ಬೀದರ: ಬೀದರ ಲೋಕಸಭೆ ಚುನಾವಣೆ ಕಣಕ್ಕೆ ಶ್ರೀ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿಗಳು ದುಮುಕುವ ಇಚ್ಛೆ ವ್ಯಕ್ತಪಡಿಸಿದಾರೆ.
ಈಗಾಗಲೇ ಬೀದರ್ ಲೋಕಸಭೆ ಕ್ಷೇತ್ರದ ಸಂಸದ, ಕೇಂದ್ರ ಸಚಿವ ಭಗವಂತ ಖೂಬಾ ಅವರ ವಿರುದ್ಧ ಸ್ವಪಕ್ಷದವರಿಂದಲೇ ಅಪಸ್ವರ ಹೆಚ್ಚಾಗುತ್ತಿರುವ ನಡುವೆ ಆಕಾಂಕ್ಷಿಗಳ ಪಟ್ಟಿ ಕೂಡ ಹೆಚ್ಚಾಗುತ್ತಿದೆ,. ಬಿಜೆಪಿ ಪಕ್ಷ ಒಂದು ವೇಳೆ ಅಭ್ಯರ್ಥಿ ಬದಲಾಯಿಸುವುದೇ ಆದಲ್ಲಿ ನಾನು ಕೂಡ ಟಿಕೆಟ್ ಆಕಾಂಕ್ಷಿಯಾಗಿದ್ದೆನೆಂದು ಹಾವಗಿ ಮಠದ ಶ್ರೀ ಡಾ.ಶಿವಾನಂದ ಸ್ವಾಮಿಗಳು ಅಪೇಕ್ಷೆ ವ್ಯಕ್ತಪಡಿಸಿದಾರೆ.
ಔರಾದ್ ತಾಲೂಕಿನ ಡೊಂಗಾವ್ ಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು ಸನಾತನ ಧರ್ಮಕ್ಕಾಗಿ ಮಠಾಧೀಶರು ರಾಜಕೀಯಕ್ಕೆ ಬರಬೇಕಾದ ಅನಿವಾರ್ಯತೆ ಇದೆ.
ಈಗಾಗಲೇ ತಮಿಳುನಾಡಿನ ಎಂ.ಕೆ.ಸ್ಟಾಲಿನ್ ಮಗ ಉದಯನಿಧಿ ಸನತಾನದ ಧರ್ಮ ವಿರುದ್ಧ ಹೇಳಿಕೆ ನೀಡಿದ್ದು ಎಲ್ಲರಿಗೂ ಗೊತ್ತಿದೆ. ದೇಶ ಉಳಿಯಬೇಕಾದರೇ ಸರ್ವರನ್ನು ಸಮಾನವಾಗಿ ಕಾಣುವ ಸನಾತನ ಧರ್ಮ ಉಳಿಯಬೇಕಾದರೆ ಮಠಾಧೀಶರು ರಾಜಕೀಯಕ್ಕೆ ಬರುವುದು ಅನಿವಾರ್ಯವಾಗಿದೆ ಎಂದು ಸ್ವಾಮೀಜಿ ಹೇಳಿದರು.
ಈಗಾಗಲೇ ಕೇಂದ್ರದ ಹಲವು ನಾಯಕರು, ಆರ್ಎಸ್ಎಸ್ ಮುಖಂಡರು, ವಿಎಚ್ ಪಿ ಸೇರಿದಂತೆ ಹಲವರನ್ನು ಭೇಟಿ ಮಾಡಲಾಗಿದೆ ಎಲ್ಲರೂ ನಮಗೆ ಒಳ್ಳೆಯ ರೆಸ್ಪಾನ್ ಮಾಡುತ್ತಿದ್ದಾರೆ,. ನಾವು ಭಗವಂತ ಖೂಬಾರಿಗೂ ವಿರೋಧ ಮಾಡುತ್ತಿಲ್ಲ ಆದರೆ ನಮಗೆ ಟಿಕೆಟ್ ಕೊಟ್ಟರೆ ಮತ್ತಷ್ಟು ಸೇವೆ ಮಾಡುತ್ತೇವೆ, ಹಿಂದೂ ಧರ್ಮ ಉಳಿಸುತ್ತವೆಂದು ಶಿವಾನಂದ ಶಿವಾಚಾರ್ಯರು ಹೇಳಿದರು.
ವರದಿ: ನಂದಕುಮಾರ ಕರಂಜೆ, ಬೀದರ