spot_img
spot_img

Sindagi: ರೂ. 19 ಲಕ್ಷ ವೆಚ್ಚದಲ್ಲಿ ಸಿಸಿ ಚರಂಡಿ ಹಾಗೂ ಡಾಂಬರೀಕರಣ ರಸ್ತೆ ಕಾಮಗಾರಿಗೆ ಚಾಲನೆ

Must Read

spot_img
- Advertisement -

ಸಿಂದಗಿ: ಜನಪ್ರತಿನಿಧಿಯಾದವರು ಜನರ ಬಗ್ಗೆ ಊರಿನ ಬಗ್ಗೆ ಬಹಳಷ್ಟು ಕಳಕಳಿ ಬೇಕು ಬರೀ ಪ್ರಚಾರಕ್ಕಾಗಿ ಒಂದು ಪೋಟೋ ತೆಗೆಸಿಕೊಂಡು ಪ್ರಚಾರ ಗಿಟ್ಟಿಸಿಕೊಂಡರೆ ಸಾಲದು ನಾವು ಮಾಡಿದಂಥ ಕೆಲಸಗಳು  ಪ್ರಚಾರವಾಗಬೇಕು ಎನ್ನುವ ಧೋರಣೆ ಹೊಂದಿದ್ದಾಗ ಮಾತ್ರ ಜನಪ್ರತಿನಿಧಿಯಾಗಲು ಸಾಧ್ಯ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.

ಪಟ್ಟಣದ ಶಿವಶಂಕರ ಬಡಾವಣೆಯಲ್ಲಿ ನಗರೋತ್ಥಾನ ಹಂತ 4ರ ಪ್ಯಾಕೇಜ್ 1 ಮತ್ತು 2ರ ಅಡಿಯಲ್ಲಿ ಕಿಣಗಿಯವರ ಮನೆಯಿಂದ ಲಾಳಸಂಗಿ ಮನೆಯವರೆಗೆ ರೂ. 19 ಲಕ್ಷ ವೆಚ್ಚದಲ್ಲಿ ಸಿಸಿ ಚರಂಡಿ ಹಾಗೂ ಡಾಂಬರೀಕರಣ ರಸ್ತೆ ಕಾಮಗಾರಿಗೆ ಪೂಜೆ ನೆರವೇರಿಸಿ ಮಾತನಾಡಿ, ಜನರಿಗೆ ಬೇಕಾಗಿರುವುದು ಅಚ್ಚುಕಟ್ಟು ರಸ್ತೆ ಮತ್ತು ಶುದ್ಧ ಕುಡಿಯುವ ನೀರು, ವಿದ್ಯುತ್ ದೀಪ ಇವುಗಳನ್ನು ಹೊರತು ಪಡಿಸಿದರೆ ಇನ್ನೇನೂ ಕೇಳಲಾರರು ಅವರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಬೇಕು ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಕಾರ್ಯಗಳನ್ನು ಮಾಡಿದರೆ ಜನಪ್ರತಿನಿಧಿ ಅನ್ನಿಸಿಕೊಳ್ಳಲು ಸಾಧ್ಯ ಈ ಕಾಮಗಾರಿಯ ಗುತ್ತಿಗೆದಾರರು ಬಹಳಷ್ಟು ಅಚ್ಚುಕಟ್ಟುತನದಿಂದ ರಸ್ತೆ ಕಾಮಗಾರಿ ಮಾಡಬೇಕು ಅಲ್ಲದೆ ಸಾರ್ವಜನಿಕರು ಕೂಡಾ ಅವರಿಗೆ ಸಹಕರಿಸಬೇಕು ಎಂದು ಮನವಿ ಮಾಡಿಕೊಂಡರು.

ಪುರಸಭೆ ಸದಸ್ಯ ಬಸವರಾಜ ಯರನಾಳ ಮಾತನಾಡಿ, ಕಳೆದ 2018ರಲ್ಲಿ ದಿ. ಎಂ.ಸಿ.ಮನಗೂಳಿ ಅವರು ಸಚಿವರಿದ್ದಾಗ ಅಭಿವೃದ್ಧಿ ಪ್ರಾರಂಭ ಮಾಡಿದ್ದರು ಅವರ ನಿಧನಾನಂತರ 2 ವರ್ಷಗಳಿಂದ ಅಭಿವೃದ್ದಿ ಮರೀಚಿಕೆಯಾಗಿತ್ತು ನೆನೆಗುದಿಗೆ ಬಿದ್ದಿದ್ದ ಕಾಮಗಾರಿಗಳು ಮರು ಪ್ರಾರಂಭವಾಗುತ್ತಿದ್ದು ಈಗ ಅಭಿವೃದ್ಧಿ ಪರ್ವ ಪ್ರಾರಂಭವಾಗಿದೆ ಆಡಳಿತ ಚುರುಕುಗೊಳಿಸಿದ್ದಾರೆ ಎಂದರು.

- Advertisement -

ಪುರಸಭೆ ಸದಸ್ಯ ಹಣಮಂತ ಸುಣಗಾರ ಮಾತನಾಡಿ, ಶಾಸಕರು ಹೆಚ್ಚಿನ ಅನುದಾನ ತಂದು ಶಿವಶಂಕರ ಬಡಾವಣೆಯನ್ನು ಇನ್ನಷ್ಟು ಅಭಿವೃದ್ಧಿ ಪಡಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಹಾಸೀಂ ಆಳಂದ, ಮುಖಂಡರಾದ ಡಾ. ರಾಜಶೇಖರ ಸಂಗಮ, ಇಬ್ರಾಹಿಂ ನಾಟೀಕಾರ,  ರಾಜು ಖೇಡ, ಬಾಬು ಮರ್ತುರ, ಗೌಶೀಯಾ ನಾಟೀಕಾರ, ಭೀಮನಗೌಡ ಬಿರಾದಾರ, ಮಹೇಶ ಮನಗೂಳಿ, ಬಸು ಕಾಂಬಳೆ, ಈರಣ್ಣ ಗಡ್ಡಿ, ಪ್ರಸನ್ನ ಜೇರಟಗಿ, ಪರಶುರಾಮ ಯಂಪೂರೆ, ಶಾಂತೂ ರಾಣಾಗೋಳ, ಪುರಸಭೆ ಮುಖ್ಯಾಧಿಕಾರಿ ಜಾಧವ, ಜೆಇ ಎ.ಜೆ.ನಾಟೀಕಾರ ಸೇರಿದಂತೆ ಹಲವರು ಇದ್ದರು.

- Advertisement -
- Advertisement -

Latest News

ಯೋಗ ಸ್ಪರ್ಧಾ ವಿಜೇತರಿಗೆ ಕಡಾಡಿ ಸನ್ಮಾನ

ಮೂಡಲಗಿ: ಗ್ರಾಮೀಣ ಪ್ರದೇಶದ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಯೋಗದಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ ಇಂತಹ ಪ್ರತಿಭೆಗಳು ಬೆಳಕಿಗೆ ಬಂದು ನಾಡಿನ...
- Advertisement -

More Articles Like This

- Advertisement -
close
error: Content is protected !!
Join WhatsApp Group