ದೇಶದಲ್ಲಿ ಶಾಂತಿ ಸಮಾನತೆ ಸಾರಿದ ಸಂತ ಕನಕದಾಸರು- ಕಾಂಗ್ರೆಸ್ ಮುಖಂಡ ಮನಗೂಳಿ

Must Read

ಸಿಂದಗಿ: ಹಾಲುಮತ ಸಮಾಜ ಹಾಲಿನಷ್ಟೇ ಪವಿತ್ರವಾದದ್ದು ಈ ಸಮಾಜದಲ್ಲಿ ಜನಿಸಿದ ಸಂತ ಶ್ರೇಷ್ಠ  ಕನಕದಾಸರ ಸಾಹಿತ್ಯ ಕೀರ್ತನೆಗಳು ದೇಶಕ್ಕೆ ಮಾದರಿಯಾಗಿವೆ ಎಂದು ಕಾಂಗ್ರೆಸ್ ಮುಖಂಡ ಅಶೋಕ ಮನಗೂಳಿ ಹೇಳಿದರು.

ತಾಲೂಕಿನ ಮೋರಟಗಿ ಗ್ರಾಮದಲ್ಲಿ ಹಮ್ಮಿಕೊಂಡ ಕನಕದಾಸರ 535 ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅಧ್ಯಕ್ಷ  ಸ್ಥಾನ ವಹಿಸಿಕೊಂಡು ಜ್ಯೋತಿ ಬೆಳಗಿಸಿ ಅವರು ಮಾತನಾಡಿ, ದೇಶದಲ್ಲಿ ನಡೆಯುವ ಗಲಭೆಗಳನ್ನು ನಿಲ್ಲಿಸುವ ನಿಟ್ಟಿನಲ್ಲಿ ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆ ಏನಾದರು ಬಲ್ಲಿರಾ ಎನ್ನುವ ಕೀರ್ತನೆಯನ್ನು ಜಪಿಸುತ್ತ ದೇಶದಲ್ಲಿ ಶಾಂತಿ ಸಮಾನತೆ  ಸಾರಿದ ಕೀರ್ತಿ ಸಂತ ಶ್ರೇಷ್ಠ ಕನಕರಿಗೆ ಸಲ್ಲುತ್ತದೆ ಎಂದರು.

ಹಿರಿಯರಾದ ಮೈಹಿಬೂಬಸಾಬ ಕಣ್ಣಿ ಮಾತನಾಡಿ, ಹಾಲುಮತದವರು ನಂಬಿಗಸ್ತರು ವಿಷ ಕೊಟ್ಟರೂ ಅದನ್ನು ಹಾಲಾಗಿ ಸ್ವೀಕರಿಸಿ  ಸೇವಿಸಿ ಸಹಿಸಿಕೊಳ್ಳುವ ಶಕ್ತಿವಂತರು ಸದ್ಯದ ಪರಿಸ್ಥಿತಿಯಲ್ಲಿ  ಹಾಲುಮತ ಸಮಾಜ ಇನ್ನೂ ಮುಖ್ಯವಾಹಿನಿಗೆ ಬರುವುದು ಅವಶ್ಯಕವಿದೆ ಈ ನಿಟ್ಟಿನಲ್ಲಿ ತಾವೆಲ್ಲರೂ ರಾಜಕೀಯವಾಗಿ ಆರ್ಥಿಕವಾಗಿ ಸಾಮಾಜಿಕವಾಗಿ ಮುಂದೆ ಬರಲು ತಮ್ಮ ಮಕ್ಕಳಿಗೆ ಶಿಕ್ಷಣ ನೀಡಬೇಕು ಎಂದು ಹೇಳಿದರು.

ಕಾರ್ಯಕ್ರಮದ ಮುನ್ನ  ಜೇವರ್ಗಿ ಶಾಸಕ ಡಾ, ಅಜಯಸಿಂಗ ಮಧ್ಯಾಹ್ನ 12 ಘಂಟೆಗೆ  ಕನಕದಾಸರ ರಥಕ್ಕೆ ಚಾಲನೆ ನೀಡಿದರು 101 ಕುಂಭ ಮೇಳ, ಡೊಳ್ಳಿನ ಕುಣಿತ, ಕುದುರೆ ಕುಣಿತ, ಸಕಲ ವಾದ್ಯದೊಂದಿಗೆ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಸಂಚರಿಸುವ ಮೂಲಕ ಕನಕದಾಸರ ಭವ್ಯ  ಮೆರವಣಿಗೆ ಮಾಡಲಾಯಿತು ರಾತ್ರಿ 10 ಘಂಟೆಗೆ ಶ್ರೀ ಭಾಗ್ಯವಂತಿ ಕಲಾ ನಾಟ್ಯ ಸಂಘದಿಂದ   “ಹಳ್ಳಿ ಹುಡಗಿ ಮೊಸರು ಗಡಗಿ” ಅರ್ಥಾತ್ ಕೈಲಾಗದ ಗಂಡ ಕೈಲಾಸ ಕಂಡ ಎನ್ನುವ  ಸಾಮಾಜಿಕ ನಾಟಕ ಜರುಗಿತು.

ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಗೋಳಸಾರ ಅಭಿನವ ಪುಂಡಲಿಂಗ ಮಹಾಶಿವಯೋಗಿಗಳು ಯಂಕಂಚಿ ಕುಂಟೋಜಿ ಮಠ ಅಭಿನವ ರುದ್ರಮುನಿ ಶಿವಾಚಾರ್ಯರು ವಹಿಸಿದ್ದರು, ಶ್ರೀ ಬಿಳಿಯಾನಿಸಿದ್ದ ಒಡಿಯರ, ಮಾಜಿ ಜಿ, ಪಂ, ಸದಸ್ಯ ಎನ್ ಆರ್ ತಿವಾರಿ, ಸಿಂದಗಿ ಕಸಾಪ ಅಧ್ಯಕ್ಷ ರಾಜಶೇಖರ ಕೂಚಬಾಳ, ಪುರಸಭೆ ಉಪಾಧ್ಯಕ್ಷ ಹಾಸಿಮ್ ಆಳಂದ ಗ್ರಾ, ಪಂ, ಅಧ್ಯಕ್ಷ ಅಮೋಘಿ ಒಡಿಯರ್, ನಿಂಗನಗೌಡ ಪಾಟೀಲ್, ತಾಲೂಕ ಕುರುಬ ಸಂಘದ ಅಧ್ಯಕ್ಷ ನಿಂಗಣ್ಣ ಬಿರಾದಾರ, ನಾಗು ಕೆರಿಗೊಂಡ, ಕನಕದಾಸ ಸಂಫಟನೆಯ ಅಧ್ಯಕ್ಷ ಶಿವಾನಂದ ಕೆರಿಗೊಂಡ, ಸಲೀಮ್ ಕಣ್ಣಿ, ಸೇರಿದಂತೆ ಸಂಘಟನಾ ಪದಾಧಿಕಾರಿಗಳು ಗ್ರಾಮಸ್ಥರು ಇದ್ದರು.

Latest News

ಖ್ಯಾತ ಖಳನಟ, ಪರಿಸರ ಪ್ರೇಮಿ ದಿ. ಎಂ ಪಿ ಶಂಕರ

ಕನ್ನಡ ಚಿತ್ರರಂಗದ ಹಿರಿಯ ನಟ ಪರಿಸರ ಪ್ರೇಮಿ ಪ್ರಾಣಿಪ್ರಿಯ ಖ್ಯಾತ ಖಳ ನಟ ಎಂ ಪಿ ಶಂಕರ ಚಲನ ಚಿತ್ರಗಳಲ್ಲಿ ಹಲವು ಹೊಸ ಪ್ರಯೋಗಗಳನ್ನು ಕಾಡು...

More Articles Like This

error: Content is protected !!
Join WhatsApp Group