ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಗ್ರಾಮ ಆಡಳಿತ ಅಧಿಕಾರಿಗಳಿಂದ ಮುಷ್ಕರ

Must Read

ಮೂಡಲಗಿ: ಗ್ರಾಮ ಆಡಳಿತ ಅಧಿಕಾರಿಗಳ ಸಮಸ್ಯೆಗಳು ಮತ್ತು ವಿವಿಧ ಬೇಡಿಕೆಗಳ ಈಡೇರಕೆಗಾಗಿ ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಮೂಡಲಗಿ ತಾಲೂಕಾ ಘಟಕದ ಪದಾಧಿಕಾರಿಗಳು ಪಟ್ಟಣದ ತಹಶೀಲ್ದಾರ ಕಛೇರಿ ಆವರಣದಲ್ಲಿ ಸೋಮವಾರ ಎರಡನೇ ಹಂತದ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಿದರು.

ಈ ಸಮಯದಲ್ಲಿ ಗ್ರಾಮ ಆಡಳಿತ ಅಧಿಕಾರಿಗಳ ಮೂಡಲಗಿ ತಾಲೂಕಾ ಅಧ್ಯಕ್ಷ ಎಂ. ಬಿ. ಶೀಗಿಹೊಳಿ ಮಾತನಾಡಿ, ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದ ವತಿಯಿಂದ ಸಪ್ಟಂಬರ ೨೦೨೪ ರಲ್ಲಿ ನಡೆಸಿದ ಮುಷ್ಕರ ಸಂಧರ್ಭದಲ್ಲಿ ಭರವಸೆ ನೀಡಿದ ಬೇಡಿಕೆಗಳನ್ನು ಈಡೇರಿಸದಿರುವದರಿಂದ ಸರಕಾರ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಅನಿರ್ಧಿಷ್ಟಾವಧಿ ಮುಷ್ಕರ ನಡೆಸುತ್ತಿರುವುದಾಗಿ ಹೇಳಿದರು.

ಈ ಸಮಯದಲ್ಲಿ ಸಂಘಟನೆ ಉಪಾಧ್ಯಕ್ಷೆ ಭಾರತಿ ಕಾಳಿ, ಗೌರವಾಧ್ಯಕ್ಷ ಎ. ಎಸ್. ಲಾಡಖಾನ, ಪ್ರಧಾನ ಕಾರ್ಯದರ್ಶಿ ಎಸ್. ಎನ್. ಕೊಣ್ಣೂರ, ಖಜಾಂಚಿ ಎಫ್. ಎಚ್. ಫತ್ತೆಖಾನ, ನಿರ್ದೇಶಕರಾದ ಎಸ್. ಬಿ. ತುಪ್ಪದ, ಎಚ್. ಎಲ್. ಬೆಳ್ಳಿಕೇರಿ, ಎಂ. ಎಚ್. ಹೊಳ್ಕರ, ಎಂ. ಎ. ಮುಲ್ಲಾ, ಜಿ. ಬಿ. ಮುತ್ತೆಪ್ಪಗೋಳ, ಕೆ. ಆರ್. ಭಾಸಗಿ, ಕರಿಷ್ಮಾ ನದಾಫ್, ಸುರೇಖಾ ಈರಕರ ಮತ್ತು ಕೇದಾರಿ ಭಸ್ಮೆ, ಎ.ಎಸ್.ಬಾಗವಾನ ಮತ್ತಿತರರು ಮುಷ್ಕರದಲ್ಲಿ ಭಾಗವಹಿಸಿದರು.

ದಲಿತ ಸಂಘಟನೆಯಿಂದ ಬೆಂಬಲ: ಗ್ರಾಮ ಆಡಳಿತ ಅಧಿಕಾರಿಗಳು ನಡೆಸುತ್ತಿರುವ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ತಾಲೂಕಿನ ದಲಿತ ಸಂಘಟನೆಯ ಮುಖಂಡರಾದ ಸತ್ಯೆಪ್ಪ ಕರವಾಡಿ, ರಮೇಶ ಮಾದರ, ಎಬಿನೇಜರ್ ಕರಬನ್ನವರ, ಪ್ರಭಾಕರ ಮಂಟೂರ ಮತ್ತಿತರರು ಭಾಘವಹಿಸಿ ಬೆಂಬಲ ಸೂಚಿಸಿದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group