ಮೂಡಲಗಿ: ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದಿಂದ ಕರ್ನಾಟಕಕ್ಕೆ ಕಳೆದ 5 ವರ್ಷಗಳಲ್ಲಿ ಎಸ್.ಸಿ ಗಳ ಸಾಮಾಜಿಕ ಉನ್ನತಿಗಾಗಿ ವಿವಿಧ ಯೋಜನೆಗಳ ಅಡಿಯಲ್ಲಿ ರೂ. 1690.72 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ಎ ನಾರಾಯಣಸ್ವಾಮಿ ರಾಜ್ಯಸಭೆಯಲ್ಲಿ ಲಿಖಿತ ಉತ್ತರದಲ್ಲಿ ಈ ಮಾಹಿತಿ ನೀಡಿದ್ದಾರೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.
ರಾಜ್ಯಸಭೆಯ ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಬಾಬು ಜಗಜೀವನ ರಾಮ್ ಛತ್ರವಾಸ್ ಯೋಜನೆಯಡಿ ಹಾಸ್ಟೆಲ್ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು ಪ್ರಧಾನ ಮಂತ್ರಿ ಅನುಸೂಚಿತ ಜಾತಿ ಅಭ್ಯುದಯ ಯೋಜನೆ ಅಡಿಯಲ್ಲಿ 2018 ರಿಂದ, ಪ್ರಧಾನ ಮಂತ್ರಿ ಅನುಸೂಚಿತ ಜಾತಿ ಅಭ್ಯುದಯ ಯೋಜನೆ (PM-AJAY) ನ ಹಾಸ್ಟೆಲ್ ಕಾಂಪೋನೆಂಟ್ ಬಾಬು ಜಗಜೀವನ್ ರಾಮ್ ಛತ್ರವಾಸ್ ಯೋಜನೆಯ ಹಿಂದಿನ ಯೋಜನೆ ಅಡಿಯಲ್ಲಿ 81 ಹಾಸ್ಟೆಲ್‍ಗಳ ನಿರ್ಮಾಣಕ್ಕೆ ಹಣಕಾಸಿನ ನೆರವು ನೀಡಲಾಗಿದೆ.
2007-08 ರಿಂದ, ಪ್ರಧಾನ್‍ನ ಹಾಸ್ಟೆಲ್ ಘಟಕ ಬಾಬು ಜಗಜೀವನ್ ರಾಮ್ ಛತ್ರವಾಸ್ ಯೋಜನೆಯ ಹಿಂದಿನ ಯೋಜನೆ ಅಡಿಯಲ್ಲಿ 42 ಹಾಸ್ಟೆಲ್‍ಗಳ 17 ಬಾಲಕಿಯರ ಹಾಸ್ಟೆಲ್‍ಗಳು ಮತ್ತು 25 ಬಾಲಕರ ಹಾಸ್ಟೆಲ್‍ಗಳ ನಿರ್ಮಾಣಕ್ಕಾಗಿ ಸಚಿವಾಲಯವು ಕರ್ನಾಟಕ ರಾಜ್ಯಕ್ಕೆ ಹಣಕಾಸಿನ ನೆರವು ನೀಡಲಾಗಿದೆ ಎಂದು ಸಚಿವರು ಉತ್ತರಿಸಿದ್ದಾರೆ ಎಂದು ಸಂಸದ ಈರಣ್ಣ ಕಡಾಡಿ ತಿಳಿಸಿದ್ದಾರೆ.