spot_img
spot_img

ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳನ್ನು ಸಮಾಜಮುಖಿಯಾಗಿಸುತ್ತದೆ – ಶಾಸಕ ಮನಗೂಳಿ

Must Read

spot_img
- Advertisement -

ಸಿಂದಗಿ –ರಾಷ್ಟ್ರೀಯ ಸೇವಾ ಯೋಜನೆಯು ವಿದ್ಯಾರ್ಥಿಗಳನ್ನು ಸಮಾಜಮುಖಿಯನ್ನಾಗಿ ಮಾಡುತ್ತದೆ. ಇದು ವಿದ್ಯಾರ್ಥಿಗಳ ವ್ಯಕ್ತಿತ್ವದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.

ಅವರು ತಾಲೂಕಿನ ರಾಂಪುರ ಗ್ರಾಮದಲ್ಲಿ ಸಿಂದಗಿಯ ಎಚ್. ಜಿ.ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಅಡಿಯಲ್ಲಿ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಎನ್ಎಸ್ಎಸ್ ಶಿಬಿರವನ್ನು ಗ್ರಾಮೀಣ ಪ್ರದೇಶದಲ್ಲಿ ಆಯೋಜನೆ ಮಾಡಿದ್ದು ಅತ್ಯಂತ ಸಂತಸ ತಂದಿದೆ. ಗ್ರಾಮಗಳಲ್ಲಿ ಮತ್ತು ಗ್ರಾಮದ ಜನತೆಗೆ ಸ್ವಚ್ಛತೆ, ಪರಿಸರ ಮತ್ತು ಸಾಮಾಜಿಕ ಕಳಕಳಿಯ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಕಾರ್ಯ. ಶಿಬಿರದಲ್ಲಿ ಅತ್ಯಂತ ಪ್ರಾಮಾಣಿಕವಾಗಿ ಸಾಮಾಜಿಕ ಕಳಕಳಿಯನ್ನು ಇಟ್ಟುಕೊಂಡು ಸೇವೆ ಮಾಡಬೇಕು ಎಂದರು.

- Advertisement -

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಹಾ ವಿದ್ಯಾಲಯದ ಪ್ರಾಚಾರ್ಯ ಎ. ಆರ್. ಹೆಗ್ಗನದೊಡ್ಡಿ ಅವರು ಮಾತನಾಡಿ, ಇದೊಂದು ಸಾಮಾಜಿಕ ಕಳಕಳಿಯ ಕಾರ್ಯಕ್ರಮ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡು ತಮ್ಮ ವ್ಯಕ್ತಿತ್ವ ವಿಕಸನವನ್ನ ಮಾಡಿಕೊಳ್ಳಬೇಕು. ಸ್ವಯಂ ಸೇವಕರು ತಮ್ಮ ತಮ್ಮ ತಂಡಗಳಿಗೆ ನೀಡಿದ ಜವಬ್ದಾರಿಯನ್ನು ಹೊಂದಾಣಿಕೆಯಿಂದ ನಿರ್ವಹಿಸಿ ಶ್ರಮದಾನದ ಆದಿಯಾಗಿ ಇತರ ಕರ್ತವ್ಯವನ್ನು ನಿರ್ವಹಿಸುವುದಲ್ಲದೆ ವಿವಿಧ ಸ್ಪರ್ಧೆಗಳಲ್ಲಿ ಕ್ರೀಯಾಶೀಲರಾಗಿ ಭಾಗವಹಿಸಬೇಕು ಎಂದರು.

ಕಾರ್ಯಕ್ರಮದ ಸಾನ್ನಿಧ್ಯವನ್ನು ರಾಂಪುರ ಗ್ರಾಮದ ಆರೂಢ ಮಠದ ಪೂಜ್ಯಶ್ರೀ ನಿತ್ಯಾನಂದ ಮಹಾರಾಜರು ವಹಿಸಿದ್ದರು.ಶಿಬಿರದ ಸಂಯೋಜನಾಧಿಕಾರಿ ಡಾ. ಎಸ್. ಎಸ್. ಚವಾಣ ಪ್ರಾಸ್ತಾವಿಕವಾಗಿ ಮಾತನಾಡಿದರು.

ವೇದಿಕೆ ಮೇಲೆ ಗ್ರಾಮ ಪಂಚಾಯತಿ ಅಧ್ಯಕ್ಷೆ ನೂರಜಾನ ನದಾಫ, ಶಾಲೆಯ ಮುಖ್ಯ ಗುರುಮಾತೆ ಎನ್.ಆರ್. ಅತ್ತಾರ, ಐ. ಬಿ.ಬಂಕಲಗಿ, ಜೆ. ಪಿ. ಪಾಟೀಲ, ಷಣ್ಮುಖಯ್ಯ ಹಿರೇಮಠ ಸೇರಿದಂತೆ ಇತರರು ವೇದಿಕೆ ಮೇಲಿದ್ದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಬಿ. ಎಸ್.ಬಿರಾದಾರ, ಎಸ್. ಎ. ಪಾಟೀಲ, ಆರ್. ಬಿ. ಹೊಸಮನಿ, ಎಮ್. ಎನ್. ಅಜ್ಜಪ್ಪ, ಎಸ್. ಪಿ. ಬಿರಾದಾರ, ಎಫ್. ಎ. ಹಾಲಪ್ಪನವರ, ಎಮ್. ಸಿ. ಕತ್ತಿ, ಎ. ಆರ್. ಸಿಂದಗಿಕರ, ಎ. ಬಿ. ಪಾಟೀಲ, ಎಸ್. ಎ. ಬಸರಕೋಡ, ಜಿ. ಎಸ್. ಪವಾರ ಸೇರಿದಂತೆ ಶಿಬಿರದ ಶಿಬಿರಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಉಪನ್ಯಾಸಕ ಸಿದ್ದಲಿಂಗ ಕಿಣಿಗಿ ನಿರೂಪಿಸಿ ವಂದಿಸಿದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಸ್ವಾಭಿಮಾನ ಬದುಕು ಕಟ್ಟಿಕೊಳ್ಳಲು ಮುಂದಾಗಿ – ಮಾಜಿ ಮುಖ್ಯಮಂತ್ರಿ ಈಶ್ವರಪ್ಪ

ಸಿಂದಗಿ : ಹಾಲುಮತಸ್ಥರು ಜಾಗ್ರತರಾಗಿ ಸ್ವಾಭಿಮಾನ ಬದುಕು ಕಟ್ಟಿಕೊಳ್ಳಲು ಮುಂದಾಗಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಕೆ ಎಸ್ ಈಶ್ವರಪ ಹೇಳಿದರು. ಪಟ್ಟಣದ ಕಿತ್ತೂರ ರಾಣಿ ಚನ್ನಮ್ಮ ವೃತ್ತದ...
- Advertisement -

More Articles Like This

- Advertisement -
close
error: Content is protected !!
Join WhatsApp Group