spot_img
spot_img

ಚೌಡಯ್ಯನವರ ವಚನಗಳಲ್ಲಿ ಸರ್ವರಿಗೂ ಸಮಬಾಳು – ಜ್ಞಾನ ಪ್ರಕಾಶ ಶ್ರೀಗಳು

Must Read

ಸಿಂದಗಿ: ಶತಶತಮಾನಗಳಿಂದ ಮಳೆಯಿಂದ ಬೆಂದವರು ನಾವು ನೊಂದವರು ನಾವು ಇಂತಹ ಕೆಳಗಿದ್ದ ನೊಂದ ಬೆಂದ ಎಲ್ಲ ಜನರನ್ನು ಎತ್ತಿ ಹಿಡಿದ ಧರ್ಮ ಯಾವುದಾದರು ಧರ್ಮವಿದ್ದರೆ ಅದು ಸಂವಿಧಾನ ಧರ್ಮವಾಗಿದೆ ಸಂವಿಧಾನ ಒಂದು ಇಲ್ಲದಿದ್ದರೆ ಇನ್ನೂ 8ನೂರು ವರ್ಷಗಳ ಕಾಲ ಹಿಂದೆ ಬಿಳಬೇಕಾಗಿತ್ತು ಅದನ್ನು ಅಂಬಿಗರ ಚೌಡಯ್ಯನವರು ವಚನಗಳ ಮೂಲಕ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ನೀಡಿ ಮಹಾನ ದೊಡ್ಡ ಕ್ರಾಂತಿಯನ್ನು ಹಬ್ಬಿಸಿದ್ದಾರೆ ಕಾರಣ ಅವರ ವಚನಗಳನ್ನು ಜೀವನದಲ್ಲಿ ಅಳವಡಿಸಿಕೊಂಡಿದ್ದಾದರೆ ಜೀವನ ಸಾರ್ಥಕವಾಗುತ್ತದೆ ಎಂದು ಮೈಸೂರು ಉರಲಿಂಗ ಪೆದ್ದಿ ಗುರುಪೀಠದ ಪೂಜ್ಯ ಶ್ರೀ ಜ್ಞಾನ ಪ್ರಕಾಶ ಸ್ವಾಮೀಜಿ ಹೇಳಿದರು.

ಪಟ್ಟಣದ ಸಂಗಮೇಶ್ವರ ದೇವಸ್ಥಾನದ ಆವರಣದಲ್ಲಿ ಗುರುದೇವಾಶ್ರಮದ ಡಾ. ಶಾಂತಗಂಗಾಧರ ಸ್ವಾಮಿಗಳ 75ನೇ ವರ್ಷ ಅಮೃತ ಮಹೋತ್ಸವದ ನಿಮಿತ್ತ ಹಮ್ಮಿಕೊಂಡ ಸರ್ವಧರ್ಮ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿ, ಏನಾದರು ಆಗು ಮೊದಲು ಮಾನವನಾಗು ಎನ್ನುವ ನಾಣ್ನುಡಿಯಂತೆ ಮಾನವಧರ್ಮ ದೊಡ್ಡದಲ್ಲ ಮಾನವೀಯತೆ ದೊಡ್ಡದು ಎಂಬ ಸಂದೇಶವನ್ನು ಈ ಜಗತ್ತಿಗೆ ಈ ಸಮಾವೇಶದ ಮೂಲಕ ರವಾನೆ ಮಾಡಬೇಕಾಗಿದೆ ಬುದ್ಧ, ಬಸವ ಅಂಬೇಡ್ಕರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆ ಹೊರತು ಆಯುಧಗಳೇ ಆದರ್ಶವಾಗಬಾರದು. ಭಾರತ ಒಂದು ಭಾರತೀಯರೆಲ್ಲರು ಒಂದು ಎನ್ನುವ ಸಂದೇಶದಲ್ಲಿ ಬಾಳಬೇಕು ಅಂದಾಗ ಸರ್ವಧರ್ಮಗಳು ಮಾನವೀಯ ಸಾಗರದೊಳಗೆ ಸೇರುತ್ತವೆ. ಆದರ್ಶದ ಭಾರತದಲ್ಲಿ ಜಾತಿ, ವರ್ಗ, ರಹಿತ ನಾವೆಲ್ಲ ಮಾನವರು ಒಂದು ಎನ್ನುವಂತೆ ಪ್ರಮಾಣ ಮಾಡಬೇಕು ಸರ್ವಧರ್ಮಗಳು ಮಾನವೀಯ ನೆಲಗಟ್ಟಿನ ಮೇಲೆ ಬದುಕಿ ಬಾಳಬೇಕು ಎನ್ನುವ ಸಂಕಲ್ಪವನ್ನು ಹೊರಬೇಕಾಗಿದೆ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ದಸಂಸನ ರಾಜ್ಯ ಸಂಚಾಲಕ ಡಾ. ಡಿ.ಜಿ.ಸಾಗರ ಮಾತನಾಡಿ, ಶರಣರ ವಚನಗಳ ಮೂಲಕ ಸಾರಿದ ಮಹಾನ ಚೇತನ ಡಾ. ಶಾಂತಗಂಗಾದರ ಸ್ವಾಮಿಗಳು ಅವರ 75ವರ್ಷದ ಜೀವನದಲ್ಲಿ 33 ವಚನ ಗ್ರಂಥಗಳನ್ನು ರಚಿಸಿದ್ದಾರೆ ಅವರ ಗ್ರಂಥಗಳು ಪ್ರಚಲಿತವಾಗಬೇಕಾದರೆ ಎಲ್ಲರು ಓದಿ ಜ್ಞಾನ ಆಸಕ್ತರಾಗಬೇಕು. ಶರಣರ ವಚನಗಳು ಮನೆ ಮನೆಗೆ ಬಿತ್ತರಿಸಬೇಕು ಎಂದು ಚಿತ್ರದುರ್ಗ ಡಾ, ಮುರಘಾ ಶರಣರು ಜಾತಿಗೊಂದು ಸ್ವಾಮಿಗಳನ್ನು ಹುಟ್ಟು ಹಾಕಿದ್ದ ಶ್ಲ್ಯಾಘನಾರ್ಹ ಕಾರ್ಯವಾಗಿದೆ ಎಂದು ಅಭಿಮತ ವ್ಯಕ್ತಪಡಿಸಿದರು.

ಸಾನ್ನಿಧ್ಯ ವಹಿಸಿದ ವಿಜಯಪುರ ಜ್ಞಾನ ಯೋಗಾಶ್ರಮ ಅಧ್ಯಕ್ಷ ಶ್ರೀ ಬಸವಲಿಂಗ ಸ್ವಾಮಿಗಳು, ತೋನಸನಹಳ್ಳಿ (ಎಸ್) ಅಲ್ಲಮ ಪ್ರಭು ಗುರುಪೀಠ ಶ್ರೀ ಮಲ್ಲಣ್ಣಪ್ಪ ಮಹಾಸ್ವಾಮಿಗಳು, ನಾ| ಅಲ್ವಿನ್ ಡಿಸೋಜಾ ನಿರ್ದೇಶಕರು ಸಂಗಮ ಸಂಸ್ಥೆ, ನರಸಿಪುರ ಅಂಬಿಗರ ಚೌಡಯ್ಯ ಗುರುಪೀಠದ ಶ್ರೀರಾಂತಭೀಷ್ಮ ಚೌಡಯ್ಯ ಸ್ವಾಮಿಜಿಗಳು, ಶ್ರೀ ಸಿದ್ಧಬಸವ ಕಬೀರ ಸ್ವಾಮಿಗಳು ಮರುಳ ಶಂಕರ ಪೀಠ ಚಿಗರಳ್ಳಿ ಕ್ರಾಸ್, ಶ್ರೀ ಗುರುಲಿಂಗ ಜಂಗಮ ಮಹಾರಾಜರು ರಾಯಲಿಂಗೇಶ್ವರ ಮಠ ಕಕಮರಿ, ಅಧ್ಯಕ್ಷತೆ ವಹಿಸಿದ ಮಾಜಿ ಶಾಸಕ ಶರಣಪ್ಪ ಸುಣಗಾರ ಮಾತನಾಡಿದರು.

ಹಜರತ್ ಸಯ್ಯದ ಮುಸ್ತಾಫ ಖಾದ್ರಿ ಸಜ್ಜಾದೆ ಮಳಖೇಡ ತಾ. ಚಿತ್ತಾಪೂರ, ಅನ್ನದಾನಿ ಭಾರತಿ ಸ್ವಾಮಿಗಳು ಹಡಪದ ಅಪಣ್ಣ ಗುರುಪೀಠ ತಂಗಡಗಿ, ಶ್ರೀ ಅಭಿನವ ಪುಂಡಲಿಂಗ ಮಹಾರಾಜರು ಸುಕ್ಷೇತ್ರ ಗೊಳಸಾರ, ಶರಣಬಸವ ಶರಣರು ಹೂಗಾರ ಗುರುಪೀಠ ಚಿಂಚೊಳ್ಳಿ, ಶ್ರೀ ಬಸವ ಗುಂಡಯ್ಯ ಸ್ವಾಮಿಗಳು ಕುಂಬಾರ ಗುರುಪೀಠ ತೆಲಸಂಗ, ಬಸವಕುಮಾರ ಸ್ವಾಮಿಗಳು ಗಾಣಿಗ ಗುರುಪೀಠ ವಿಜಯಪುರ, ಬಸವ ಮಾಚಿದೇವ ಸ್ವಾಮಿಗಳು ಮಡಿವಾಳ ಗುರುಪೀಠ ಚಿತ್ರದುರ್ಗ ಸೇರಿದಂತೆ ಅನೇಕರು ವೇದಿಕೆ ಮೇಲಿದ್ದರು.

ಕಾರ್ಯಕ್ರಮಕ್ಕೂ ಮುನ್ನ ಸ್ಥಳಿಯ ಡಾ|| ಬಾಬಾಸಾಹೇಬ ಅಂಬೇಡ್ಕರರವರ ವೃತ್ತದಿಂದ ಟಿಪ್ಪು ಸುಲ್ತಾನ ವೃತ್ತದ ಮಾರ್ಗವಾಗಿ ಪೂಜ್ಯರ ಮೆರವಣಿಗೆ, ಸಕಲ ವಾಧ್ಯದೊಂದಿಗೆ, ಕುಂಭಮೇಳದೊಂದಿಗೆ ನಗರದ ಹಳೆ ಬಜಾರ ರಸ್ತೆಯಿಂದ ಸಂಗಮೇಶ್ವರ ದೇವಸ್ಥಾನದ ವರೆಗೆ ಭವ್ಯ ಮೆರವಣಿಗೆ ಜರುಗಿತು.

ತಳವಾರ-ಪರಿವಾರ ಹಿತರಕ್ಷಣಾ ಸಮಿತಿ ರಾಜ್ಯಾದ್ಯಕ್ಷ ಶಿವಾಜಿ ಮೆಟಗಾರ ಸ್ವಾಗತಿಸಿದರು. ದಸಂಸ ಜಿಲ್ಲಾ ಸಂಚಾಲಕ ವೈ.ಸಿ.ಮಯೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಟೀಪ್ಪು ಸೇನೆಯ ರಾಜ್ಯ ಪ್ರ.ಕಾರ್ಯದರ್ಶಿ ಡಾ. ದಸ್ತಗೀರ ಮುಲ್ಲಾ, ಕೊಲಿ ಸಮಾಜ ನೌಕರರ ತಾಲೂಕಾದ್ಯಕ್ಷ ರಾಜಶೇಖರ ನರಗೋದಿ ನಿರೂಪಿಸಿದರು. ಹಾಲುಮತ ಸಮಾಜದ ತಾಲೂಕಾಧ್ಯಕ್ಷ ನಿಂಗಣ್ಣ ಬಿರಾದಾರ ವಂದಿಸಿದರು.

- Advertisement -
- Advertisement -

Latest News

ವಿರಾಟಪುರ ವಿರಾಗಿ ಚಿತ್ರದ ವಾಲ್ ಪೋಸ್ಟರ್ ಬಿಡುಗಡೆ

ಸಿಂದಗಿ: ಹಾನಗಲ್ಲ ಗುರುಕುಮಾರ ಮಹಾಸ್ವಾಮಿಗಳವರ ಉಸಿರೇ ಸಮಾಜವಾಗಿತ್ತು ತಮ್ಮ ಬಗ್ಗೆ ಕಿಂಚಿತ್ತೂ ವಿಚಾರ ಮಾಡಿದವರಲ್ಲ ಎಂದು ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ಹೇಳಿದರು. ಪಟ್ಟಣದ ಸಾರಂಗಮಠದಲ್ಲಿ ಹಾನಗಲ್ಲ ಶ್ರೀ...
- Advertisement -

More Articles Like This

- Advertisement -
close
error: Content is protected !!