ಮೂಡಲಗಿ:ತಾಲೂಕಿನ ಯಾದವಾಡ ಗ್ರಾಮದಲ್ಲಿ ಹೋಳಿ ಹಬ್ಬದ ನಿಮಿತ್ತವಾಗಿ ಹಿಂದೂ ಜಾಗರಣ ವೇದಿಕೆಯವರಿಂದ ಆಯೋಜಿಸಿರುವ “ಹಲಗೆ ಹಬ್ಬ”ವು ಅತಿ ವಿಜೃಂಭಣೆಯಿಂದ ಜರುಗಿತು.
ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಗ್ರಾಮದಲ್ಲಿ ಹಲಗೆ ಹಬ್ಬವನ್ನು ಆಯೋಜನೆ ಮಾಡಿದ್ದು ಈ ಕಾರ್ಯಕ್ರಮದಲ್ಲಿ ಬೇರೆ ಬೇರೆ ಜಿಲ್ಲೆಯಿಂದ ಹಲಗೆ ತಂಡದವರು, ಜಾಂಜ್ ಪಥ, ಡೊಳ್ಳು ಕುಣಿತ, ಗೊಂಬೆ ಕುಣಿತ ಮತ್ತು ಇನ್ನು ಅನೇಕ ಕಲಾತಂಡಗಳು ಭಾಗವಹಿಸಿ ಭಾರೀ ವಿಜೃಂಭಣೆ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ ಯಾದವಾಡ ಶ್ರೀಗಳಾದ ಸಿದ್ದೇಶ್ವರ ಮಹಾಸ್ವಾಮೀಜಿ ಮಾತನಾಡಿ, ಗ್ರಾಮದಲ್ಲಿ ಯಾವುದೇ ಕಾರ್ಯಕ್ರಮ ನಡೆಯಲಿ, ಅಚ್ಚುಕಟ್ಟಾಗಿ ನಡೆಸುತ್ತಿರುವುದು ತುಂಬಾ ಸಂತೋಷದ ವಿಷಯ. ಸನಾತನ ಧರ್ಮ ಮತ್ತು ಧಾರ್ಮಿಕ ಆಚರಣೆಗಳಿಗೆ ಗ್ರಾಮದ ಯುವಕರು ಒಂದಾಗಿ ಕಾರ್ಯಕ್ರಮ ಮಾಡುವುದರಿಂದ ಇಂಥ ಕಾರ್ಯಕ್ರಮಗಳು ಯಶಸ್ವಿಗೆ ಕಾರಣವಾಗುತ್ತವೆ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕಲ್ಮೇಶ ಗಾಣಿಗಿ ಹಲಗೆ ಬಾರಿಸುವ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಯಾವುದೇ ಧರ್ಮದ ಆಚರಣೆಗಳು ಹಾಗೂ ಆಯಾ ಧರ್ಮಕ್ಕೆ ಸೀಮಿತ ಆಗಬಾರದು ಎಲ್ಲ ಧರ್ಮದವರು ಕೂಡಿಕೊಂಡು ಆಚರಿಸುವ ಹಬ್ಬವೇ ನಿಜವಾದ ಸನಾತನ ಧರ್ಮದ ಹಬ್ಬವಾಗುತ್ತದೆ. ನಾವು ಆಚರಿಸುವ ಹಬ್ಬವು ಬೇರೆ ಯಾರಿಗೆ ತೊಂದರೆ ನೀಡದೆ ಒಳ್ಳೆಯ ರೀತಿಯಲ್ಲಿ ಆಚರಿಸಲಾಗಿದೆ ಇದನ್ನು ಆಯೋಜಿಸಿದ ಎಲ್ಲ ಯುವಕರಿಗೆ ಧನ್ಯವಾದಗಳು ಹೇಳಿದರು.
ಈ ಸಂದರ್ಭದಲ್ಲಿ ಯುವ ಮುಖಂಡರಾದ ಸುನೀಲ ನ್ಯಾಮಗೌಡ್ರು ಮಾತನಾಡಿ ಈಗಿನ ಆಧುನಿಕ ಯುಗದಲ್ಲಿ ಇಂತಹ ಹಬ್ಬಗಳು ಕಡಿಮೆಯಾಗುತ್ತಿದ್ದು ಆದರೆ ನಮ್ಮೂರಿನ ಯುವಕರು ಎಲ್ಲ ಹಬ್ಬಗಳು ಆಚರಿಸುತ್ತಿರುವುದರಿಂದ ತುಂಬಾ ಸಂತೋಷದ ವಿಷಯ. ಇಂತಹ ಹಬ್ಬಗಳಿಗೆ ಮತ್ತು ಆಚರಣೆಗೆ ಸದಾ ನಿಮ್ಮ ಜೊತೆ ಇರುವೆ ಎಂದು ಹೇಳಿದರು.
ಮುಖಂಡರಾದ ಸಂಗಮೇಶ ಕತ್ತಿ ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ಮಾತ್ರ ಇಂಥ ಹಬ್ಬಗಳನ್ನು ಆಚರಿಸಲಾಗುವುದು ಇದೇ ಪರಂಪರೆಯನ್ನು ಇಂದಿನ ನಮ್ಮ ಜನಾಂಗಕ್ಕೆ ಪರಿಚಯ ಇಟ್ಟುಕೊಂಡು ಹೋಗುತ್ತಿರುವುದು ನನಗೆ ಸಂತೋಷವಾಗಿದೆ ಎಂದರು.
ಜಾಗರಣ ಘಟಕದ ಪದಾಧಿಕಾರಿಗಳಾದ ಸುನೀಲ ಕದಂ, ರವಿ ಚಿಪ್ಪಲಕಟ್ಟಿ, ಸುನೀಲ ಮಿರ್ಜಿ, ಈರಣ್ಣ ಮುದ್ದಾಪುರ, ಮನೋಜ ಮಾಲಿಂಗಪುರ, ಮತ್ತು ಇನ್ನು ಅನೇಕ ಮುಖಂಡರು ಭಾಗವಹಿಸಿದ್ದರು. ರಾಜು ಬಳಿಗಾರ ಸ್ವಾಗತಿಸಿದರು, ಮಹಾದೇವ ಗಾಣಿಗೇರ ವಂದಿಸಿದರು.