : ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳು ಶೈಕ್ಷಣಿಕವಾಗಿ ಹಾಗೂ ಭೌತಿಕವಾಗಿ ಅಭಿವೃದ್ಧಿ ಆಗಬೇಕಾದರೆ ಸಮುದಾಯದ ಹಾಗೂ ಜನಪ್ರತಿನಿಧಿಗಳ ಪಾತ್ರ ಬಹಳ ಅವಶ್ಯ ಎಂದು ಬೆಳಗಾವ ಜಿಲ್ಲಾ ಪಂಚಾಯತ ಸಾಮಾಜಿಕ ಲೆಕ್ಕ ಪರಿಶೋಧನೆಯ ಜಿಲ್ಲಾ ವ್ಯವಸ್ಥಾಪಕ ಮನೋಜ ಬಂಡ್ರೊಳಿ ಹೇಳಿದರು.

ಅವರು ತುಕ್ಕಾನಟ್ಟಿಯ ಸರ್ಕಾರಿ ಮಾದರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಸಾಮಾಜಿಕ ಲೆಕ್ಕ ಪರಿಶೋದನಾ ಕಾರ್ಯಕ್ರಮದ ಕೊನೆಯ ದಿನದ ಪಾಲಕರ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

ಪ್ರತಿಯೊಂದು ಸರ್ಕಾರಿ ಶಾಲೆಯಲ್ಲಿ ಸರ್ಕಾರದ ಎಲ್ಲ ಯೋಜನೆಗಳು ಸಮರ್ಪಕವಾಗಿ ನಡೆದು ಇಲಾಖೆಯ ಉದ್ಧೇಶ ಸಾಕಾರಗೊಳ್ಳಬೇಕಲ್ಲದೇ ತುಕ್ಕಾನಟ್ಟಿ ಸರ್ಕಾರಿ ಶಾಲೆಯಲ್ಲಿ ಎಲ್ಲ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲಾಗಿದೆ ಎಂದರು.

ರಾಜ್ಯದ ಕೆಲವೆಡೆ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ ಆದರೆ ಇಲ್ಲಿ ತುಕ್ಕಾನಟ್ಟಿ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿರುವದಕ್ಕೆ ಇಲ್ಲಿ ಶಿಕ್ಷಕರ ಪಾಲಕರ ಕಾರ್ಯ ವೈಖರಿಯೇ ಕಾರಣ ಎಂದು ಹೇಳಿದರು.

ಈ ಸಂದರ್ಭದಲ್ಲಿ ಅರಬಾಂವಿ ಕ್ಷೇತ್ರದ ಶಾಸಕರ ನೆರವಿನಿಂದ ರಾಷ್ಟ್ರೀಯ ಗ್ರಾಮೀಣ ಹಾಗೂ ಸಾಕ್ಷರತಾ ಮಿಷನ್ ವತಿಯಿಂದ ೬ ರಿಂದ ೮ ನೇ ತರಗತಿಯ ಎಲ್ಲ ವಿದ್ಯಾರ್ಥಿಗಳಿಗೆ ನೀಡಿದ ಶಾಲಾ ಬ್ಯಾಗ್, ಸಮವಸ್ತ್ರ, ಸ್ವೆಟರ್‌ಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಿ ಮಾತನಾಡಿದ ಕಾಂಗ್ರೆಸ್ ಮುಖಂಡ ಭರಮಣ್ಣ ಉಪ್ಪಾರ ಅರಬಾಂವಿ ಕ್ಷೇತ್ರದ ಶಾಸಕರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಚಿಕ್ಕೋಡಿ ಸಂಸದರ ಸಹಕಾರ ನೆರವಿನಿಂದ ಮೂಡಲಗಿ ವಲಯದ ಎಲ್ಲ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ವಿತರಿಸಲಾಗುತ್ತಿರುವದರಿಂದ ವಿದ್ಯಾರ್ಥಿಗಳು ಮತ್ತು ಪಾಲಕರು ಇದರ ಉಪಯುಕ್ತತೆ ಪಡೆದುಕೊಳ್ಳಬೇಕೆಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಿವಾ ಪೌಂಡೇಶನ್‌ದ ಶಾನೂರ ಹಿರೇಹೊಳಿ ಶಾಲಾ ಅಭಿವೃದ್ಧಿಗೆ ತಾವು ಸಂಪೂರ್ಣ ಸಹಕಾರ ಕೊಡುವದಾಗಿ ಹೇಳಿದರು. ಗ್ರಾಮ ಪಂಚಾಯತ ಅದ್ಯಕ್ಷರಾದ ಗಾಯತ್ರಿ ಬಾಗೆವಾಡಿ ಹಾಗೂ ಉಪಾದ್ಯಕ್ಷರಾದ ಸುನಂದಾ ಭಜಂತ್ರಿ ಸಸಿಗೆ ನೀರೆರೆಯುವದರ ಮುಖಾಂತರ ಸಭೆಯನ್ನು ಉದ್ಘಾಟಿಸಿದರು.
ಸಭೆಯಲ್ಲಿ ಸಾಮಾಜಿಕ ಲೆಕ್ಕ ಪರಿಶೋಧನೆಯ ತಾಲೂಕಾ ವ್ಯವಸ್ಥಾಪಕರಾದ ಬಸವರಾಜ ಕುಂಬಾರ ಗ್ರಾಮ ಪಂಚಾಯತ ಸದಸ್ಯರಾದ ಸುಧಾಕರ ಗದಾಡಿ ಪ್ರಧಾನ ಗುರುಗಳಾದ ಎ.ವ್ಹಿ ಗಿರೆಣ್ಣವರ, ಕಲ್ಲೋಳಿ ಸಮೂಹ ಸಂಪನ್ಮೂಲ ವ್ಯಕ್ತಿ ಬಸವರಾಜ ಅಂಗಡಿ, ಶಿಕ್ಷಕರಾದ ವಿಮಲಾಕ್ಚಿ ತೋರಗಲ್, ಲಕ್ಷ್ಮಿ ಹೆಬ್ಬಾಳ, ಪುಷ್ಪಾ ಭರಮದೆ, ರೂಪಾ ಹೂಲಿಕಟ್ಟಿ, ಪ್ರಿಯಾಂಕಾ ಡಿ.ಕೆ. ಸುಜಾತಾ ಕೋಳಿ, ವಾಸಂತಿ ಬೋರಗುಂಡಿ, ಮಹಾದೇವ ಗೋಮಾಡಿ, ಬಸವರಾಜ ನಾಯಿಕ, ಸೋಮಶೇಖರ ವಾಯ್.ಆರ್. ಚನ್ನಬಸಪ್ಪ ಸೀರಿ, ಅತಿಥಿ ಶಿಕ್ಷಕರಾದ ಹೊಳೆಪ್ಪಾ ಗದಾಡಿ, ಶಿವಲೀಲಾ ಹಣಮಣ್ಣವರ, ಖಾತೂನ್ ನದಾಫ, ಅಣ್ಣಪೂರ್ಣಾ ಹುಲಕುಂದ, ಯಮುನಾ ಹಮ್ಮನವರ, ಪವಿತ್ರಾ ಬಡಿಗೇರ ಉಪಸ್ಥಿತರಿದ್ದರು.

ಸಭೆೆಯಲ್ಲಿ ನೂರಾರು ಪಾಲಕರು ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಶಿಕ್ಷಕ ಎಮ್.ಡಿ ಗೋಮಾಡಿ ನಿರೂಪಿಸಿ ವಂದಿಸಿದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group