ಬೆಳಗಾವಿ – ಜಿಲ್ಲಾ ಪಂಚಾಯತ ಬೆಳಗಾವಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಚಿಕ್ಕೋಡಿ ವಿಭಾಗ ಇವರ ಸಹಯೋಗದಲ್ಲಿ ದಿನಾಂಕ 10 ರಂದು ಜಲ ಜೀವನ್ ಮಿಷನ್ ಯೋಜನೆಯಡಿಯಲ್ಲಿ ನಿಪ್ಪಾಣಿ ತಾಲೂಕಾ ಪಂಚಾಯತಿಯಲ್ಲಿ ನೀರು ಮತ್ತು ನೈರ್ಮಲ್ಯ ಸಮಿತಿ ಸದಸ್ಯರಿಗೆ , ವಾಟರ್ ಮೆನ್, ಪಂಚಾಯ್ತಿಯ ಅಭಿವೃಧ್ದಿ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರ, ಅಂಗನವಾಡಿ ಕಾರ್ಯಕರ್ತೆಯರು, FTK Kit , ನೀರಿನ ಗುಣಮಟ್ಟ ಪರೀಕ್ಷೆ ಯ ಬಗ್ಗೆ ತರಬೇತಿ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.
ಕಾರ್ಯನಿರ್ವಾಹಕ ಅಭಿಯಂತರಾದ ಪಾಂಡುರಂಗರಾವ್ ಮಾತನಾಡಿ, ಜೆ.ಜೆ.ಯಂ. ಯೋಜನೆಯ ಉದ್ದೇಶಗಳು, ನೀರಿನ ಗುಣಮಟ್ಟ ಪರೀಕ್ಷೆ ಮಾಡುವ ಅಗತ್ಯತೆ ಬಗ್ಗೆ , ನೀರಿನ ಮಿತ ಬಳಕೆ ಬಗ್ಗೆ ಹಾಗೂ ಸಮುದಾಯದ ಪಾಲ್ಗೊಳ್ಳುವಿಕೆ, ನೀರು ಮತ್ತು ನೈರ್ಮಲ್ಯ ಸಮಿತಿ ಸದಸ್ಯರಿಗೆ , ವಾಟರ್ ಮೆನ್, ಆಶಾ ಕಾರ್ಯಕರ್ತೆಯರ, ಅಂಗನವಾಡಿ ಕಾರ್ಯಕರ್ತೆಯರು, FTK Kit ಮೂಲಕ ನೀರಿನ ಗುಣಮಟ್ಟ ಪರೀಕ್ಷೆ ಯ ತರಬೇತಿ ಪಡೆದುಕೊಂಡು ತಮ್ಮ ತಮ್ಮ ಗ್ರಾಮ ಪಂಚಾಯತಯಲ್ಲಿ, FTK Kit ಮೂಲಕ ನೀರಿನ ಗುಣಮಟ್ಟ ಪರೀಕ್ಷೆ ಮಾಡಬೇಕು ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ತಾಲೂಕು ಪಂಚಾಯತ್ ನಿಪ್ಪಾಣಿ ಸಹಾಯಕ ನಿರ್ದೇಶಕರು ಚಂದ್ರಕಾಂತ ಆರ್ ನಂದಗಾವೆ, ಜಿಲ್ಲಾ ಯೋಜನಾ ವ್ಯವಸ್ಥಾಪಕರು ದೀಪಕ್.ಕೆ, ಪ್ರಯೋಗಾಲಯ ತಜ್ಞರಾದ ಮಹಾಂತೇಶ ಅಂಬಿ, ಪಂಚಾಯ್ತಿಯ ಅಭಿವೃದ್ಧಿ ಅಧಿಕಾರಿಗಳು, ನೀರು ನೈರ್ಮಲ್ಯ ಸಮಿತಿಯ ಸದ್ಯಸ್ಯರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.